ಬಿಜೆಪಿ ಭದ್ರಕೋಟೆಯಾಗಿಸಲು ಟಾರ್ಗೆಟ್

Kannadaprabha News   | Asianet News
Published : Dec 02, 2020, 10:10 AM ISTUpdated : Dec 02, 2020, 10:26 AM IST
ಬಿಜೆಪಿ ಭದ್ರಕೋಟೆಯಾಗಿಸಲು ಟಾರ್ಗೆಟ್

ಸಾರಾಂಶ

ಬಿಜೆಪಿ ಭದ್ರಕೋಟೆಯಾಗಿಸಲು ಇಲ್ಲಿ ಟಾರ್ಗೆಟ್ ನೀಡಲಾಗಿದೆ. ಶೀಘ್ರದಲ್ಲೇ ಮಿನಿ ಸಮರ ನಡೆಯಲಿದ್ದು ಈ ನಿಟ್ಟಿನಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ. 

ಗುಂಡ್ಲುಪೇಟೆ (ಡಿ.02): ನಾನು ಶಾಸಕನಾದ ಮೇಲೆ ನಡೆದ ತಾಪಂ ಉಪ ಚುನಾವಣೆ,ಪುರಸಭೆ,ಪಿಎಲ್‌ಡಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು,ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಭದ್ರಕೋಟೆಯಾಗುತ್ತಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಹಾಗು ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಹೇಳಿದರು. 

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಗುಂಡ್ಲುಪೇಟೆ ಹಾಗು ಚಾಮರಾಜನಗರ ಗ್ರಾಮಾಂತರ ಮಂಡಲ ಆಯೋಜಿಸಿದ್ದ ಗ್ರಾಮ ಸ್ವರಾಜ್‌ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದಲ್ಲಿ 35 ಗ್ರಾಪಂ ಕಮಲ ವಶವಾಗಬೇಕು ಎಂದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ನಾನಿದ್ದೇನೆ.ಕೆಲಸ ಮಾಡಿಕೊಡಲು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ.ಬಿಜೆಪಿಗೆ ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

'ನಾನು ಕೊಚ್ಚೆಗುಂಡಿ ಆದ್ರೆ ವಿಶ್ವನಾಥ್‌ ಭಿಕ್ಷುಕ; ಕಡೆಗೆ ಭಿಕ್ಷುಕನನ್ನ ಎಲ್ಲಿಗೆ ಕಳಿಸ್ತಾರ್ರಿ' ...

 ಗ್ರಾಪಂ ಚುನಾವಣೆ ಕಾರ್ಯಕರ್ತರ ಚುನಾವಣೆ ಇದಾಗಿದೆ.ರಾಜ್ಯ ಸರ್ಕಾರ ಮನೆ ನೀಡಲು ನೀವೇ(ಕಾರ್ಯಕರ್ತರೇ) ಪಟ್ಟಿಮಾಡಿದ್ದೀರಾ?ನೀವು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು ಎಂದರು. ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಂಡು ಕ್ಷೇತ್ರದ 40 ಗ್ರಾಪಂ ನಲ್ಲಿ 35 ಗ್ರಾಪಂನಲ್ಲಿ ಬಿಜೆಪಿಗರು ಗೆದ್ದು ಬಂದಲ್ಲಿ ನಾನು ಕ್ಷೇತ್ರದಲ್ಲಿ ಮತ್ತಷ್ಟುಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದರು.

ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಬಂದಿದೆ.ಮುಂದಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವೆ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ರಾಜಕಾರಣ ಮಾಡಲ್ಲ ಎಂದರು.

ಕ್ಷೇತ್ರದಲ್ಲಿ ವಿಪಕ್ಷದವರು ಅಧಿಕಾರ ನಡೆಸಿದರು.ಆದರೆ ನಾನು ಗೆದ್ದ ನಂತರ ನಮ್ಮೂರಿನ ರಸ್ತೆ ಸರಿಯಿಲ್ಲ ಎಂಬ ಬಗ್ಗೆ ಜನರಿಂದ ದೂರು ಕೇಳಿ ಬಂದಿದೆ ಎಂದರೆ 25 ವರ್ಷ ಏನು ಕೆಲಸ ಮಾಡಿದರು ಎಂದು ಪ್ರಶ್ನಿಸಿದರು.

PREV
click me!

Recommended Stories

ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು