ವಿಜಯೇಂದ್ರ ಸಮ್ಮುಖದಲ್ಲಿ ಜೋರಾದ ಪಕ್ಷಾಂತರ : ಬಿಜೆಪಿ ಸೇರಿದ ಕೈ ಮುಖಂಡರು

Kannadaprabha News   | Asianet News
Published : Dec 02, 2020, 10:32 AM ISTUpdated : Dec 02, 2020, 10:50 AM IST
ವಿಜಯೇಂದ್ರ ಸಮ್ಮುಖದಲ್ಲಿ ಜೋರಾದ ಪಕ್ಷಾಂತರ :   ಬಿಜೆಪಿ ಸೇರಿದ ಕೈ  ಮುಖಂಡರು

ಸಾರಾಂಶ

ಇದೀಗ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಚಾಣಾಕ್ಯ ಎಂದು ಕರೆಸಿಕೊಳ್ಳುತ್ತಿದ್ದಾರೆ.  ಅವರ ಸಮ್ಮುಖದಲ್ಲಿ ಇದೀಗ ಪಕ್ಷಾಂತರ ಪರ್ವ ಜೋರಾಗಿದೆ. 

ಕೊಳ್ಳೇಗಾಲ (ಡಿ.02): ಬಿಜೆಪಿ ಸಮಾವೇಶದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರ ಸಮ್ಮುಖದಲ್ಲಿ ಹಲವು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

 ಹನೂರು ವಿಧಾನಸಭಾ ಕ್ಷೇತ್ರದ ಹೂಗ್ಯಂ ಗ್ರಾಮ ಪಂಚಾಯಿತಿಯ ಪಿ.ಜಿ.ತಂಗವೇಲು, ಮಾಜಿ ನಿರ್ದೇಶಕರು. ಕರ್ನಾಟಕ ರಾಜ್ಯ ಮೀನುಗಾರಿಕಾ ಸಹಕಾರ ಮಂಡಳಿ ಮತ್ತು ಡಿ.ಮಹದೇವ್‌ ಮಾಜಿ ಉಪಾಧ್ಯಕ್ಷರು ಹೂಗ್ಯಂ ಗ್ರಾಮ ಪಂಚಾಯಿತಿ ಇವರುಗಳು ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಂಪುಟ ವಿಸ್ತರಣೆ : ಸುಳಿವೊಂದನ್ನು ಕೊಟ್ಟ ವಿಜಯೇಂದ್ರ ...

 ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ಸುಂದರ್‌ ಚಾಮರಾಜನಗರ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷರಾದ ಡಾ.ಎಸ್‌.ದತ್ತೇಶ್‌ ಕುಮಾರ್‌ , ಜಯಸುಂದರ್‌ ಇನ್ನಿತರರು ಇದ್ದರು.

ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಚಟುವಟಿಕೆಗಳು ಇದೀಗ ಬಿರುಸುಗೊಂಡಿದ್ದು, ಹಲವೆಡೆ ಪಕ್ಷಾಂತರವೂ ನಡೆಯುತ್ತಿದೆ. 

ರಾಜ್ಯದಲ್ಲಿ ಬಿಜೆಪಿ ಮಾಸ್ಟರ್ ಮೈಂಡ್ ಎಂದು ಕರೆಸಿಕೊಳ್ಳುತ್ತಿರುವ ವಿಜಯೇಂದ್ರ ಬಿಜೆಪಿ ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

PREV
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ