ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಉತ್ಸವದ ಲೋಗೋ ಬಿಡುಗಡೆಗೊಳಿಸುವ ಮೂಲಕ ವಿಜಯನಗರದ ಗತವೈಭವ ಮರುಕಳಿಸುವ ಉತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ. ಈ ಬಾರಿ ಮೂರು ದಿನಗಳಲ್ಲಿ 10 ಲಕ್ಷಕ್ಕೂ ಮೀರಿ ಜನರು ಹರಿದು ಬರುವ ನಿರೀಕ್ಷೆ ಇದೆ.
ಬಳ್ಳಾರಿ (ಜ.27) : ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಉತ್ಸವದ ಲೋಗೋ ಬಿಡುಗಡೆಗೊಳಿಸುವ ಮೂಲಕ ವಿಜಯನಗರದ ಗತವೈಭವ ಮರುಕಳಿಸುವ ಉತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ. ಈ ಬಾರಿ ಮೂರು ದಿನಗಳಲ್ಲಿ 10 ಲಕ್ಷಕ್ಕೂ ಮೀರಿ ಜನರು ಹರಿದು ಬರುವ ನಿರೀಕ್ಷೆ ಇದೆ.
ಜ. 27, 28 ಮತ್ತು 29ರಂದು ಮೂರು ದಿನಗಳವರೆಗೆ ಹಂಪಿ ಉತ್ಸವ ನಡೆಯಲಿದೆ. ಮೂರು ದಿನಗಳಲ್ಲಿ ಜನಸಾಗರವೇ ಹರಿದು ಬರುವ ನಿರೀಕ್ಷೆ ಇದೆ.ಹಾಗಾಗಿ ವಿಜಯನಗರ(Vijayanagar) ನೂತನ ಜಿಲ್ಲಾಡಳಿತ ಉತ್ಸವ(Hampi Utsav)ಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.
undefined
Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ
ನಾಲ್ಕು ವೇದಿಕೆಗಳ ನಿರ್ಮಾಣ:
ಈ ಬಾರಿಯ ಹಂಪಿ ಉತ್ಸವದಲ್ಲಿ ನಾಲ್ಕು ವೇದಿಕೆಗಳ ನಿರ್ಮಾಣ ಆಗಲಿದೆ. ಮುಖ್ಯವೇದಿಕೆ ಗಾಯತ್ರಿಪೀಠದ ಬಳಿಯ ಮೈದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ಸಾಸಿವೆ ಕಾಳು ಗಣಪತಿ ಮಂಟಪದಲ್ಲಿ ಮೂರನೇ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಇನ್ನೂ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ನಾಲ್ಕನೇ ವೇದಿಕೆ ನಿರ್ಮಾಣ ಆಗಲಿದೆ. ಈ ಉತ್ಸವದಲ್ಲಿ ಹೆಸರಾಂತ ಕಲಾವಿದರೂ ಭಾಗವಹಿಸಲಿದ್ದಾರೆ. ಜತೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಲಾವಿದರಿಗೂ ಆದ್ಯತೆ ನೀಡಿ, ಹಂಪಿ ಉತ್ಸವದ ಅಸ್ಮಿತೆ ಕಾಪಾಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ವಾಸ್ತುಶಿಲ್ಪ ವೈಭವಕ್ಕೆ ವಿದ್ಯುದೀಪಾಲಂಕಾರ:
ಹಂಪಿ ಉತ್ಸವದಲ್ಲಿ ವಾಸ್ತುಶಿಲ್ಪದ ವೈಭವ ಅನಾವರಣಗೊಳ್ಳಲಿದೆ.ಲಕ್ಷಾಂತರ ಜನರು ಉತ್ಸವಕ್ಕೆ ಹರಿದು ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಹಂಪಿಯಲ್ಲಿ ಸಿದ್ಧತಾ ಕಾಮಗಾರಿಗಳು ಭರದಿಂದ ಸಾಗಿದ್ದು, ಆಯಾ ಮೇಲುಸ್ತುವಾರಿ ಸಮಿತಿಗಳ ಸದಸ್ಯರು ತಮಗೆ ವಹಿಸಿದ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಹಂಪಿ ಉತ್ಸವ ಮೂರು ದಿನಗಳವರೆಗೆ ನಡೆಸುವ ಮೂಲಕ ಹಂಪಿಗೆ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ವಿಜಯನಗರ ನೆಲದ ವಾಸ್ತುಶಿಲ್ಪ ಪ್ರಪಂಚವನ್ನು ಇಡೀ ವಿಶ್ವಕ್ಕೆ ಉಣಬಡಿಸುವ ಕಾರ್ಯವನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಲಿದೆ.
ಹಂಪಿ ಉತ್ಸವ ಬರೀ ಉತ್ಸವ ಆಗಿರದೇ ಇಡೀ ದಕ್ಷಿಣ ಭಾರತಕ್ಕೆ ರಾಜಧಾನಿಯಾಗಿದ್ದ ವಿಜಯನಗರದ ನೆಲದ ಗತವೈಭವ ಮರುಕಳಿಸುವ ಕಾರ್ಯವೂ ಆಗಲಿದೆ. ಈ ಉತ್ಸವಕ್ಕೆ ಮೂರು ದಿನಗಳವರೆಗೆ ಲಕ್ಷಾಂತರ ಜನರು ಹರಿದು ಬರಲಿದ್ದಾರೆ.
Hampi Utsav 2023: ಜ.27ರಿಂದ 3 ದಿನ ಅದ್ಧೂರಿ ‘ಹಂಪಿ ಉತ್ಸವ’, ಸಿಎಂ ಬೊಮ್ಮಾಯಿ ಚಾಲನೆ
ವಿಜಯನಗರದ ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯವನ್ನು ಈ ಉತ್ಸವ ಮಾಡಲಿದೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಈಗಾಗಲೇ 1986ರಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಹಾಗಾಗಿ ಈ ಉತ್ಸವವು ಜನೋತ್ಸವದೊಂದಿಗೆ ವಿಜಯನಗರದ ಕಲಾ ಪ್ರಪಂಚವನ್ನೂ ಉಣಬಡಿಸಲಿದೆ. ಹಂಪಿ ಉತ್ಸವಕ್ಕೆ ವಿಯನಗರ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದ್ದು, ಈಗ ಉತ್ಸವದ ಕುರಿತೇ ಇಡೀ ನಾಡಿನಾದ್ಯಂತ ಚರ್ಚೆ ನಡೆದಿದೆ.
ಕಲಾ ವೈಭವ:
ಹಂಪಿ ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು, ಸಮಾರಂಭಗಳು ಹಂಪಿಯ ನಾಲ್ಕು ವೇದಿಕೆಗಳಲ್ಲಿ ನಡೆಯಲಿದೆ. ಎಂ.ಪಿ.ಪ್ರಕಾಶ್ ನಗರದಲ್ಲಿರುವ ಗಾಯಿತ್ರಿ ಪೀಠವು ಹಂಪಿ ಉತ್ಸವದ ಮುಖ್ಯ ವೇದಿಕೆ ಆಗಿರುತ್ತದೆ. ಹಾಗೂ ಉಳಿದಂತೆ ಎದುರು ಬಸವಣ್ಣ ವೇದಿಕೆ, ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ ಹಾಗೂ ಸಾಸಿವೆಕಾಳು ಗಣಪ ವೇದಿಕೆಗಳಲ್ಲಿ ಸತತ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಪ್ರಖ್ಯಾತ ಕಲಾವಿದರ ದಂಡು:
ಕನ್ನಡ ಚಿತ್ರರಂಗದ ಅರ್ಜುನ್ ಜನ್ಯ, ರಘು ದಿಕ್ಷಿತ್, ವಿಜಯ ಪ್ರಕಾಶ್, ಎಂ.ಡಿ.ಪಲ್ಲವಿ, ಅನನ್ಯ ಭಟ್, ಕಲಾವತಿ ದಯಾನಂದ್, ವೈಯಾಲಿ ಫಲೋಕೇರ್ ಬಂಬೂ ಫä್ಯಜನ್ ಸೇರಿದಂತೆ ಬಾಲಿವುಡ್‌ನ ಪ್ರಮುಖ ಹಿನ್ನೆಲೆ ಗಾಯಕರಾದ ಕೈಲಾಶ್ ಖೇರ್, ಅರ್ಮಾನ್ ಮಲ್ಲಿಕ್, ಅಂಕಿತ್ ತಿವಾರಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ.