ಅನುದಾನ ತಂದು ಅಭಿವೃದ್ಧಿ ಮಾಡಿದ ಹರ್ಷವರ್ಧನ್‌ : ಶ್ರೀನಿವಾಸಪ್ರಸಾದ್‌ ಶ್ಲಾಘನೆ

By Kannadaprabha News  |  First Published Mar 26, 2023, 6:36 AM IST

  ಕ್ಷೇತ್ರದಲ್ಲಿ ಶಾಸಕ ಬಿ. ಹರ್ಷವರ್ಧನ್‌ ಸರ್ಕಾರದ ಜೊತೆಗೆ ಹೋರಾಟ ನಡೆಸಿ ಸುಮಾರು 750 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಪರ್ವವನ್ನೇ ಮಾಡಿದ್ದಾರೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಹೇಳಿದರು.


 ನಂಜನಗೂಡು :  ಕ್ಷೇತ್ರದಲ್ಲಿ ಶಾಸಕ ಬಿ. ಹರ್ಷವರ್ಧನ್‌ ಸರ್ಕಾರದ ಜೊತೆಗೆ ಹೋರಾಟ ನಡೆಸಿ ಸುಮಾರು 750 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಪರ್ವವನ್ನೇ ಮಾಡಿದ್ದಾರೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಹೇಳಿದರು.

ಯಡಿಯಾಲ ಗ್ರಾಮದಲ್ಲಿ ಸಂಸದರ ನಿಧಿಯಿಂದ 62 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತವಾದ ನೂತನ ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ಮತ್ತು 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಶ್ವಕರ್ಮ ಭವನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

Latest Videos

undefined

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೋರಾಟದ ಫಲವಾಗಿ ಶೋಷಿತ ಸಮುದಾಯಗಳು ಅಧಿಕಾರ ಅನುಭವಿಸುವಂತಾಗಿದೆ. ಶೋಷಿತ ಸಮುದಾಯಗಳು ಯಾವ ರೀತಿ ಬದುಕು ನಡೆಸಬೇಕು ಎಂಬದನ್ನು ಅಂಬೇಡ್ಕರ್‌ ತೋರಿಸಿಕೊಟ್ಟಿದ್ದಾರೆ. ಎಲ್ಲ ಜನಾಂಗದವರೂ ಅಂಬೇಡ್ಕರ್‌ ಅವರನ್ನು ಗೌರವಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ. ಎಂದರಲ್ಲದೆ ನಿಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ ಅವರ ಕಾಲ ಮೇಲೆ ಅವರು ನಿಲ್ಲುತ್ತಾರೆ ಎಂದರು.

ಇತಿಹಾಸ ಬರೆದಿದ್ದೇನೆ:ನಾನು ಚುನಾವಣೆಗೆ ನಿಂತು 50 ವರ್ಷಗಳನ್ನು ಕಳೆದಿದ್ದೇನೆ. 14 ಚುನಾವಣೆ ಎದುರಿಸಿ ಸೋಲು ಗೆಲುವನ್ನು ಕಂಡಿದ್ದೇನೆ. ಸೋತಾಗ ಎಂದೂ ಎದೆಗುಂದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಚಾಮರಾಜನಗರ ಲೋಕಾಸಭಾ ಕ್ಷೇತ್ರದಿಂದ ಕಾಂಗ್ರೇಸ್‌, ಬಿಜೆಪಿ ಪಕ್ಷಗಳಿಂದ ಜಯಗಳಿಸಿದ್ದೇನೆ. ಜೆಡಿಯುನಿಂದ ಗೆದ್ದು ಕೇಂದ್ರ ಸಚಿವನಾಗಿದ್ದೇನೆ, ಜೆಡಿಎಸ್‌ನಿಂದ ಶಿವಣ್ಣ ಅವರನ್ನು ಗೆಲ್ಲಿಸುವ ಮೂಲಕ ಚಾಮರಾಜನಗರ ಕ್ಷೇತ್ರ ಶ್ರೀನಿವಾಸ್‌ ಪ್ರಸಾದ್‌ ಕ್ಷೇತ್ರ ಎಂಬ ಖ್ಯಾತಿಗೆ ಪಾತ್ರವಾಗಿ ಇತಿಹಾಸ ಬರೆದಿದ್ದೇನೆ. ಜೊತೆಗೆ ಅಷ್ಟೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿರುವುದರಿಂದ ನನಗೆ ಜನರ ಮತ ಪಡೆದು ಸಾರ್ಥಕವಾಯಿತು ಎಂಬ ಆತ್ಮತೃಪ್ತಿಯನ್ನು ಹೊಂದಿದ್ದೇನೆ ಎಂದರು.

ಶಾಸಕ ಬಿ. ಹರ್ಷವರ್ಧನ್‌ ಮಾತನಾಡಿ, ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ದಿ ಕೆಲಸಗಳೇ ನನಗೆ ಶ್ರೀರಕ್ಷೆಯಾಗಲಿದ್ದು. ನಾನು ಮತ್ತೊಮ್ಮೆ ಬಿಜೆಪಿ ಬಾವುಟ ಆರಿಸುವುದು ನಿಶ್ಚಿತ. ಕ್ಷೇತ್ರದಲ್ಲಿ ಅನುಕಂಪ ಕೆಲಸ ಮಾಡುವುದಿಲ್ಲ ಕಾಂಗ್ರೆಸ್‌ 25 ವರ್ಷದ ಅನುಭವ ಮತ್ತು ನನ್ನ ಕಳೆದ 5 ವರ್ಷದಲ್ಲಿ ಮಾಡಿರುವ ಅಭಿವೃದ್ದಿಯ ಸಾಧನೆಯಷ್ಟೇ ಪೈಪೋಟಿಗೆ ಬರಲಿದೆ ಎಂದರು.

ಬಿಜೆಪಿ ರಾಜ್ಯ ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಪಿ. ಮಹೇಶ್‌, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಅನುಪಮ ಹುರಾಗ್ರಾಪಂ ಅಧ್ಯಕ್ಷ ಚಂದ್ರು ಇದ್ದರು.

ನಿವೃತ್ತಿ ಘೋಷಿಸಿದ ಬಿಜೆಪಿ ಮುಖಂಡ

ಮೈಸೂರು (ಅ.18):  ಒಳ ಮೀಸಲಾತಿ ಹೆಸರಿನಲ್ಲಿ ದಲಿತರನ್ನು ಒಡೆಯುತ್ತಿದ್ದು, ಇದು ಬ್ರಿಟಿಷರ ನೀತಿಗಿಂತಲೂ ಅಪಾಯಕಾರಿ ಎಂದು ಚಾಮರಾಜನ ಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ. ಬಸವರಾಜು ಹಾಗೂ ಮುಕ್ತ ವಿವಿಯಿಂದ ಪಿಎಚ್‌.ಡಿ ಪದವಿ ಪಡೆದ ಡಾ. ಕಲ್ಯಾಣಸಿರಿ ಭಂತೇಜಿ ಅವರನ್ನು ಅಭಿನಂದಿಸಿ ಮಾತನಾಡಿದರು.

ವೋಟಿಗಾಗಿ ರಾಜಕಾರಣಿಗಳು ಮತ್ತು ರಾಜಕೀಯ (Politics ) ನಾಯಕರು ದಲಿತರನ್ನು (Dalit )  ಒಡೆಯುತ್ತಿದ್ದಾರೆ. ದಲಿತರನ್ನು ಎಡಗೈ, ಬಲಗೈ ಎಂದು ಒಡಕುಂಟು ಮಾಡಲಾಗುತ್ತಿದೆ. ಇದು ಮತ್ತೆ ಹಿಂದಕ್ಕೆ ಹೋಗುವ ಚಲನೆಯಂತೆ ಭಾಸವಾಗುತ್ತಿದೆ. ಮತಕ್ಕಾಗಿ ಈ ರೀತಿ ದಲಿತರನ್ನು ಒಡೆಯಬಾರದು. ಕೇವಲ ಅಸ್ಪೃಶ್ಯತೆ ನಿವಾರಿಸುವ ಮಾತುಗಳಿಂದ ಬದಲಾವಣೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ದೇಶದ ದಲಿತರ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಇಂದಿಗೂ ಹಳ್ಳಿಗಳಲ್ಲಿ ಪ್ರತ್ಯೇಕ ಕಾಲೋನಿಗಳಿವೆ. ನಗರಗಳಲ್ಲಿ ಸ್ಲಂಗಳಲ್ಲಿ ದಲಿತರು ಜೀವನ ನಡೆಸುತ್ತಿದ್ದಾರೆ. ಶಿಕ್ಷಣ, ಸಂಪತ್ತು, ಅಧಿಕಾರ ಇಲ್ಲದ ಈ ಸಮೂಹವನ್ನು ಯಾವ ರೀತಿ ಮುನ್ನೆಲೆಗೆ ತರಬೇಕು ಎಂಬುದರ ಕುರಿತು ಚರ್ಚಿಸಿರುವುದಾಗಿ ಅವರು ತಿಳಿಸಿದರು.

ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. 11 ರಲ್ಲಿ ಗೆಲುವು ಸಾಧಿಸಿದ್ದೇನೆ. ಸಂಸದನಾಗಿ 1.5 ವರ್ಷ ಪೂರ್ಣಗೊಳಿಸಿದರೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿಯಾಗುತ್ತೇನೆ ಎಂದರು.

click me!