
ಮೈಸೂರು (ಆ.9) ಮಹಿಳಾ ಸೂಪರ್‌ವೈಸರ್ ರಜೆ ನೀಡದೆ ಕಿರುಕುಳ ನೀಡಿದ್ದಾಗಿ ಆರೋಪಿಸಿ ಮಹಿಳೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹಿನಕಲ್‌ನಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕು ಅಂಕನಹಳ್ಳಿ ಮೂಲದ ಅಶೋಕ್ ಎಂಬುವರ ಪತ್ನಿ ನಾಗೇಶ್ವರಿ (45) ಆತ್ಮ೧ಹತ್ಯೆ ಮಾಡಿಕೊಂಡವರು. ಟ್ಯಾಕ್ಸಿ ಚಾಲಕ ಅಶೋಕ್ ಮತ್ತು ನಾಗೇಶ್ವರಿ ದಂಪತಿ ಮೈಸೂರಿನ ಹಿನಕಲ್‌ನಲ್ಲಿ ವಾಸವಾಗಿದ್ದು, ಇವರಿಗೆ ಮಕ್ಕಳಿರಲಿಲ್ಲ. ಕೆಲವು ವರ್ಷಗಳಿಂದ ಹಿನಕಲ್ ಫ್ಲೈ ಓವರ್ ಸಮೀಪದ ಮಾರ್ಟ್‌ನಲ್ಲಿ ನಾಗೇಶ್ವರಿ ಕೆಲಸ ಮಾಡುತ್ತಿದ್ದು, 4 ತಿಂಗಳ ಹಿಂದೆ ಸೂಪರ್‌ವೈಸರ್ ಆಗಿ ಕೆಲಸಕ್ಕೆ ಸೇರಿದ ಡಾಲಿ ಎಂಬ ಮಹಿಳೆ ನಾಗೇಶ್ವರಿಗೆ ಕಿರುಕುಳ ನೀಡುತ್ತಿದ್ದರು.
ವಾರದ ರಜೆ ಕೂಡ ನೀಡದೆ ನಿರಂತರ ತೊಂದರೆ ಕೊಡುತ್ತಿದ್ದರು. ಇದರಿಂದ ಬೇಸತ್ತ ನಾಗೇಶ್ವರಿ, ಕೆಲವು ದಿನಗಳ ಹಿಂದೆ ಮಾರ್ಟ್ ಕೆಲಸ ಬಿಟ್ಟು, ಹಿನಕಲ್ ಸಮೀಪದ ಶಾಪಿಂಗ್ ಮಾಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ನಾಗೇಶ್ವರಿ ಕೆಲಸ ಮಾಡುತ್ತಿದ್ದ ಹೊಸ ಸ್ಥಳಕ್ಕೆ ಆಗಾಗ್ಗೆ ಡಾಲಿ ತೆರಳಿ ಕಿರುಕುಳ ನೀಡುತ್ತಿದ್ದರು. ಆ ಕೆಲಸದಿಂದಲೂ ವಜಾಗೊಳಿಸುವಂತೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ನಾಗೇಶ್ವರಿ ಶುಕ್ರವಾರ ಡೆತ್ ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ.