* ಕೋವಿಡ್ ಲಸಿಕೆ ಪ್ರಥಮ ಡೋಸ್ ಶೇ. 98, ಎರಡನೇ ಡೋಸ್ ಶೇ. 90ರಷ್ಟು ಪೂರ್ಣ
* ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಬೆಡ್‌ಗಳು, 10 ಮಕ್ಕಳ ಬೆಡ್‌ಗಳು ಸಿದ್ಧ
* ಲಸಿಕೆ ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ(ಏ.27): ಕೋವಿಡ್ ನಾಲ್ಕನೇ ಅಲೆ(Covid 4th Wave) ಎದುರಿಸಲು ಹರಪನಹಳ್ಳಿ(Hatapanahalli) ತಾಲೂಕಿನ ಆರೋಗ್ಯ ಇಲಾಖೆ ಎಲ್ಲಾ ಸಿದ್ಧತೆ ಕೈಗೊಂಡಿದೆ. ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು -17, ಸಮುದಾಯ ಆರೋಗ್ಯ ಕೇಂದ್ರಗಳು -2, ನಗರಪ್ರಾಥಮಿಕ ಆರೋಗ್ಯ ಕೇಂದ್ರ -1, ಸಾರ್ವಜನಿಕ ಆಸ್ಪತ್ರೆ -1 ಹೀಗೆ 21 ಆಸ್ಪತ್ರೆಗಳು ಇವೆ. ಎಲ್ಲಾ ಕಡೆ ಜ್ವರ, ಕೆಮ್ಮು, ನೆಗಡಿ ಕೋವಿಡ್‌ನ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಈಗಾಗಲೇ ಕೋವಿಡ್ ಲಸಿಕೆ(Vaccine) ಪ್ರಥಮ ಡೋಸ್ -ಶೇ.98 ರಷ್ಟು, ಎರಡನೇ ಡೋಸ್ -ಶೇ.90ರಷ್ಟು ಹಾಕಲಾಗಿದೆ. ಉಳಿದವರು ಸಹ ಲಸಿಕೆ ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
undefined
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಬೆಡ್‌ಗಳು ಸಿದ್ಧತೆಯಲ್ಲಿವೆ, 10 ಮಕ್ಕಳ ಬೆಡ್‌ಗಳೂ ಇವೆ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ತಂದೆ ತಾಯಿಯವರ ಹೆಸರನಲ್ಲಿ ತಮ್ಮ ಟ್ರಸ್ಟ್ ಮೂಲಕ ಆಕ್ಸಿಜನ್ ಘಟಕವನ್ನು ಸಾರ್ವಜನಿಕ ಆಸ್ಪತ್ರೆಯ(Hospital) ಆವರಣದಲ್ಲಿ ಸ್ಥಾಪಿಸಿದ್ದಾರೆ. ಅದು ಇನ್ನೂ ಉದ್ಘಾಟನೆಯಾಗಿಲ್ಲದಿದ್ದರೂ ಸೇವೆಗೆ ಸಿದ್ದವಾಗಿದೆ. ಟ್ರೈಯಲ್ ನೋಡಲಾಗಿದೆ.
Covid Crisis: ಲಸಿಕೆ ಪಡೆಯದ, ಇತರೆ ಕಾಯಿಲೆಯಿಂದ ಬಳಲುವ ಜನರಿಗೆ 4ನೇ ಅಲೆ ‘ಡೇಂಜರ್’
ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಲಕ್ಷಣಗಳಿರುವ 25 ಜನರಿಗೆ ಕೋವಿಡ್ ಪರೀಕ್ಷೆ(Covid Test) ಮಾಡಲಾಗುತ್ತದೆ. ಆದರೆ ಲ್ಯಾಬ್ ತಾಂತ್ರಿಕ ಒಬ್ಬ ಮಾತ್ರ ಇದ್ದಾನೆ, ಇನ್ನೊಬ್ಬನ ಅವಶ್ಯಕತೆ ಇದೆ.
ಆಕ್ಸಿಜನ್, ವೆಂಟಿಲೇಟರ್ ಎಲ್ಲಾ ವ್ಯವಸ್ಥೆ ಇದೆ. ಈ ಹಿಂದೆ 1 ಮತ್ತು 2ನೇ ಅಲೆಗಳಲ್ಲಿ ಮಾತ್ರ ಸಾಕಷ್ಟುಜನರು ಸಂಕಷ್ಟಕ್ಕೀಡಾಗಿದ್ದರು. 3ನೇ ಅಲೆ ಅಷ್ಟೊಂದು ಪ್ರಭಾವ ಬೀರಲಿಲ್ಲ, ಈವರೆಗೂ ತಾಲೂಕಿನಲ್ಲಿ 303 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.
ಯರಬಳ್ಳಿ ಹಾಗೂ ಕಣವಿಹಳ್ಳಿ ಗ್ರಾಮಗಳಲ್ಲಿ ಚಿಕೂನ್ ಗುನ್ಯಾ ಹರಡಿದೆ. ಯರಬಳ್ಳಿಯಲ್ಲಿ ವೈದ್ಯರು ಬೀಡು ಬಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ, ಕಣವಿಹಳ್ಳಿಯಲ್ಲಿ ವೈದ್ಯರು ಸಂಚರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಸುಧಾರಿಸಬೇಕಿದೆ. ಈ ಹಿಂದೆ ಕೊಟ್ಟಂತೆ ಮನೆ ಮನೆಗೆ ಮುಂಚಿತವಾಗಿ ಔಷಧಿ ಕಿಟ್‌ಗಳನ್ನು ಆರೋಗ್ಯ ಇಲಾಖೆಯವರು ನೀಡಿದರೆ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ಇದೀಗ ಪುನಃ ನಾಲ್ಕನೆ ಅಲೆ ಬರುತ್ತದೆ ಎಂಬ ಮಾತು ಕೇಳಿಬರುತ್ತದೆ, ಅದಕ್ಕಾಗಿ ಇಲ್ಲಿಯ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜನರು ಸಹ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.
ಕರ್ನಾಟಕದಲ್ಲಿ ಕೊರೋನಾ 4ನೇ ಅಲೆ ರೂಲ್ಸ್, ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
ಕೋವಿಡ್ ಲಸಿಕೆ ಈವರೆಗೂ ಹಾಕಿಸಿಕೊಳ್ಳದಿದ್ದವರು ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ, ಬೆಡ್, ಆಕ್ಸಿಜನ್ ಸಿದ್ಧತೆ ಇದೆ. 5 ಐಸಿಯು ಬೆಡ್ ಇವೆ, ಜನರು ಸಹ ಕಡ್ಡಾಯವಾಗಿ ಮಾಸ್ಕ್(Mask) ಹಾಕಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅಂತ ಹರಪನಹಳ್ಳಿ ಪ್ರಭಾರಿ ಆರೋಗ್ಯಾಧಿಕಾರಿ ಹಾಲಸ್ವಾಮಿ ಹೇಳಿದ್ದಾರೆ.
ಮಾಸ್ಕ್ ಕಡ್ಡಾಯಗೊಳಿಸಲಾಗಿದೆ, ಲ್ಯಾಬ್ ಟೆಕ್ನಿಷಿಯನ್ ಕೊರತೆ ಇದೆ, ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ, ಔಷಧಿ ಕೊರತೆ ಇಲ್ಲ, ಕೋವಿಡ್ 4ನೇ ಅಲೆ ಬಂದರೆ ಎದುರಿಸಲು ಸಿದ್ಧತೆ ಇದೆ ಅಂತ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ರಾಘವೇಂದ್ರ ದುರುಗೋಜಿ ತಿಳಿಸಿದ್ದಾರೆ.