ಹಳೇಕೋಟೆ ಹನುಮ ದೇಗುಲ ಭಾವೈಕ್ಯ ಶೃದ್ಧಾಕೇಂದ್ರವಾಗಲಿ. ಧಾರ್ಮಿಕ ಸಭೆಯಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕರೆ.
ಭಟ್ಕಳ (ಏ.18): ಎಲ್ಲರ ಸಹಕಾರದಿಂದ ಸುಂದರವಾಗಿ ನಿರ್ಮಾಣಗೊಂಡಿರುವ ಹಳೇಕೋಟೆ ಹನುಮಂತ ದೇವಸ್ಥಾನ ಭಾವೈಕ್ಯದ ಶೃದ್ಧಾಕೇಂದ್ರವಾಗಿ ರಾಷ್ಟ್ರಮಟ್ಟದ ಪ್ರಸಿದ್ಧಿ ಪಡೆಯಬೇಕೆಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Bramhananda Sarawati Swamiji) ಹೇಳಿದರು.ಹಳೇಕೋಟೆ ಹನುಮಂತ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಧರ್ಮಸಭೆಯನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು. ಎಲ್ಲ ಜಾತಿ, ಜನಾಂಗದವರೂ ಒಂದೇ ಎನ್ನುವ ಸಮಾನತೆ ಮೂಡಿದಾಗ ಮಾತ್ರ ಎಲ್ಲ ಸಮಾಜ ಒಗ್ಗೂಡಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಸನಾತನ ಧರ್ಮ ಎತ್ತಿ ಹಿಡಿಯುವ ಕೆಲಸ ಆಗಬೇಕು. ಪ್ರತಿಯೊಬ್ಬರೂ ಆಧ್ಯಾತ್ಮಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ಶಾಸಕ ಸುನೀಲ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಜಿಎಸ್‌ಬಿ ಸಮಾಜದ ಪ್ರಮುಖ ಅಶೋಕ ಪೈ, ಹವ್ಯಕ ವಲಯದ ಅಧ್ಯಕ್ಷ ಶಂಭು ಹೆಗಡೆ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಭಾಸ್ಕರ ಆಚಾರ್ಯ, ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಮರಾಠಿ ಸಮಾಜದ ಪ್ರಮುಖ ರುಕ್ಮಾ ಮರಾಠಿ, ಕಾಮನ್‌ವೆಲ್ತ್ ಗೇಮ್ಸ್ (Commonwealth Games) ಪದಕ ವಿಜೇತ ಕಾಶೀನಾಥ ನಾಯ್ಕ (Kashinath Naik), ನಾಮಧಾರಿ ಸಮಾಜದ ಎಂ.ಎನ್. ನಾಯ್ಕ ಹೊನ್ನಾವರ, ಎಂ.ಪಿ. ನಾಯ್ಕ ಅಂಕೋಲ, ನಾಗರಾಜ ನಾಯ್ಕ ಮುಂಡಗೋಡ, ಜೆ.ಪಿ. ನಾಯ್ಕ ದಾಂಡೇಲಿ, ಶಿರಾಲಿ ಗ್ರಾಪಂ ಅಧ್ಯಕ್ಷೆ ರೇವತಿ ನಾಯ್ಕ, ಬೇಂಗ್ರೆ ಗ್ರಾಪಂ ಅಧ್ಯಕ್ಷೆ ಬೇಬಿ ನಾಯ್ಕ, ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಸದಸ್ಯ ಮುಕುಂದ ನಾಯ್ಕ, ನಾಮಧಾರಿ ಅಭಿವೃದ್ಧಿ ಸಂಘದ ಸದಸ್ಯರು ಹಾಗೂ ವಿವಿಧ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಕಾರವಾರದಲ್ಲಿ ಮಕ್ಕಳ ಸಂತೆ: ವಿವಿಧ ಖಾದ್ಯಗಳಿಗೆ ಮುಗಿಬಿದ್ದ ಜನತೆ
undefined
ಸಂಜನಾ ಕರ್ಕಿಕರ್ ಪ್ರಾರ್ಥಿಸಿದರು. ಸೃಜನ್ ಕರ್ಕಿಕರ್ ಮತ್ತು ಸಂಜನಾ ಹನುಮಾನ್ ಚಾಲೀಸ್ ಪಠಿಸಿದರು. ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ ಸ್ವಾಗತಿಸಿದರು. ಧರ್ಮದರ್ಶಿ ಸುಬ್ರಾಯ ನಾಯ್ಕ ಕಾಯ್ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ದೇವಸ್ಥಾನದ ಕಾರ್ಯ ಆರಂಭದಿಂದ ನಡೆದ ವಿದ್ಯಾಮಾನಗಳನ್ನು ವಿವರಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ, ನಾರಾಯಣ ನಾಯ್ಕ ನಿರೂಪಿಸಿದರು.
ಶಿರಾಲಿ ಸಾರದಹೊಳೆ ಹಳೇಕೋಟೆ ಹನುಮಂತ ದೇವರಿಗೆ ಶಾಸಕ ಸುನೀಲ ನಾಯ್ಕ ಅವರು ಚಿನ್ನದ ಮುಖವಾಡ ಅರ್ಪಿಸಿದರು. ಈ ಸಂದರ್ಭದಲ್ಲಿ ಸುನೀಲ ನಾಯ್ಕರ ತಂದೆ ಬಿ.ಕೆ. ನಾಯ್ಕ ಸೇರಿದಂತೆ ಅವರ ಕುಟುಂಬದವರು, ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೆ. ನಾಯ್ಕ, ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಾಯ ಎಂ. ನಾಯ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ ಇದ್ದರು.
ಉತ್ತರ ಕನ್ನಡದಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ