ಮೆಣಸಿನಕಾಯಿ ಖರೀದಿಸಿ 35 ಲಕ್ಷ ಪಂಗನಾಮ: ಕಂಗಾಲಾದ ವ್ಯಾಪಾರಿ

Kannadaprabha News   | Asianet News
Published : Mar 13, 2020, 08:37 AM IST
ಮೆಣಸಿನಕಾಯಿ ಖರೀದಿಸಿ 35 ಲಕ್ಷ ಪಂಗನಾಮ: ಕಂಗಾಲಾದ ವ್ಯಾಪಾರಿ

ಸಾರಾಂಶ

35 ಲಕ್ಷ ಮೌಲ್ಯದ ಮೆಣಸಿನಕಾಯಿ ಖರೀದಿಸಿ ಮೋಸ| ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ಘಟನೆ| ಹರಿಯಾಣದ ಗುರುಗ್ರಾಮ ಜಿಲ್ಲೆ ಸೋಹ್ನಾದ ವ್ಯಾಪಾರಿಗಳಿಂದ ವಂಚನೆ|  

ಹಾವೇರಿ(ಮಾ.13): ಹರಿಯಾಣ ರಾಜ್ಯದ ಗುರುಗ್ರಾಮ ಜಿಲ್ಲೆ ಸೋಹ್ನಾದ ವ್ಯಾಪಾರಿಗಳಿಬ್ಬರು ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಯಿಂದ 34.97 ಲಕ್ಷ ಮೌಲ್ಯದ 348.11 ಕ್ವಿಂಟಲ್ ಮೆಣಸಿನಕಾಯಿ ಖರೀದಿಸಿ ಹಣ ಕೊಡದೇ ಮೋಸ ಮಾಡಿರುವ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬ್ಯಾಡಗಿ ಎಪಿಎಂಸಿಯ ವ್ಯಾಪಾರಿ ವೀರೇಶ ಸಿದ್ದಪ್ಪ ಭಾಗೋಜಿ ಮೋಸ ಹೋದವರು. ಹರಿಯಾಣದ ಹೇಮಂತ ವಿನೋದಕುಮಾರ ಬನಸಾಲ್, ನಿಖಿಲ್ ವಿನೋದಕುಮಾರ ಬನಸಾಲ್ ಮೋಸ ಮಾಡಿದವರು. ಫೆ. 8ರಂದು ಭಾಗೋಜಿ ಅವರಿಂದ ಅಂದಾಜು 34 ಲಕ್ಷ ಮೌಲ್ಯದ ಮೆಣಸಿನಕಾಯಿ ಖರೀದಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹರಿಯಾಣಕ್ಕೆ ಹೋಗಿ ಡಿಲೆವರಿ ಪಡೆದ ಕೂಡಲೇ ಹಣವನ್ನು ಡಿಡಿ ಅಥವಾ ಆರ್‌ಟಿಜಿಎಸ್ ಮಾಡುವುದಾಗಿ ತಿಳಿಸಿದ್ದರು. ಫೆ. 12ರಂದು ಮೆಣಸಿನಕಾಯಿ ಪಡೆದುಕೊಂಡಿದ್ದು, ಹಣ ಕೇಳಿದರೆ ಕೊಡದೇ ಮೋಸ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಭಾಗೋಜಿ ತಿಳಿಸಿದ್ದಾರೆ.
 

PREV
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!