ಹಳಿಯೂರು ಗ್ರಾಮ ಪಂಚಾಯತ್ ಸದಸ್ಯನೋರ್ವ ಅಧ್ಯಕ್ಷ ಚುನಾವಣೆಗೂ ಮೊದಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸದಸ್ಯನ ಸಾವು ಭಾರಿ ಅನುಮಾನಕ್ಕೆ ಕಾರಣವಾಗಿದೆ.
ವರದಿ : ಮಧು.ಎಂ.ಚಿನಕುರಳಿ,ಮೈಸೂರು
ಮೈಸೂರು: ಹಳಿಯೂರು ಗ್ರಾಮ ಪಂಚಾಯತ್ ಸದಸ್ಯನೋರ್ವ ಅಧ್ಯಕ್ಷ ಚುನಾವಣೆಗೂ ಮೊದಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸದಸ್ಯನ ಸಾವು ಭಾರಿ ಅನುಮಾನಕ್ಕೆ ಕಾರಣವಾಗಿದೆ. ಮೈಸೂರು ಜಿಲ್ಲೆ ಕೆ.ಆರ್. ತಾಲೂಕಿನ ಹಳಿಯೂರು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಸಾವಿಗೀಡಾದವರು. ನಾಳೆ ಹಳಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ನಡೆಯಲಿದ್ದು ಒಂದು ದಿನ ಕಳೆದಿದ್ದರೂ ಆತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದ. ಆದರೆ ಚುನಾವಣೆಗೆ ದಿನ ಮೊದಲು ಆತ ಶವವಾಗಿದ್ದು, ಭಾರೀ ಅನುಮಾನಕ್ಕೆ ಕಾರಣವಾಗಿದೆ.
undefined
ಚುನಾವಣೆಗೆ 20 ದಿನ ಮೊದಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ದಿನೇಶ್ ಗ್ರಾಮ ಪಂಚಾಯತಿ ಬೆಂಬಲಿತ ಸದಸ್ಯರನ್ನ ಪ್ರವಾಸಕ್ಕೆ ಕಳುಹಿಸಿದ್ದಾರೆ. ಸತೀಶ್ ಸೇರಿದಂತೆ ಹಳಿಯೂರು ಗ್ರಾಮ ಪಂಚಾಯಿತಿಯ 11 ಸದಸ್ಯರು ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿದ್ದರು. ಆದರೆ ಈಗ ಮೃತದೇಹದ ಮೇಲೆ ಒಂದು ಎಳೆ ಬಟ್ಟೆಯೂ ಇಲ್ಲದ ಸ್ಥಿತಿಯಲ್ಲಿ ಸತೀಶ್ ಶವ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಸತೀಶ್ ಹಾಗೂ ಇತರ ಗ್ರಾಮ ಪಂಚಾಯತ್ ಸದಸ್ಯರು ಕಳೆದ 20 ದಿನಗಳಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮೋಜು ಮಸ್ತಿಯಲ್ಲಿ ತೊಡಗಿ ನಿನ್ನೆಯಷ್ಟೇ ಮೈಸೂರಿಗೆ ಆಗಮಿಸಿದ್ದರು.
ಗೃಹಿಣಿ ಅನುಮಾನಾಸ್ಪದ ಸಾವು; ತನಗಿಂತ ಚಿಕ್ಕವನ ಜತೆಗಿನ ಲವ್ವಿ-ಡವ್ವಿ ಮುಳುವಾಯ್ತಾ?
ನಿನ್ನೆ ಮೈಸೂರಿಗೆ ಆಗಮಿಸಿದ ಸದಸ್ಯರು ಜೆಡಿಎಸ್ ಮುಖಂಡರಿಗೆ ಸೇರಿದ ಸುಭಿಕ್ಷ ರೆಸಿಡಿನ್ಸಿಯಲ್ಲಿ ವಾಸ್ತವ್ಯ ಹೂಡಿದ್ದರು. ನಿನ್ನೆ ಭರ್ಜರಿ ಪಾರ್ಟಿ ನಡೆಸಿರುವ ಸದಸ್ಯರು ಊಟ ಮುಗಿಸಿ ಮಲಗಿದ್ದಾರೆ. ಮುಂಜಾನೆ ವೇಳೆಗೆ ಸತೀಶ್ ಎದೆ ನೋವು ಎಂದು ಕಿರುಚಾಡಿ ಮಂಚದಿಂದ ಕೆಳಗೆ ಬಿದಿದ್ದಾನೆ ಎನ್ನಲಾಗಿದೆ. ಇಷ್ಟಾದ್ರು ಸಹ ಸತೀಶ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಯಾರು ಮಾಡಿಲ್ಲ. ಹೀಗಾಗಿ ಸತೀಶ್ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.
ಸತೀಶ್ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಮೈಸೂರಿಗೆ ಆಗಮಿಸಿದ ಸತೀಶ್ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಸಾವಿನ ಬಗ್ಗೆ ನಿಖರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದರೆಸಾರ್ಟ್ ರಾಜಕಾರಣಕ್ಕೆ ಸದಸ್ಯನ ಪ್ರಾಣ ಹೋಗಿದೆಯೇ ಎಂಬ ಅನುಮಾನ ಮೂಡಿದೆ.
ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಮಹಿಳೆ ಅನುಮಾನಾಸ್ಪದ ಸಾವು, ಕೊಲೆ ಶಂಕೆ