58 ವರ್ಷದ ಯೋಗ ಗುರು, ಸ್ಫೋಟ್ಸ್ ಅಸೋಶಿಯೇಷನ್ ಜನರಲ್ ಸೆಕ್ರೆಟರಿ ವಿರುದ್ಧ 19 ವರ್ಷದ ಯುವತಿಯಿಂದ ಲೈಂಗಿಕ ಕಿರುಕುಳ ಆರೋಪ

Published : Sep 02, 2025, 05:53 PM IST
Yoga Association General Secretary Niranjan Murthy

ಸಾರಾಂಶ

೧೯ ವರ್ಷದ ಯುವತಿಯೊಬ್ಬರು ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಜನರಲ್ ಸೆಕ್ರೆಟರಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ೨೦೨೩ ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. 

ಬೆಂಗಳೂರು: 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ವಿರುದ್ಧ ದೂರು ದಾಖಲಾಗಿದೆ. ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಜನರಲ್ ಸೆಕ್ರೆಟರಿ ಮತ್ತು 58 ವರ್ಷದ ಡಾ. ಎಂ. ನಿರಂಜನ್ ಮೂರ್ತಿ ವಿರುದ್ಧ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಯೋಗ ಸ್ಪರ್ಧೆಯ ನೆಪದಲ್ಲಿ ಕಿರುಕುಳ

ದೂರಿನಲ್ಲಿ ಉಲ್ಲೇಖಿಸಿದಂತೆ  2023ರಲ್ಲಿ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ನಿರಂಜನ್ ಮೂರ್ತಿಯೊಂದಿಗೆ ಥೈಲ್ಯಾಂಡ್‌ಗೆ ತೆರಳಿದ್ದ  ವೇಳೆ ಅದೇ ಸಮಯವನ್ನು ಆರೋಪಿ ಬಳಸಿಕೊಂಡು  ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ಬಳಿಕ ನೋವಿನಿಂದ ಆಕೆಯು ಯೋಗ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾಳೆ.

ಮತ್ತೆ ಎದುರಾದ ಆರೋಪಿ

2024ರಲ್ಲಿ ಮತ್ತೊಂದು ಯೋಗ ಇನ್ಸ್ಟಿಟ್ಯೂಟ್‌ಗೆ ಸೇರಿದ ಯುವತಿ, ಅಚ್ಚರಿಯಾಗಿ ಅಲ್ಲಿಯೂ ಇದೇ ನಿರಂಜನ್ ಮೂರ್ತಿ ತರಬೇತಿ ನೀಡುತ್ತಿದ್ದನೆಂಬುದನ್ನು ಕಂಡಿದ್ದಾಳೆ. ಈ ವೇಳೆ ನಿರಂಜನ್, ಯುವತಿಗೆ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪದಕ ತಂದುಕೊಡಿಸುವ ನೆಪದಲ್ಲಿ ಹಾಗೂ ಪ್ಲೇಸ್ಮೆಂಟ್ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ ಎಂಬ ಆರೋಪ ಹೊರಬಂದಿದೆ.

ಗಂಭೀರ ದೌರ್ಜನ್ಯ ಆರೋಪ

ಆರೋಪಿ ನಿರಂಜನ್ ಮೂರ್ತಿ ರಾಜ್ಯಮಟ್ಟದ ಪ್ಲೇಸ್ಮೆಂಟ್ ಕೊಡಿಸುವ ಹೆಸರಿನಲ್ಲಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಮತ್ತೊಮ್ಮೆ ದೈಹಿಕ ದೌರ್ಜನ್ಯಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ, ಯುವತಿ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸ್ ತನಿಖೆ ಪ್ರಾರಂಭ

ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಸಂಬಂಧಿತ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಆರಂಭವಾಗಿದೆ. ಪ್ರಕರಣದ ತೀವ್ರತೆಯನ್ನು ಮನಗಂಡು ಪೊಲೀಸರು ಶೀಘ್ರವೇ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

PREV
Read more Articles on
click me!

Recommended Stories

ಕಡೂರು ಶಾಸಕರ ಕುರ್ಚಿಯಲ್ಲಿ 'ಸೂಪರ್ ಶಾಸಕ' ಆಪ್ತ ಸಹಾಯಕನ ಅಂಧಾ ದರ್ಬಾರ್! ಇದು ನಮ್ಮ ಸರ್ಕಾರ ಹೊಡೀರಿ ಚಪ್ಪಾಳೆ!
ಶಿರಾಡಿ ಘಾಟ್‌ನಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ: ಮೂವರು ದುರಂತ ಅಂತ್ಯ!