ಗೋಕರ್ಣ ಮಹಾಬಲೇಶ್ವರ ದೇವಾಲಯ ಆಡಳಿತ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರ

Kannadaprabha News   | Asianet News
Published : May 10, 2021, 07:46 AM IST
ಗೋಕರ್ಣ ಮಹಾಬಲೇಶ್ವರ ದೇವಾಲಯ ಆಡಳಿತ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರ

ಸಾರಾಂಶ

* ಸುಪ್ರೀಂ ಆದೇಶದಂತೆ ನಿವೃತ್ತ ನ್ಯಾ.ಬಿ.ಎನ್‌.ಕೃಷ್ಣ ನೇತೃತ್ವದ ಸಮಿತಿ ರಚನೆ * ಹಸ್ತಾಂತರ ಪ್ರಕ್ರಿಯೆ ಪೂರ್ಣ  * ಎಲ್ಲಾ ಚರ-ಸ್ಥಿರ ಆಸ್ತಿ, ದಾಖಲೆ ಪತ್ರ ಪಡೆದುಕೊಂಡ ಎಂ. ಅಜಿತ   

ಗೋಕರ್ಣ(ಮೇ.10): ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸುವ ಪ್ರಕ್ರಿಯೆ ಶನಿವಾರ ಸಂಜೆ ಪೂರ್ಣಗೊಂಡಿದೆ. 

ಸುಪ್ರೀಂಕೋರ್ಟ್‌ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಕೃಷ್ಣ ನೇತೃತ್ವದ ಸಮಿತಿ ರಚಿಸಲಾಗಿದ್ದು, ಈ ಸಮಿತಿಯ ಕಾರ್ಯದರ್ಶಿ ಕುಮಟಾ ಉಪವಿಭಾಗಾಧಿಕಾರಿಯಾದ ಎಂ. ಅಜಿತ ಎಲ್ಲಾ ಚರ-ಸ್ಥಿರ ಆಸ್ತಿ, ದಾಖಲೆ ಪತ್ರಗಳನ್ನು ಪಡೆದುಕೊಂಡರು.

ಗೋಕರ್ಣ ಮಹಾಬಲೇಶ್ವರ ವಿವಾದ: ನ್ಯಾ. ಬಿ. ಎನ್. ಶ್ರೀಕೃಷ್ಣ ನೇತೃತ್ವದ ಸಮಿತಿ ರಚನೆ!

126ಕ್ಕೂ ಹೆಚ್ಚು ವಿವಿಧ ಚಿನ್ನಾಭರಣ ಮತ್ತು 230ಕ್ಕೂ ಹೆಚ್ಚಿನ ಬೆಳ್ಳಿ ಆಭರಣ, ಆರು ಬ್ಯಾಂಕ್‌ಗಳಲ್ಲಿ ಉಳಿತಾಯ ಮತ್ತು ಮುದ್ದತು ಠೇವಣಿ ಸೇರಿ ಒಟ್ಟು ಮೂರು ಕೋಟಿ ರುಪಾಯಿಗಳ ದಾಖಲೆ ಪತ್ರ ಪಡೆಯಲಾಯಿತು. ಈ ವೇಳೆ ಸಮಿತಿಯ ಸದಸ್ಯರಾದ ಮಹಾಬಲ ಉಪಾಧ್ಯಾಯ, ದತ್ತಾತ್ರೇಯ ಹಿರೇಗಂಗೆ, ಪರಮೇಶ್ವರ ಮಾರ್ಕಾಂಡೆ, ಜಿಲ್ಲಾ ಮುಜಿರಾಯಿ ಇಲಾಖೆ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
 

PREV
click me!

Recommended Stories

ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ
ದಕ್ಷಿಣ ಭಾರತದ ಉದಯೋನ್ಮುಖ ನಟಿ ಕೊಟ್ಟೂರಿನ ನಂದಿನಿ ಆತ್ಮ*ಹತ್ಯೆ; ಸರ್ಕಾರಿ ನೌಕರಿ ಬೇಡವೆಂದು ಸಾವಿನ ನಿರ್ಧಾರ?