ಬಿಬಿಎಂಪಿ ಬ್ಯಾಂಕ್‌ ಖಾತೆ ಕ್ಲೋಸ್ ಮಾಡಿ ಹೊಸ 5 ನಗರಪಾಲಿಕೆಗಳನ್ನು ಘೋಷಿಸಿದ ರಾಜ್ಯ ಸರ್ಕಾರ!

Published : Sep 02, 2025, 04:13 PM ISTUpdated : Sep 02, 2025, 04:24 PM IST
Bengaluru STRR

ಸಾರಾಂಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತಿಹಾಸದ ಪುಟ ಸೇರಿ ಹೊಸ ಗ್ರೇಟರ್ ಬೆಂಗಳೂರು ಆಡಳಿತ (GBA) ಕಾರ್ಯಾರಂಭ ಮಾಡಿದೆ. ಬೆಂಗಳೂರು ಈಗ ಐದು ವಿಭಿನ್ನ ನಗರಪಾಲಿಕೆಗಳಾಗಿ ವಿಂಗಡಣೆಯಾಗಿದ್ದು, ಸರ್ಕಾರವು ಹೊಸ ಆಯುಕ್ತರನ್ನು ನೇಮಿಸಿದೆ.

ಬೆಂಗಳೂರು: ಇಂದಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತಿಹಾಸದ ಪುಟದಲ್ಲಿ ಸೇರುತ್ತಿದ್ದು, ಹೊಸ ರೂಪದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಾರ್ಯಾರಂಭಗೊಂಡಿದೆ. ರಾಜ್ಯ ಸರ್ಕಾರದಿಂದ ಅಂತಿಮ ಅಧಿಸೂಚನೆ ಪ್ರಕಟಗೊಂಡಿದ್ದು, ಈಗಿನಿಂದ ಬೆಂಗಳೂರು ಐದು ವಿಭಿನ್ನ ನಗರಪಾಲಿಕೆಗಳಾಗಿ ವಿಂಗಡಿಸಲಾಗಿದೆ.

ಐದು ನಗರಪಾಲಿಕೆಗಳ ಆಯುಕ್ತರ ನೇಮಕಾತಿ

  • ಹೊಸದಾಗಿ ರಚಿಸಲ್ಪಟ್ಟ ಐದು ನಗರಪಾಲಿಕೆಗಳಿಗೆ ಸರ್ಕಾರವು ಆಯುಕ್ತರನ್ನು ನೇಮಿಸಿದೆ:
  • ಕೇಂದ್ರ ನಗರ ಪಾಲಿಕೆ – ಆಯುಕ್ತ: ರಾಜೇಂದ್ರ ಚೋಳನ್
  • ಪೂರ್ವ ನಗರ ಪಾಲಿಕೆ – ಆಯುಕ್ತ: ರಮೇಶ್ ಜಿ.ಎಸ್ ; ಅಪರ ಆಯುಕ್ತೆ: ಸ್ನೇಹಲ್ ಸುಧಾಕರ್
  • ಉತ್ತರ ನಗರ ಪಾಲಿಕೆ – ಆಯುಕ್ತ: ಪೊಮ್ಮಳ ಸುನಿಲ್ ಕುಮಾರ್
  • ದಕ್ಷಿಣ ನಗರ ಪಾಲಿಕೆ – ಆಯುಕ್ತ: ರಮೇಶ್ ಕೆ.ಎನ್ ; ಅಪರ ಆಯುಕ್ತ: ಪಾಂಡುರಾಹುಲ್ ತುಕರಾಮ್
  • ಪಶ್ಚಿಮ ನಗರ ಪಾಲಿಕೆ – ಆಯುಕ್ತ: ರಾಜೇಂದ್ರ ಕೆ.ವಿ

ಇದರಿಂದಾಗಿ, ಬೆಂಗಳೂರಿನಲ್ಲಿ ಏಕೀಕೃತ BBMP ಆಡಳಿತ ಅಂತ್ಯಗೊಂಡಿದ್ದು, ವಿಭಜಿತ ನಗರಪಾಲಿಕೆಗಳ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾರ್ಯನಿರ್ವಹಿಸಲಿರುವುದು ಅಧಿಕೃತವಾಗಿದೆ.

GBA ವ್ಯಾಪ್ತಿಯ 5 ನಗರ ಪಾಲಿಕೆ ಕಚೇರಿಗಳಿಗೆ ಅಧಿಕಾರಿಗಳ ನೇಮಕ

ಬೆಂಗಳೂರು ಕೇಂದ್ರ ಪಾಲಿಕೆ - ರಂಗನಾಥ್ - ವಲಯ - 1 ಜಂಟಿ ಆಯುಕ್ತರು ವಲಯ -2 ಪ್ರಭಾರ ಜಂಟಿ ಆಯುಕ್ತರು

ಬೆಂಗಳೂರು ಪೂರ್ವ ಪಾಲಿಕೆ - ದಾಕ್ಷಾಯಿಣಿ ವಲಯ 1 ಪ್ರಭಾರ ಜಂಟಿ ಆಯುಕ್ತೆ ವಲಯ 2 ಗೆ ಜಂಟಿ ಆಯುಕ್ತೆ

ಬೆಂಗಳೂರು ಪಶ್ಚಿಮ ಪಾಲಿಕೆ 

ವಲಯ 1 - ಆರತಿ ಆನಂದ್ ಜಂಟಿ ಆಯುಕ್ತ 

ವಲಯ 2 - ಸಂಗಪ್ಪ ಜಂಟಿ ಆಯುಕ್ತರು

ಬೆಂಗಳೂರು ಉತ್ತರ ಪಾಲಿಕೆ

ವಲಯ 1 - ಮೊಹಮ್ಮದ್ ನಯಿಮ್ ಮೋಯಿನ್ ಜಂಟಿ ಆಯುಕ್ತರು ವಲಯ 2 - ಮೊಹಮ್ಮದ್ ನಯಿಮ್ ಮೋಯಿನ್ - ಪ್ರಭಾರಿ ಜಂಟಿ ಆಯುಕ್ತರು

ಬೆಂಗಳೂರು ದಕ್ಷಿಣ ಪಾಲಿಕೆ

ವಲಯ 1 - ಮಧು ಎನ್ ಎಸ್ , ಜಂಟಿ ಆಯುಕ್ತರು 

ವಲಯ 2 - ಸತೀಶ್ ಬಾಬು , ಜಂಟಿ ಆಯುಕ್ತರು

ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ನಗರ ಪಾಲಿಕೆ ಕಚೇರಿಗಳಿಗೆ ಉಪ ಆಯುಕ್ತರ ನೇಮಕ

ಬೆಂಗಳೂರು ಕೇಂದ್ರ ಪಾಲಿಕೆ

ವಲಯ 1 - ರಾಜು ಕೆ, ಉಪ ಆಯುಕ್ತರು ವಲಯ 2 - ರಾಜು ಕೆ, ಪ್ರಭಾರ ಆಯುಕ್ತರು

ಬೆಂಗಳೂರು ಪೂರ್ವ ಪಾಲಿಕೆ

ವಲಯ 1 -ಉಪ ಆಯುಕ್ತರು ಶಶಿಕುಮಾರ್ ವಲಯ 2 - ಉಪ ಆಯುಕ್ತರು ಶಶಿಕುಮಾರ್, ಪ್ರಭಾರ

ಬೆಂಗಳೂರು ಪಶ್ಚಿಮ ಪಾಲಿಕೆ

ವಲಯ 1- ಉಪಾಯುಕ್ತರು, ಅಬ್ದುಲ್ ರಾಬ್ 

ವಲಯ 2- ಉಪಾಯುಕ್ತರು, ಮಂಜುನಾಥ ಸ್ವಾಮಿ

ಬೆಂಗಳೂರು ಉತ್ತರ ಪಾಲಿಕೆ

ವಲಯ 1 - ಉಪಾಯುಕ್ತರು, ಮಮತಾ ಕೆ 

ವಲಯ 2 - ಉಪಾಯುಕ್ತರು,/ಮಂಗಳಗೌರಿ ಎಂ

ಬೆಂಗಳೂರು ದಕ್ಷಿಣ ಪಾಲಿಕೆ

ವಲಯ 1- ಉಪ ಆಯುಕ್ತರು, ಗಗನ ಕೆ 

ವಲಯ 2- ಉಪ ಆಯುಕ್ತರು, ಡಿಕೆ ಬಾಬು

ಬಿಬಿಎಂಪಿ ಬ್ಯಾಂಕ್ ಖಾತೆ ಮುಚ್ಚುವಂತೆ ಸರ್ಕಾರಿ ಆದೇಶ

BBMP ಅಡಿ ಇದ್ದ 291 ಬ್ಯಾಂಕ್ ಖಾತೆಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಲ್ಲಿ ಮುಖ್ಯ ಅಂಶಗಳು ಹೀಗಿವೆ:

  • ಸರ್ಕಾರದ ಅನುಮತಿಯಿಲ್ಲದೇ ಮುಂದಿನ ಆದೇಶದವರೆಗೂ ಯಾವುದೇ ರೀತಿಯ ಹಣ ವಿತ್‌ಡ್ರಾ ಮಾಡಲು ಅವಕಾಶ ಇರುವುದಿಲ್ಲ.
  • ಸರ್ಕಾರದ ಆದೇಶದಂತೆ ಸದ್ಯಕ್ಕೆ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿನ ಹಣ ಸ್ವೀಕೃತಿ ಮುಂದುವರಿಯಬೇಕು.
  • ಐದು ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದ ತಕ್ಷಣ, ಹಳೆಯ ಖಾತೆಗಳಲ್ಲಿ ಇರುವ ಮೊತ್ತವನ್ನು ಹೊಸ ಪಾಲಿಕೆ ಖಾತೆಗಳಿಗೆ ವರ್ಗಾವಣೆ ಮಾಡಬೇಕು.
  • ಅದರ ನಂತರ ಎಲ್ಲಾ 291 ಬ್ಯಾಂಕ್ ಖಾತೆಗಳನ್ನು ಮುಚ್ಚಬೇಕು.

ಈಗಾಗಲೇ ರಾಜ್ಯ ಸರ್ಕಾರವು GBA ವ್ಯಾಪ್ತಿಯ ಚುನಾವಣೆಗಳಿಗೆ ನಿಯಮ ರೂಪಿಸುವ ಕೆಲಸ ಆರಂಭಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ನಾಮಫಲಕಗಳನ್ನು ಕೂಡ ತಕ್ಷಣ ಬದಲಾಯಿಸಲಾಗುತ್ತಿದೆ. ಇದರಿಂದ ಬೆಂಗಳೂರಿನ ಏಕೀಕೃತ ಆಡಳಿತದ ಒಂದು ಯುಗ ಅಂತ್ಯಗೊಂಡು, ಹೊಸ ಆಡಳಿತ ವ್ಯವಸ್ಥೆಗೆ ಚಾಲನೆ ದೊರೆತಿದೆ.

ಇತಿಹಾಸದ ಹಿನ್ನೋಟ

1949: ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಗರಸಭೆ ಸ್ಥಾಪನೆಯಾಗಿ, ಆರ್. ಸುಬ್ಬಣ್ಣ ಅವರನ್ನು ಮೊದಲ ಮೇಯರ್ ಆಗಿ ಆಯ್ಕೆ ಮಾಡಲಾಯಿತು.

1949 – 1995: ನಗರಸಭೆ ಆಡಳಿತ ಮುಂದುವರಿಯಿತು.

1996: ಬೆಂಗಳೂರು ಮಹಾನಗರ ಪಾಲಿಕೆ (BMP) ರಚನೆ.

1996 – 2006: BMP ಆಡಳಿತ ಕಾರ್ಯನಿರ್ವಹಿಸಿತು.

2010: ವ್ಯಾಪ್ತಿಯನ್ನು ವಿಸ್ತರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರಚಿಸಲಾಯಿತು.

2010 – 2025: BBMP ಆಡಳಿತ ಕಾರ್ಯನಿರ್ವಹಿಸಿತು.

2019–20: ಎಂ. ಗೌತಮ್ ಕುಮಾರ್ BBMPನ ಕೊನೆಯ ಮೇಯರ್ ಆಗಿ ಸೇವೆ ಸಲ್ಲಿಸಿದರು.

2025: ಇದೀಗ BBMPಗೆ ಅಂತ್ಯವಾಗಿ, 5 ನಗರಪಾಲಿಕೆಗಳೊಂದಿಗೆ GBA ಆಡಳಿತ ಪ್ರಾರಂಭವಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ