
ಹರಪನಹಳ್ಳಿ (ಜೂ.22) ವರುಣನ ಕೃಪೆಗಾಗಿ ಪಟ್ಟಣದ ವಾಲ್ಮೀಕಿನಗರದ ದೊಡ್ಡಗರಡಿಕೇರಿಯ ಸಾರ್ವಜನಿಕರು ಬುಧವಾರ ಕತ್ತೆಗಳ ಮದುವೆ ಮಾಡಿ ದೇವರ ಮೊರೆ ಹೋದರು.
ಪಟ್ಟಣದಲ್ಲಿ ಗಂಡು ಮತ್ತು ಹೆಣ್ಣು ಕತ್ತೆಯನ್ನು ಹುಡುಕಿ ತಂದು ಗಂಡು ಕತ್ತೆಗೆ ಹೊಸ ಪಂಚೆ, ಟವೆಲ್ ತೊಡಿಸಲಾಗಿತ್ತು. ಹೆಣ್ಣು ಕತ್ತೆಗೆ ಸೀರೆ ಖಣ ತೊಡಿಸಿದರು. ಅರಿಶಿಣ, ಸುರುಗಿ ಶಾಸ್ತ್ರವನ್ನು ಮಹಿಳೆಯರು ನೆರವೇರಿಸಿದರು.
Bagalkote: ಬಾರದ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ, ಊರ ತುಂಬ ಮೆರವಣಿಗೆ ಭರ್ಜರಿ ಊಟ!
ಗಂಡು ಮತ್ತು ಹೆಣ್ಣು ಕತ್ತೆಗೆ ಬಾಸಿಂಗ್ ಕಟ್ಟಿಕೊರಳಿಗೆ ಹೂಮಾಲೆ ಹಾಕಿ ಮದುಮಕ್ಕಳಂತೆ ಸಿಂಗರಿಸಿ ತಾಳಿ ಕಟ್ಟುವ ಶಾಸ್ತ್ರವೂ ನಡೆಯಿತು. ನಂತರ ಭಾಜಾ ಭಜಂತ್ರಿ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಊರಿನ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ ಮಾಡಲಾಯಿತು.
ಈ ವೇಳೆ ದೈವಸ್ಥರಾದ ರಾಯದುರ್ಗದ ದುರುಗಪ್ಪ ಮಾತನಾಡಿ, ಕಳೆದ 30 ದಿವಸಗಳಿಂದ ಮಳೆ ಆಗದೆ ರೈತರಿಗೆ ತೊಂದರೆಯಾಗಿದೆ. ಈಗಾಗಲೇ ನಾವು ಹೊಲವನ್ನು ಸ್ವಚ್ಛಗೋಳಿಸಿ ಬಿತ್ತಲು ಅಣಿ ಮಾಡಿದ್ದೇವೆ. ಆದರೆ ಮಳೆಯಾಗಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲೆ ಚೆನ್ನಾಗಿ ಮಳೆಯಾಗಿತ್ತು. ಈ ಬಾರಿ ಮಳೆ ಆಗಿಲ್ಲ. ಆದ್ದರಿಂದ ಕತ್ತೆಗಳ ಮದುವೆ ಮಾಡಿದ್ದೇವೆ. ಮಳೆ ಬರುವ ನಂಬಿಕೆ ಹೊಂದಿದ್ದೇವೆ ಎಂದರು.
ನಿಟ್ಟೂರು ದೊಡ್ಡಹಾಲಪ್ಪ, ಕೆ. ಅಂಜಿನಪ್ಪ, ಎಂ. ಉಚ್ಚೆಂಗೆಪ್ಪ, ಆಳರಪ್ಪರ ಹಾಲಪ್ಪ, ಅರಸಿಕೇರಿ ನಾಗೇಂದ್ರ, ವರಕೇರಿ ಉಚ್ಚೆಂಗೆಪ್ಪ, ರಾಯದುರ್ಗದ ಕರಿಬಸಪ್ಪ, ತಲವಾಗಲು ಹಾಲೇಶ, ಮೆಂಗಳಪ್ಪರ ಸುರೇಶ, ರಾವನಿ ಬಸವರಾಜ, ರಾಯದುರ್ಗದ ಕರಿಯ, ಹನುಮಂತಪ್ಪ, ಗಿಡ್ಡಳ್ಳಿ ಹನುಮಂತ, ಮ್ಯಾಕಿ ಬಿದ್ದಪ್ಪ, ಗಿಡ್ಡ ಮಂಜ, ಗಿಡ್ಡಳ್ಳಿ ಪರಸಪ್ಪ ಸೇರಿದಂತೆ ಇತರರು ಇದ್ದರು.
ಬ್ಯಾಡಗಿ: ರಾಜಕಾಲುವೆ ಅವ್ಯವಸ್ಥೆ, ಗಬ್ಬು ವಾಸನೆಯಿಂದ ಜನರಿಗೆ ನಿದ್ದೆಯೇ ಇಲ್ಲ!