Chamarajanagara: ಮತ್ತಷ್ಟುಅಪಘಾತ ಮುನ್ನ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಲಿ

By Kannadaprabha News  |  First Published Nov 17, 2022, 12:45 PM IST

 ಅರೇಪುರ-ತೊಂಡವಾಡಿ ಗೇಟ್‌ ನಡುವಿನ (ಮೈಸೂರು-ಊಟಿ ಹೆದ್ದಾರಿ) ಸೇತುವೆಯ ಮಧ್ಯೆ ರಸ್ತೆ ಕುಸಿದು ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಕನ್ನಡಪ್ರಭ 8 ರಂದು ವರದಿ ಪ್ರಕಟಿಸಿದರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಲಿಲ್ಲ.


 ಗುಂಡ್ಲುಪೇಟೆ (ನ.17) : ಅರೇಪುರ-ತೊಂಡವಾಡಿ ಗೇಟ್‌ ನಡುವಿನ (ಮೈಸೂರು-ಊಟಿ ಹೆದ್ದಾರಿ) ಸೇತುವೆಯ ಮಧ್ಯೆ ರಸ್ತೆ ಕುಸಿದು ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಕನ್ನಡಪ್ರಭ 8 ರಂದು ವರದಿ ಪ್ರಕಟಿಸಿದರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಲಿಲ್ಲ. ತಾಲೂಕು ಆಡಳಿತ ಸಾರ್ವಜನಿಕರ ಹಿತದೃಷ್ಟಿಯಿಂದಲಾದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷತ್ರ್ಯವಹಿಸಿದ ಪರಿಣಾಮ 13 ರ ಭಾನುವಾರ ರಸ್ತೆಯ ಹಳ್ಳ ಕಂಡು ಕಾರಿನ ಚಾಲಕ ದಿಢೀರ್‌ ಬ್ರೇಕ್‌ ಹಾಕಿದ ಹಿನ್ನೆಲೆ ಹಿಂದಿನಿಂದ ಬಂದ ಬೈಕ್‌ ಕಾರಿನ ಹಿಂಬದಿಗೆ ಗುದ್ದಿದೆ.

ಬೈಕ್‌ ಸವಾರ ಅದೃಷ್ಟಚೆನ್ನಾಗಿದ್ದ ಕಾರಣ ಸಣ್ಣ ಪುಟ್ಟಗಾಯವಾಗಿದೆ. ಕಾರಿನ ಹಿಂಬದಿ ನಜ್ಜು ನುಜ್ಜಾಗಿದೆ. ರಸ್ತೆ ಕುಸಿದ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಬಂದರೂ ತಾಲೂಕು ಆಡಳಿತ ಕ್ರಮವಹಿಸದೆ ಇರುವುದೇ ಇಂಥ ಅವಘಡ ಸಂಭವಿಸಲು ಕಾರಣ ಎಂದು ಸಾರ್ವಜನಿಕರು ಹಾಗೂ ಸವಾರರು ಆಕ್ರೋಶ ಹೊರ ಹಾಕಿದರು.

Tap to resize

Latest Videos

undefined

Chamarajanagar : ಅರೇಪುರ - ತೊಂಡವಾಡಿ ಗೇಟ್‌ ನಡುವೆ ರಸ್ತೆ ಕುಸಿತ

ರಸ್ತೆ ಹಳ್ಳ ಬಿದ್ದ ಕಾರಣ ಕಾರು ದಿಢೀರ್‌ ನಿಧಾನ ಆದ ಕಾರಣ ಹಿಂಬದಿಯ ಬೈಕ್‌ ಸವಾರ ಗುದ್ದಿದ್ದಾನೆ. ಈ ರೀತಿ ದಿನ ನಿತ್ಯಈ ಸೇತುವೆ ನಡೆಯುತ್ತಲೇ ಇದ್ದರೂ ತಾಲೂಕು ಆಡಳಿತಕ್ಕೆ ಮಾನ, ಮರ್ಯಾದೆ ಇಲ್ಲದಂತೆ ನಡೆದುಕೊಳ್ಳುತ್ತಿದೆ ಎಂದು ಜನರು ಕಿಡಿ ಕಾರಿದ್ದಾರೆ. ಕೇರಳ, ತಮಿಳುನಾಡು ಹಾಗೂ ಇತರೆ ರಾಜ್ಯಗಳ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ವಾಹನಗಳ ಚಾಲಕರಿಗೆ ರಸ್ತೆಯ ಪರಿಚಯ ಇಲ್ಲದ ಕಾರಣ ಕುಸಿದ ಸ್ಥಳದಲ್ಲಿ ಹಳ್ಳಕ್ಕೆ ವಾಹನ ಬಿಟ್ಟು ಬೈದು ಕೊಂಡು ತೆರಳುತ್ತಿದ್ದಾರೆ.

ಸತ್ತು ಹೋಗಿದೆಯಾ?: ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಮೈಸೂರು-ಊಟಿ ಹೆದ್ದಾರಿಯಲ್ಲಿ ಕಡಕೊಳ ಹಾಗೂ ಕನ್ನೇಗಾಲ ಬಳಿ ವಾಹನಗಳಿಗೆ ಟೋಲ್‌ ಕಲೆಕ್ಟ್ ಮಾಡುತ್ತಿದೆ. ರಸ್ತೆ ಟೋಲ್‌ ಕಲೆಕ್ಟ್ ಮಾಡಿದ ಮೇಲೆ ರಸ್ತೆಯ ನಿರ್ವಹಣೆ ಮಾಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸತ್ತು ಹೋಗಿದೆಯಾ ಎಂದು ಕಾಂಗ್ರೆಸ್‌ ವಕ್ತಾರ ಆರ್‌.ಎಸ್‌.ನಾಗರಾಜು ಪ್ರಶ್ನಿಸಿದ್ದಾರೆ.

ಶಾಸಕರೇ ಹಳ್ಳ ಮುಚ್ಚಿಸಿ: ಕ್ಷೇತ್ರದ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ವಾರದಲ್ಲಿ ಮೂರ್ನಾಲ್ಕು ದಿನ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಶಾಸಕರ ಕಾರು ಹಳ್ಳಕ್ಕೆ ಬಿದ್ದು ಸದ್ದು ಮಾಡುತ್ತದೆ. ಕುಸಿದ ರಸ್ತೆಯ ಹಳ್ಳ ಮುಚ್ಚಿಸುವ ಕೆಲಸ ಮಾಡುವರೋ ಎಂದು ಜನರು ನಿರೀಕ್ಷೆಯಲ್ಲಿದ್ದಾರೆ.

ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಕೈಬಿಡಲು ಒತ್ತಾಯ: ರೈತ ಸಂಘ ಪ್ರತಿಭಟನೆ

..ಮೈಸೂರು-ಊಟಿ ಹೆದ್ದಾರಿಯ ಅರೇಪುರ-ತೊಂಡವಾಡಿ ಗೇಟ್‌ ಬಳಿಯ ಸೇತುವೆ ಬಳಿ ರಸ್ತೆ ಅರ್ಧ ಅಡಿ ಕುಸಿದಿದೆ. ಕುಸಿತಗೊಂಡ ರಸ್ತೆಯ ದುರಸ್ಥಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮುಂದಾಗಿಲ್ಲ. ಹಳ್ಳದಿಂದ ಅಪಘಾತಗಳು ನಡೆದಿವೆ. ಮತ್ತಷ್ಟುಅವಘಡ ತಪ್ಪಿಸಲು ಕುಸಿದ ಹಳ್ಳ ಮುಚ್ಚಿಸಲು ತಾಲೂಕು ಆಡಳಿತ ಮುಂದಾಗಲಿ.

-ಬಿ.ಜಿ.ಶಿವಕುಮಾರ್‌, ಗ್ರಾ.ಪಂ ಅಧ್ಯಕ್ಷರು.

click me!