ಕಾಲರಾ : ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್‌ಗೆ ಭಾರಿ ದಂಡ

Kannadaprabha News   | Asianet News
Published : Mar 13, 2020, 08:30 AM IST
ಕಾಲರಾ :  ಸ್ವಚ್ಛತೆ ಕಾಪಾಡಿಕೊಳ್ಳದ  ಹೋಟೆಲ್‌ಗೆ ಭಾರಿ ದಂಡ

ಸಾರಾಂಶ

ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಅನೇಕ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. 

ಬೆಂಗಳೂರು [ಮಾ.13]:  ಕಾಲರಾ ನಿಯಂತ್ರಣಕ್ಕೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕಳೆದ ಮೂರು ದಿನಗಳಿಂದ ನಗರದ ಬೀದಿ ಬದಿ ತೆರೆದಿಟ್ಟು ಆಹಾರ ಮಾರಾಟ ಮಳಿಗೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರ ವಿವಿ ಪುರದ 23 ಹೋಟೆಲ್‌ಗಳನ್ನು ಪರಿಶೀಲನೆ ಮಾಡಿ 13 ಹೋಟೆಲ್‌ ಮಾಲಿಕರಿಗೆ .65,500 ದಂಡ ವಿಧಿಸಿದ್ದಾರೆ.

ಕಾಲರಾ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೋಟೆಲ್‌ಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟಹಾಗೂ ನೀರಿನ ಶುದ್ಧತೆ ಪರಿಶೀಲಿಸಲು ದಿಢೀರ್‌ ತಪಾಸಣೆ ನಡೆಸುತ್ತಿದ್ದಾರೆ.

ಬೆಂಕಿಯಿಂದ ಬಾಣಲೆಗೆ: ಬೆಂಗಳೂರಿನಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೆ!. 

ಬುಧವಾರ ತಡರಾತ್ರಿ ವಿವಿಪುರದ 23 ಹೋಟೆಲ್‌ಗಳಿಗೆ ಪಾಲಿಕೆಯ ಆರೋಗ್ಯಾಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘಿಸಿ ಸ್ವಚ್ಛತೆ ಕಾಪಾಡಿಕೊಳ್ಳದ 13 ಹೋಟೆಲ್‌ ಮಾಲಿಕರಿಗೆ .65,500 ದಂಡ ವಿಧಿಸಿದ್ದಾರೆ. ಅಲ್ಲದೆ, 13 ಹೋಟೆಲ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ