ವಿದ್ಯಾರ್ಥಿಗಳ ಊಟಕ್ಕೆ ನನ್ನ ವೇತನ ಮೀಸಲು: ಚಿದಾನಂದ

By Kannadaprabha News  |  First Published Jun 22, 2023, 6:05 AM IST

ವಿಧಾನ ಪರಿಷತ್‌ ಶಾಸಕರಿಗೆ ಪ್ರತಿ ತಿಂಗಳು ನೀಡುವ ವೇತನ ಹಾಗೂ ಭತ್ಯೆಯ ಸಂಪೂರ್ಣ ಗೌರವ ಧನವನ್ನು ಶಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ನೀಡುವುದಾಗಿ ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಘೋಷಿಅಇದ್ದಾರೆ.


  ಶಿರಾ :  ವಿಧಾನ ಪರಿಷತ್‌ ಶಾಸಕರಿಗೆ ಪ್ರತಿ ತಿಂಗಳು ನೀಡುವ ವೇತನ ಹಾಗೂ ಭತ್ಯೆಯ ಸಂಪೂರ್ಣ ಗೌರವ ಧನವನ್ನು ಶಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ನೀಡುವುದಾಗಿ ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಘೋಷಿಅಇದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ದಿಢೀರ್‌ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿರಾ ತಾಲೂಕಿನ ತುಂಬಾ ದೂರವಿರುವ ನಾನಾ ಹಳ್ಳಿಗಳಿಂದ ನಗರದಲ್ಲಿರುವ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಬರಲು ಪ್ರತಿದಿನ ಬೆಳಗ್ಗೆ 7 ಗಂಟೆಗೆ ನಮ್ಮ ಮನೆಯಿಂದ ಬರುತ್ತೇವೆ. ಸಂಜೆ 5 ಗಂಟೆ ಸರಿಸುಮಾರಿಗೆ ಊರು ತಲುಪಬೇಕಾಗುತ್ತದೆ. ಬೆಳಗ್ಗೆಯೇ ಕಾಲೇಜಿಗೆ ಬೇಗ ಬರುವುದರಿಂದ ಮನೆಗಳಲ್ಲಿ ಊಟ ತಿಂಡಿ ತಯಾರಾಗದೆ ಬಂದು, ಕೆಲವೊಬ್ಬರು ಊಟ ಮಾಡದೆ ಬಂದು ನಿಶಕ್ತಿಯಿಂದ ತಲೆ ತಿರುಗಿ ಬಿದ್ದಿರುವ ಉದಾಹರಣೆಗಳು ಉಂಟು. ಆದ್ದರಿಂದ ನಮಗೆ ಮಧ್ಯಾಹ್ನದ ಹೊತ್ತಿಗೆ ತುಂಬಾ ಹಸಿವು ಆಗಿ, ಪಾಠ ಪ್ರವಚನಗಳ ಕಡೆ ಗಮನಹರಿಸಲು ಆಗುವುದಿಲ್ಲ. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುವಂತೆ ವಿಧಾನ ಪರಿಷತ್‌ ಶಾಸಕರಲ್ಲಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮನವಿ ಮಾಡಿದರು.

Latest Videos

undefined

ವಿದ್ಯಾರ್ಥಿಗಳು ನಮಗೆ ಖಾಸಗಿ ಬಸ್‌ ನಿಲ್ದಾಣದಿಂದ ನಮ್ಮ ಕಾಲೇಜು ದೂರವಿರುವ ಕಾರಣ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಕೂಡಲೇ ಸಾರಿಗೆ ವ್ಯವಸ್ಥಾಪಕರಿಗೆ ಕರೆ ಮಾಡಿ ಮಾತನಾಡಿ ಸೋಮವಾರದಿಂದಲೇ ಕಾಲೇಜಿನ ಸಮಯಕ್ಕೆ ಖಾಸಗಿ ಬಸ್‌ ನಿಲ್ದಾಣದಿಂದ ಪ್ರಥಮ ದರ್ಜೆ ಕಾಲೇಜಿನವರಿಗೆ ಬಸ್‌ ಕಲ್ಪಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಎಸ್‌.ಟಿ.ರಂಗಪ್ಪ, ನಗರಸಭಾ ಮಾಜಿ ಸದಸ್ಯ ಸಂತೆಪೇಟೆ ನಟರಾಜ್‌, ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕನಕೋಟೆ ಕರಿಯಣ್ಣ, ನಿವೃತ್ತ ಶಿಕ್ಷಕ ಎನ್‌.ಕುಮಾರ್‌, ರಫಿ ಉಲ್ಲಾಖಾನ್‌, ಗಂಗಾಧರ್‌, ಉಪನ್ಯಾಸಕರಾದ ಗಿರೀಶ್‌ ಸೇರಿದಂತೆ ಹಲವರು ಹಾಜರಿದ್ದರು.

ನಾನೂ ಕೂಡ ಗ್ರಾಮೀಣ ಪ್ರದೇಶದ ಕಡು ಬಡತನ ಕುಟುಂಬದಿಂದ ಬಂದವನು. ನನಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳು ಅರ್ಥವಾಗುತ್ತವೆ. ಆದ್ದರಿಂದ ಇದಕ್ಕೆ ಪರಿಹಾರವಾಗಿ ನನಗೆ ತಿಂಗಳಿಗೆ ಶಾಸಕರ ವೇತನ ಹಾಗೂ ಭತ್ಯೆ ಒಟ್ಟು ಎಲ್ಲಾ ಸೇರಿ 2 ರಿಂದ 3 ಲಕ್ಷಗಳಷ್ಟುಹಣವನ್ನು ಸರ್ಕಾರ ನೀಡುತ್ತದೆ. ಪ್ರತಿ ತಿಂಗಳು ಆ ಹಣವನ್ನು ನಾನು ವೈಯಕ್ತಿಕವಾಗಿ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ನೀಡುವೆ. ಇದನ್ನು ಜುಲೈ 1ರಿಂದಲೇ ಪ್ರಾರಂಭ ಮಾಡುವೆ.

ಚಿದಾನಂದ್‌ ಎಂ. ಗೌಡ ವಿಧಾನ ಪರಿಷತ್‌ ಸದಸ್ಯ

click me!