'ಹು ಈಸ್ ಹೀ, ಸುಧಾಕರ್ ಏನು ಚೀಫ್ ಮಿನಿಸ್ಟ್ರಾ..'? ವಿಶ್ವನಾಥ್ ಸಿಡಿಮಿಡಿ

By Suvarna News  |  First Published Jan 30, 2020, 11:58 AM IST

ನನ್ನನ್ನು ಚುನಾವಣೆಗೆ ನಿಲ್ಲಬಾರದಿತ್ತು ಎನ್ನಲು ಸುಧಾಕರ್ ಯಾರು..? ಹು ಇಸ್ ಹಿ..? ಸುಧಾಕರ್ ಏನು ಚೀಫ್ ಮಿನಿಸ್ಟ್ರಾ ಎಂದು ಎಚ್. ವಿಶ್ವನಾಥ್ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.


ಮೈಸೂರು(ಜ.30): ನನ್ನನ್ನು ಚುನಾವಣೆಗೆ ನಿಲ್ಲಬಾರದಿತ್ತು ಎನ್ನಲು ಸುಧಾಕರ್ ಯಾರು..? ಹು ಇಸ್ ಹಿ..? ಸುಧಾಕರ್ ಏನು ಚೀಫ್ ಮಿನಿಸ್ಟ್ರಾ ಎಂದು ಹೆಚ್. ವಿಶ್ವನಾಥ್ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಶಾಸಕ ಸುಧಾಕರ್‌ ವಿರುದ್ಧ ಕೆಂಡಾಮಂಡಲವಾದ ವಿಶ್ವನಾಥ್‌ ಬಿಜೆಪಿಯಲ್ಲಿ ಸಚಿವ ಸ್ಥಾನ‌ ನೀಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಹೆಚ್.ವಿಶ್ವನಾಥ್ ಕಿಡಿ ಕಾರಿದ್ದು, ಸೋತಿರುವ ಲಕ್ಷ್ಮಣ್ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಹಾಗಿದ್ದರೆ ನಾನು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

ವಿಶ್ವನಾಥ್‌ಗೆ ಚುನಾವಣೆಗೆ ಸ್ಪರ್ಧಿಸ್ಬೇಡಿ ಅಂದಿದ್ರಾ ಸಿಎಂ..? ಖಾತೆ ಕೊಡಲು ತೊಡಕು

ನನ್ನನ್ನು ಚುನಾವಣೆಗೆ ನಿಲ್ಲಬಾರದಿತ್ತು ಎನ್ನಲು ಸುಧಾಕರ್ ಯಾರು..? ಹು ಇಸ್ ಹಿ ? ಸುಧಾಕರ್ ಏನು ಚೀಫ್ ಮಿನಿಸ್ಟ್ರಾ ಎಂದು ಪ್ರಶ್ನಿಸಿರುವ ವಿಶ್ವನಾಥ್‌ ಸುಧಾಕರ್ ವಿರುದ್ಧ ಫುಲ್ ಗರಂ ಆಗಿದ್ದಾರೆ.

ನಮ್ಮ ತಂಡದ ಎಲ್ಲರೂ ಆ ರೀತಿ ಮಾತನಾಡುತ್ತಿಲ್ಲ. ರಮೇಶ್ ಜಾರಕಿಹೋಳಿ ಸರಿಯಾಗಿಯೇ ಮಾತನಾಡಿದ್ದಾರಲ್ಲ. ನಾನು ಮಂತ್ರಿಸ್ಥಾನದ ವಿಚಾರದಲ್ಲಿ ಮತ್ತೆ  ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಿಲ್ಲ. ಅವರು ಇನ್ನೂ ದೆಹಲಿಗೆ ಹೋಗಿಲ್ಲ, ನೋಡೋಣ ಏನಾಗುತ್ತೆ. ಯಡಿಯೂರಪ್ಪ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಅವರ ನಡವಳಿಕೆ ಮೇಲೆ ಗೊತ್ತಾಗುತ್ತೆ ಎಂದಿದ್ದಾರೆ.

ಮಂತ್ರಿ ಸ್ಥಾನ ಸಿಗದಿದ್ರೆ ಆಕಾದ ಬಿದ್ದೋಗಲ್ಲ

ಮಂತ್ರಿ ಸ್ಥಾನ ಸಿಗಲಿಲ್ಲ ಅಂದ್ರೆ ಆಕಾಶ ಬಿದ್ದು ಹೋಗಲ್ಲ. ಏನೇ ಆದರೂ ವಿಶ್ವನಾಥ್ ವಿಶ್ವನಾಥೇ. ಮಂತ್ರಿ ಸಿಕ್ಕಲಿ ಬಿಡಲಿ ನಾನು ನಾನೇ. ಯಡಿಯೂರಪ್ಪ ಅವರನ್ನ ಈಗಲೂ ನಂಬಿದ್ದೇನೆ. ನಾನು ಬಂದಮೇಲೆ ಏನೆಲ್ಲ ಆಗಿದೆ ಎಂಬುದು ಅವರಿಗೆ ಗೊತ್ತಿದೆ. ಯಾರು ಮುಂದೆ ಹೆಜ್ಜೆ ಇಟ್ಟ ಮೇಲೆ ಏನೆಲ್ಲ ಆಗಿದೆ ಅವರಿಗೆ ಗೊತ್ತಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ

ಯಡಿಯೂರಪ್ಪ ಏನು ಮಾಡುತ್ತಾರೆ ನೋಡೋಣ. ನನ್ನ ಗುರಿ ಇದ್ದದ್ದು ಸಮ್ಮಿಶ್ರ ಸರ್ಕಾರ ಕಿತ್ತೊಗೆಯಬೇಕು. ಈಗ ನನಗೇನು ತಪ್ಪು ಮಾಡಿದೆ ಎನ್ನಿಸುತ್ತಿಲ್ಲ. ನಾನು ಈಗಲೂ ಕುಂದಿಲ್ಲ, ಅಳುಕುವುದೂ ಇಲ್ಲ. ರಾಜಕೀಯ ಕೊನೆಗಾಲದಲ್ಲಿ ನನಗೆ ಖಂಡಿತ ಸೋಲಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!