ಪುತ್ರಿ ಮದುವೆಯಲ್ಲಿ ಎಂಎಲ್‌ಎ ಡ್ಯಾನ್ಸ್‌!

Published : Jun 26, 2019, 12:11 PM IST
ಪುತ್ರಿ ಮದುವೆಯಲ್ಲಿ ಎಂಎಲ್‌ಎ ಡ್ಯಾನ್ಸ್‌!

ಸಾರಾಂಶ

ಪುತ್ರಿ ಮದುವೆಯಲ್ಲಿ ಎಂಎಲ್‌ಎ ಡ್ಯಾನ್ಸ್‌| ಶಾಸಕ ಹನೂರು ಶಾಸಕ ಆರ್‌. ನರೇಂದ್ರ ಡಾನ್ಸ್ ವೈರಲ್

ಮೈಸೂರು[ಜೂ.26]: ಹನೂರು ಶಾಸಕ ಆರ್‌.ನರೇಂದ್ರ ಮೈಸೂರಿನಲ್ಲಿ ಭಾನುವಾರ ನಡೆದ ಪುತ್ರಿಯ ಮದುವೆ ಸಮಾರಂಭದಲ್ಲಿ ಸಂಬಂಧಿಕರೊಂದಿಗೆ ಡ್ಯಾನ್ಸ್‌ ಮಾಡಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ. ನರೇಂದ್ರ ಅವರ ಪುತ್ರಿಯ ವಿವಾಹ ಇಲ್ಲಿನ ವರ್ತುಲ ರಸ್ತೆಯ ಕಲ್ಯಾಣ ಮಂಟಪದಲ್ಲಿ ನೆರವೇರಿತು.

ಮದುವೆ ಮುಗಿದ ನಂತರ ಸಿನಿಮಾ ಗೀತೆಗೆ ಸಂಬಂಧಿಕರು ನೃತ್ಯ ಮಾಡುತ್ತಿದ್ದರು. ಆಗ ಯುವಕನೊಬ್ಬ ಶಾಸಕ ನರೇಂದ್ರ ಅವರನ್ನು ನೃತ್ಯ ಮಾಡುವಂತೆ ಬಲವಂತ ಮಾಡಿದ. ಆಗ ನರೇಂದ್ರ ಅವರು ಕುಟುಂಬದ ಸದಸ್ಯರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಮದುವೆ ಆರತಕ್ಷತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್‌ನ ಹಲವಾರು ಮುಖಂಡರು ಭಾಗವಹಿಸಿದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC