ಉಡುಪಿ: ನಿರ್ವಹಣೆ ಇಲ್ಲದೆ ಹಾಳಾದ ಮಣ್ಣಪಳ್ಳ: ಸುಂದರ ತಾಣ ಈಗ ಕೊಳಕು ಮಣಿಪಾಲ

Published : Jul 26, 2022, 08:37 PM IST
ಉಡುಪಿ: ನಿರ್ವಹಣೆ ಇಲ್ಲದೆ ಹಾಳಾದ ಮಣ್ಣಪಳ್ಳ: ಸುಂದರ ತಾಣ ಈಗ ಕೊಳಕು ಮಣಿಪಾಲ

ಸಾರಾಂಶ

Udupi News: ವಿಶ್ವ ಪ್ರಸಿದ್ಧ ವಿದ್ಯಾನಗರಿ ಮಣಿಪಾಲಕ್ಕೆ ಮಣಿಪಾಲವೆಂಬ ಹೆಸರು ಬರಲು ಕಾರಣವಾದ ಕೊಳವೊಂದು, ಕೊಳಕಾಗಿಬಿಟ್ಟಿದೆ

ವರದಿ- ಶಶಿಧರ ಮಾಸ್ತಿ ಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜು. 26): ವಿಶ್ವ ಪ್ರಸಿದ್ಧ ವಿದ್ಯಾನಗರಿ ಮಣಿಪಾಲಕ್ಕೆ ಮಣಿಪಾಲವೆಂಬ ಹೆಸರು ಬರಲು ಕಾರಣವಾದ ಕೊಳವೊಂದು, ಕೊಳಕಾಗಿಬಿಟ್ಟಿದೆ. ಪ್ರಕೃತಿಯೇ ಕೊಟ್ಟ ವರವನ್ನು, ಜನರು ಹಾಳುಗೆಡವಿದ್ದಾರೆ.  ಮಣ್ಣಪಳ್ಳ ಈ ಕೊಳದಿಂದಲೇ ಮಣಿಪಾಲವೆಂಬ ಹೆಸರು ಬಂದಿದೆ . ಸುಂದರ ವಿಹಾರ ತಾಣವಾಗಿರುವ ಮಣ್ಣಪಳ್ಳ ವೆಂಬ ಪ್ರಾಕೃತಿಕ ಕೊಳವು ನಿರ್ವಹಣೆ ಇಲ್ಲದೆ ಹಾಳಾಗಿದೆ. ಈ ಪರಿಸರದ ತುಂಬಾ ಕಸರಾಶಿ ಬಿದ್ದು ಯಾರೂ ಹೋಗದ ಕೊಂಪೆಯಾಗುತ್ತಿದೆ. ಮಳೆಗಾಲದಲ್ಲಿ ಕಂಗೊಳಿಸಬೇಕಿದ್ದ ಮಣ್ಣಪಳ್ಳ ಪರಿಸರವು ಕೊಚ್ಚೆ, ಕೆಸರಿನ ಪರಿಸರ, ಗಿಡಗಂಟಿಗಳಿಂದ ಕೂಡಿದ ತಾಣವಾಗಿ ಮಾರ್ಪಟ್ಟಿದೆ.

ಇಲ್ಲಿಗೆ ಭೇಟಿ ಕೊಡುವ ಜನರ ನಿರ್ಲಕ್ಷ್ಯದಿಂದ , ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಮಣ್ಣಪಳ್ಳ ಒಡಲು ಸೇರುತ್ತಿರುವುದು ಆತಂಕಕಾರಿಯಾಗಿದೆ. ದಶಕಗಳ ಹಿಂದೆ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಈ ದೊಡ್ಡ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿತ್ತು. ವರ್ಷಪೂರ್ತಿ ಈ ಕೆರೆಯಲ್ಲಿ ನೀರಿರುತ್ತೆ ಎಂಬ ಕಾರಣಕ್ಕೆ ಪ್ರವಾಸಿಗರ ಮನಸೂರಿಗೊಂಡಿತ್ತು. ಈ ಕೊಳದಲ್ಲಿ ಸಂಗ್ರಹವಾದ ನೀರು ಅಲ್ಲೇ 200 ಮೀಟರ್ ದೂರದಲ್ಲಿ ಜಲಪಾತವಾಗಿ ಹರಿಯುವ ಮೂಲಕ ಕಣ್ಣನ ಸೆಳೆಯುತ್ತಿತ್ತು .

ದೇಶದ ನಾನಾ ಭಾಗಗಳಿಂದ ಅನೇಕ ಬಗೆಯ ಪಕ್ಷಿಗಳು ಎಲ್ಲಿಗೆ ಬರುತ್ತವೆ . ಮಣ್ಣಪಳ್ಳದಲ್ಲಿ ನೂರಾರು ಜಾತಿಯ ಮೀನುಗಳು ಕಾಣಲು ಸಿಗುತ್ತವೆ.ಮಣಿಪಾಲ, ಉಡುಪಿ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು. ಪ್ರಸ್ತುತ ಮಣ್ಣಪಳ್ಳ ಕೆರೆ ನಿರ್ವಹಣೆಯಿಲ್ಲದೆ ಅನೇಕ ಸಮಸ್ಯೆಗಳು ಉಂಟಾಗಿವೆ.

ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ 200 ಮಂದಿ ರಸ್ತೆಗೆ ಬಲಿ..!

ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿವೆ. ತ್ಯಾಜ್ಯ ರಾಶಿಗಳು ಅಲ್ಲಲ್ಲಿ ಹರಡಿ ಕೊಂಡಿವೆ. ಹಲವು ದಿನಗಳಿಂದ ಡಸ್ಟ್‌ಬಿನ್‌ಗಳಿಂದ ತ್ಯಾಜ್ಯ ತೆರವುಗೊಂಡಿಲ್ಲ. ಇಲ್ಲಿಗೆ ಭೇಟಿಕೊಡುವ ಯುವಕರು ಕುಡಿದು ಎಸೆದು ಹೋದ ಮಧ್ಯದ ಬಾಟಲಿಗಳು ರಾಶಿ ಬಿದ್ದಿವೆ. ನಡುರಾತ್ರಿಯಲ್ಲಿ ಯುವಕರು ಇಲ್ಲಿ ಪಾರ್ಟಿ ಮಾಡುತ್ತಾರೆ. ಹೀಗೆ ಬಂದವರು ಕಸ ಎಸೆದು ಹೋಗುತ್ತಾರೆ.

ಮಣ್ಣಪಳ್ಳಕ್ಕೆ ಎಂಟರ್ ಆಗುವ ಗೇಟುಗಳಲ್ಲಿ ಕೇಸರಿನ ಗುಡ್ಡೆ ನಮ್ಮನ್ನು ಸ್ವಾಗತಿಸುತ್ತದೆ.ಇಲ್ಲಿಗೆ ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಮಣಿಪಾಲ ಬರ್ಡ್  ಕ್ಲಬ್‌ ನವರು ಈ ಪರಿಸರದಲ್ಲಿ 100ಕ್ಕೂ ಅಧಿಕ ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಿದೆ. ವಿವಿಧ ಜಾತಿಯ ಮೀನುಗಳು, ವಿಶಿಷ್ಟ ಜಲಚರಗಳು ಇಲ್ಲಿವೆ. ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. 

ಅಲ್ಲದೆ ಇಲ್ಲಿ ಮೀನು ಹಿಡಿಯುವುದು ನಿಷೇಧವಿದ್ದರೂ ಕೆಲವರು ಗಾಳ ಹಾಕಿ ಮೀನು ಹಿಡಿಯುವ ಬಗ್ಗೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಇಲ್ಲಿ ವಿಹಾರಕ್ಕೆ ಬರುವ ಜನರು ಅನೇಕ ಬಗ್ಗೆ ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ . ಆಹಾರದ ಪೊಟ್ಟಣ್ಣಗಳು, ಪಾನೀಯದ ಬಾಟಲಿಗಳು ಹಳ್ಳದ ಸುತ್ತಲೂ ಕಾಣಸಿಗುತ್ತದೆ.  

ಉಡುಪಿಯಲ್ಲಿ ಗಾಳಿಗೂ ಬಿಲ್: 8,000 ನೀರಿನ ಮೀಟರ್ ಕಿತ್ತೊಗೆಯಲು ಶಾಸಕ ಭಟ್ ಸೂಚನೆ

ಮಣ್ಣಪಳ್ಳ ಪರಿಸರ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲು ನಗರಸಭೆಗೆ ಹಸ್ತಾಂತರಿಸಬೇಕು ಮತ್ತು ಸ್ಥಳೀಯರ ಸಮಿತಿ ರಚಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಜಿಲ್ಲಾಡಳಿತ ಇದರ ನಿರ್ವಹಣೆ ನೋಡುತ್ತಿದ್ದು, ಇದು ವ್ಯವಸ್ಥಿತವಾಗಿ ಆಗುತ್ತಿಲ್ಲ. ಇಲ್ಲಿನ ಮೂರ್ನಾಲ್ಕು ಸ್ಥಳೀಯ ಸಂಘ, ಸಂಸ್ಥೆಗಳನ್ನು ಒಳಗೊಂಡು ಸಮಿತಿ ರಚನೆಯಾಗಿ, ನಗರಸಭೆಯಿಂದ ನಿರ್ವಹಣೆಗೊಳಪಟ್ಟಲ್ಲಿ ಉತ್ತಮ ಎಂದು ಬಹುತೇಕರ ಅಭಿಪ್ರಾಯವಾಗಿದೆ.

PREV
Read more Articles on
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!