ಮಹಿಳೆಯ ವಿಚಾರ : ಯುವಕನಿಗೆ ಮೂತ್ರ ಕುಡಿಸಿದ ಆರೋಪದಡಿ PSI ವಿರುದ್ಧವೇ FIR

Suvarna News   | Asianet News
Published : May 23, 2021, 11:35 AM ISTUpdated : May 23, 2021, 12:23 PM IST
ಮಹಿಳೆಯ ವಿಚಾರ : ಯುವಕನಿಗೆ ಮೂತ್ರ ಕುಡಿಸಿದ ಆರೋಪದಡಿ PSI ವಿರುದ್ಧವೇ FIR

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಯುವಕನಿಗೆ ಮೂತ್ರ ಕುಡಿಸಿ ನಿಂದನೆ ಪ್ರಕರಣ ಗೋಣಿಬೀಡು ಠಾಣೆ ಪಿಎಸ್‌ಐ ವಿರುದ್ಧ ಎಫ್‌ಐಆರ್‌ ದಾಖಲು ಯುವಕ ನೀಡಿದ ದೂರು ಆದರಿಸಿ FIR

 ಚಿಕ್ಕಮಗಳೂರು (ಮೇ.23): ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿ ಮೂತ್ರ ಕುಡಿಸಿದ ಆರೋಪ ಹಿನ್ನೆಲೆ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸೈ ಅರ್ಜುನ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ  ಕಿರುಗುಂದ ಗ್ರಾಮದ ಯುವಕ ಪುನೀತ್ ನೀಡಿರುವ ದೂರಿನನ್ವಯ ಇಲ್ಲಿನ ಪಿಎಸ್‌ಐ ಅರ್ಜುನ್ ವಿರುದ್ಧ ಇಂದು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.  

ವಿವಾಹಿತ ಮಹಿಳೆಗೆ ಪುನೀತ್ ಪೋನ್ ಮಾಡಿದ್ದಾನೆಂಬ ಆರೋಪದ ಅಡಿಯಲ್ಲಿ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಪಿಎಸ್‌ಐ ಅರ್ಜುನ್  ಜಾತಿನಿಂದನೆ ಮಾಡಿ, ಮೂತ್ರ ಕುಡಿಸಿದ್ದಾಗಿ ಗಂಭೀರ ಆರೋಪ ಮಾಡಲಾಗಿತ್ತು. 

ಹಸಿದ ನಿರ್ಗತಿಕ ಮಕ್ಕಳಿಗೆ ತನ್ನ ಊಟವನ್ನೇ ಕೊಟ್ಟ ಪೊಲೀಸ್‌! .

ಈ ಸಂಬಂಧ ಪಿಎಸ್‌ಐ ಅರ್ಜುನ್ ವಿರುದ್ದ ಪುನೀತ್ ದೂರು ನೀಡಿದ್ದು, ಈ ದೂರು ಆಧರಿಸಿ  ಐಪಿಸಿ ಸೆಕ್ಷನ್342, 323, 504, 506, 330, 348 ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು