ಕಲಬುರಗಿಯಿಂದ ಮಧ್ಯ ಏಷ್ಯಾಗೆ ಸಾಕಷ್ಟು ಪ್ರಯಾಣಿಕರು ಜಿಲ್ಲೆಯಿಂದ ಸಂಚರಿಸುತ್ತಾರೆ| ಪ್ರಯಾಣಿಕರ ಅನುಕೂಲಕ್ಕಾಗಿ ನೇರವಾಗಿ ಕಲಬುರಗಿಯಿಂದಲೇ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಪ್ರಯಾಣ ಆರಂಭ| ಮುಂದಿನ ವರ್ಷದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ|
ಕಲಬುರಗಿ(ಜ.30): ಕಲಬುರಗಿ ವಿಮಾನ ನಿಲ್ದಾಣವು ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಉಡ್ಡಯನಕ್ಕೆ ಸಜ್ಜಾಗುತ್ತಿದೆ ಎಂದು ಮೂಲ ಸೌಕರ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ತಿಳಿಸಿದ್ದಾರೆ.
ಬುಧವಾರ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿನ ಸೌಕರ್ಯ ಪರಿಶೀಲಿಸಿದ ನಂತರ ಮಾತನಾಡಿ, ಕಲಬುರಗಿಯಿಂದ ಮಧ್ಯ ಏಷ್ಯಾಗೆ ಸಾಕಷ್ಟು ಪ್ರಯಾಣಿಕರು ಜಿಲ್ಲೆಯಿಂದ ಸಂಚರಿಸುತ್ತಾರೆ. ಅವರು ಹೈದ್ರಾಬಾದ್ ಅಥವಾ ಮುಂಬೈ ಮೂಲಕ ತೆರಳುತ್ತಿದ್ದು, ಅವರ ಅನುಕೂಲಕ್ಕಾಗಿ ನೇರವಾಗಿ ಕಲಬುರಗಿಯಿಂದಲೇ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಪ್ರಯಾಣ ಆರಂಭಿಸಲಾಗುವುದು, ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಮೂಲ ಸೌಕರ್ಯಗಳಿದ್ದು, ಮುಂದಿನ ವರ್ಷದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಡಬಹುದು ಎಂದು ಹೇಳಿದ್ದಾರೆ.
undefined
ಕಲಬುರಗಿಗೆ ಸೇವೆ ನೀಡಲು ಏರ್‌ಲೈನ್ಸ್ ಪೈಪೋಟಿ: ಟಿಕೆಟ್ ದರದಲ್ಲಿ ಭಾರೀ ಕಡಿತ
ಕಲಬುರಗಿ ವಿಮಾನ ನಿಲ್ದಾಣ ದೊಡ್ಡ ವಿಮಾನ ನಿಲ್ದಾಣವಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನುಕೂಲವಾಗುವಂತೆ ಪಾಸ್ ಪೋರ್ಟ್ ತಪಾಸಣಾ ಕೇಂದ್ರ, ಕಸ್ಟಮ್ ಇಲಾಖೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿ ವಿಮಾನ ನಿಲ್ದಾಣ ಸಾರ್ವಜನಿಕರ ಕನಸಾಗಿದ್ದು, ಉಡಾನ್ ಯೋಜನೆಯಲ್ಲಿ ಅದು ಸಾಕಾರಗೊಂಡಿದೆ. ಇದು ಸಾರ್ವಜನಿಕರಿಗೆ ಹಾಗೂ ಉದ್ಯಮಿಗಳಿಗೆ ಅತ್ಯುಪಯುಕ್ತವಾಗಿದ್ದು, ಮುಂದಿನ ಮಾರ್ಚ್ ಮಾಹೆಯಿಂದ ದೆಹಲಿ ಹಾಗೂ ತಿರುಪತಿಗೆ ವಿಮಾನ ಯಾನವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬೀದರ್ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕೆಲಸ ನಡೆಯುತ್ತಿದೆ. ಕಲಬುರಗಿ ವಿಮಾನ ನಿಲ್ದಾಣದ ಸ್ಥಳದಲ್ಲಿ ಹಾಗೂ ಸುತ್ತ-ಮುತ್ತಲಿನ ಪ್ರದೇಶವನ್ನು ನೋಡಿಕೊಂಡು ಕೃಷಿಗೆ ಸಂಬಂಧಿಸಿದ ಸಂಸ್ಥೆ ಐ.ಟಿ ಸೇವೆ ಹಾಗೂ ಇನ್ನಿತರ ಮಾರುಕಟ್ಟೆ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಈ ಕುರಿತು ಗುಲಬರ್ಗಾ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನಾ ಮಂಡಳಿಗೆ ಈ ಕುರಿತು ಮನವಿ ನೀಡಲಾಗಿದೆ ಎಂದರು.
ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಹಕಾರ ನೀಡುತ್ತಿದ್ದು, ಈಗಾಗಲೇ ಅನೇಕ ಖಾಸಗಿ ಸಂಸ್ಥೆಗಳು ಬಂಡವಾಳ ಹೂಡಲು ಮುಂದೆ ಬಂದಿದ್ದು, ನಾವು ಸೂಕ್ಷ್ಮವಾಗಿ ಪರಿಶೀಲಿಸಿ ಅವಕಾಶ ನೀಡಲಾಗುತ್ತದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಅಭಿವೃದ್ಧಿಯಾಗಲು ಕಾಲಾವಕಾಶ ಬೇಕು, ವಿದೇಶದೊಂದಿಗೆ ಪ್ರಯಾಣ ಆರಂಭಿಸುವುದರಿಂದ ಇಲ್ಲಿನ ನಾಗರಿಕರಿಗೆ