ಹುಬ್ಬಳ್ಳೀಲಿ ಆರ್‌ಎಸ್‌ಎಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ

By Kannadaprabha News  |  First Published May 10, 2021, 7:17 AM IST

* ನೆರವು-ಒಂದು ವಾರದಲ್ಲಿ 15 ಮೃತದೇಹಗಳ ಅಂತ್ಯಸಂಸ್ಕಾರ
* ಅವರವರ ಧಾರ್ಮಿಕ ವಿಧಿವಿಧಾನದಂತೆ ಅಂತ್ಯಸಂಸ್ಕಾರ 
* ವಯಸ್ಸಾದವರಿಗೆ ಕಿರಾಣಿ, ಮೆಡಿಸಿನ್‌ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.10): ಕೊರೋನಾ ಸೋಂಕಿತರು ಮರಣ ಹೊಂದಿದರೆ ಅಥವಾ ಬೇರೆ ಕಾರಣಗಳಿಂದ ಯಾರಾದರೂ ಮೃತಪಟ್ಟರೂ ಹೆಣ ಹೊರಲು ಯಾರೊಬ್ಬರೂ ಬರುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದ್ದು ಇಂತಹ ಸಮಯದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಎರಡು ತಂಡಗಳು ಕಳೆದ ಒಂದು ವಾರದಿಂದ ಶವಸಂಸ್ಕಾರ ನೆರವೇರಿಸುವ ಕಾರ‍್ಯದಲ್ಲಿ ನಿರತವಾಗಿವೆ.

Tap to resize

Latest Videos

ಹುಬ್ಬಳ್ಳಿಯಲ್ಲಿನ ತಂಡದಲ್ಲಿ 10 ಮಂದಿ, ಧಾರವಾಡದಲ್ಲಿನ ತಂಡದಲ್ಲಿ 8-10 ಮಂದಿಯಿದ್ದಾರೆ. ಧಾರವಾಡದಲ್ಲಿ ಕೋವಿಡ್‌ ಮತ್ತು ಕೋವಿಡೇತರ ಸೇರಿ ಈವರೆಗೆ 9 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಹುಬ್ಬಳ್ಳಿಯಲ್ಲಿ ಈವರೆಗೆ 6 ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

"

ಸೇವಾ ಭಾರತಿ ಟ್ರಸ್ಟ್‌ ಸಹಯೋಗದಲ್ಲಿ ಈ ಕಾರ್ಯನಿರ್ವಹಿಸಲಾಗುತ್ತಿದೆ. ಸಹಾಯವಾಣಿಗೆ ಅಥವಾ ತಂಡದಲ್ಲಿರುವ ಯಾರಿಗಾದರೂ ಕರೆ ಮಾಡಿ ಹೇಳಿದರೆ ಅವರ ತಂಡ ಅಲ್ಲಿಗೆ ತೆರಳಿ ಮೃತದೇಹವನ್ನು ಅವರು ಹೇಳಿದ ಧಾರ್ಮಿಕ ವಿಧಿಪ್ರಕಾರ ಅಂತ್ಯಸಂಸ್ಕಾರ ನಡೆಸಿಕೊಡುತ್ತಾರೆ. ಶವ ಸಾಗಾಟಕ್ಕೂ ಉಚಿತ ವಾಹನದ ವ್ಯವಸ್ಥೆಯನ್ನೂ ಈ ತಂಡವೇ ಮಾಡುತ್ತದೆ.

ಕೊರೋನಾ ಕಾಟ: ಬೆಡ್‌ಗಳ ಕೊರತೆಯಾಗುತ್ತಿದೆ, ಹುಷಾರಾಗಿ ಮನೆಯಲ್ಲೇ ಇರಿ!

ಉಚಿತ ಆಟೋ:

ಕೋವಿಡ್‌ ಹೊರತುಪಡಿಸಿ ಬೇರೆ ಕಾಯಿಲೆಗಳಿಂದ ಬಳಲುವ ರೋಗಿಗಳ ಆಸ್ಪತ್ರೆಗೆ ತೆರಳಲು ಧಾರವಾಡದ ತಂಡ ಉಚಿತ ಆಟೋಗಳನ್ನು ಒದಗಿಸುತ್ತಿದೆ. ಜೊತೆಗೆ ವಯಸ್ಸಾದವರಿಗೆ ಕಿರಾಣಿ, ಮೆಡಿಸಿನ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಯಾರಿಗಾದರೂ ನೆರವು ಬೇಕಾದರೆ ಧಾರವಾಡ- 9845799027, 7899935709, ಹುಬ್ಬಳ್ಳಿ- 9845820065 ಈ ಮೊಬೈಲ್‌ಗಳಿಗೆ ಕರೆ ಮಾಡಬಹುದಾಗಿದೆ.

ಯಾವುದೇ ಜಾತಿ, ಧರ್ಮದವರಿರಲಿ. ಅಂತ್ಯಸಂಸ್ಕಾರಕ್ಕೆ ನೆರವು ಕೇಳಿದರೆ ಅವರ ಧಾರ್ಮಿಕ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಿಕೊಡುತ್ತೇವೆ ಎಂದು ಹುಬ್ಬಳ್ಳಿ ಆರ್‌ಎಸ್‌ಎಸ್‌ ಕಾರ್ಯಕರ್ತ ಅಣ್ಣಪ್ಪ ಬಾಗಲಕೋಟೆ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!