ದಲಿತರ ಮನೆಗೆ ಸಿಎಂ, ಸಚಿವರ ಭೇಟಿಗೆ ಎಚ್ ವಿಶ್ವನಾಥ್ ಕಿಡಿ

By Kannadaprabha News  |  First Published Oct 23, 2022, 5:56 AM IST

:ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎನ್ನುವುದು ಒಂದು ರೀತಿಯ ಫ್ಯಾಷನ್‌ ಆಗಿದೆ. ಇದರಿಂದ ಎಲ್ಲಾ ರಾಜಕೀಯ ನಾಯಕರು ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಗಾಂಧೀಜಿ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಕಿಡಿಕಾರಿದರು.


ಮೈಸೂರು (ಅ.23):ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎನ್ನುವುದು ಒಂದು ರೀತಿಯ ಫ್ಯಾಷನ್‌ ಆಗಿದೆ. ಇದರಿಂದ ಎಲ್ಲಾ ರಾಜಕೀಯ ನಾಯಕರು ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಗಾಂಧೀಜಿ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಕಿಡಿಕಾರಿದರು.

ನಿಂದ (Hotel )  ತರಿಸಿಕೊಂಡು ಸೇವಿಸುತ್ತಾರೆ. ಈ ನಾಟಕ ಒಳ್ಳೆಯದಲ್ಲ, ಸಿಎಂ (CM)ಅವರಿಗೂ ನಾನು ವಿನಂತಿಸುತ್ತೇನೆ. ನಮಗೆ ಅವಮಾನ ಮಾಡಬೇಡಿ, ನಮ್ಮ ಸಮುದಾಯಗಳಿಗೆ ಮುಜುಗರ ಮಾಡಬೇಡಿ. ಹೊಟೇಲ್‌ನಿಂದ ಊಟ, ಹೊಸ ತಟ್ಟೆ, ಲೋಟ ತಂದು ನಮ್ಮ ಮನೆಗಳಲ್ಲಿ ತಿಂದು ಅವಮಾನ ಮಾಡಬೇಡಿ. ದಲಿತರ ಮನೆಗೆ ನೀವು ಬಂದ್ರೆ ನಿಮಗೆ ಲಾಭ, ನಮಗೇನು ಲಾಭ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

Tap to resize

Latest Videos

ದಯಮಾಡಿ ದಲಿತರ ಮನೆಗೆ ಬರಬೇಡಿ, ಬಂದು ನಮಗೆ ಅವಮಾನ ಮಾಡಬೇಡಿ. ದಲಿತರು ಸಹ ಯಾರನ್ನೂ ತಮ್ಮ ಮನೆಗೆ ಊಟಕ್ಕೆ ಕರೆದು ಅವಮಾನಕ್ಕೆ ಒಳಗಾಗಬೇಡಿ ಎಂದು ಅವರು ಮನವಿ ಮಾಡಿದರು.

ದಲಿತರ ಮನೆಗೆ ಹೋಗುವುದಾದರೇ ನೀವು ಒಂದು ಕಾರ್ಯಕ್ರಮದೊಂದಿಗೆ ಹೋಗಿ. ಅದುಬಿಟ್ಟು ನೀವು ಬ್ರಾಂಡ್‌ ಹೋಟೆಲ್‌ ಊಟ ತಿಂಡಿ ತಿನ್ನೋಕೆ ದಲಿತರ ಮನೆಗೇ ಹೋಗಬೇಕಾ? ಬ್ರಾಹ್ಮಣರು, ಲಿಂಗಾಯತರ ಹೋಟೆಲ್‌ ಊಟ ತರಿಸಿ ತಿನ್ನೋಕೆ ದಲಿತರ ಮನೆಗೆ ಯಾಕ್‌ ಹೋಗ್ತಿರಾ? ದಲಿತರ ಮನೆಗೆ ಬರೋದಾದ್ರೆ ಒಂದು ಕಾರ್ಯಕ್ರಮದೊಂದಿಗೆ ಊಟಕ್ಕೆ ಬನ್ನಿ. ರಾಜಕೀಯ ಲಾಭಕ್ಕಾಗಿ ಬರಬೇಡಿ ಎಂದು ಅವರು ಕುಟುಕಿದರು.

ನಮ್ಮೂರಿನವರು ನನಗೆ ಬಹಿಷ್ಕಾರದ ಎಚ್ಚರಿಕೆ

ಮಾಜಿ ಸಚಿವರಾದ ಯಶೋದರ ದಾಸಪ್ಪ ಅವರನ್ನು ನಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದೆ. ನಾನು ಬರಲೇಬೇಕಾದರೆ ನಿಮ್ಮ ಮನೆಯ ಒಳಗಡೆ ನಿಮ್ಮೂರಿನ ದಲಿತರನ್ನು ಊಟ ಮಾಡಿಸಬೇಕು ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನಮ್ಮೂರಿನ ದಲಿತರನ್ನು ಮನೆಗೆ ಕರೆ ತಂದು ಒಟ್ಟಿಗೆ ಕೂತು ಎಲ್ಲರೂ ಊಟ ಮಾಡಿದ್ದೇವು. ಇದಾದ ಬಳಿಕ ರಾತ್ರಿಗೆ ನಮ್ಮೂರಿನವರು ಬಹಿಷ್ಕಾರ ಹಾಕಲು ಮುಂದಾದರು. ನನಗೆ ಬಹಿಷ್ಕಾರ ಹಾಕಿದರೇ ನಿಮ್ಮನ್ನು ಜೈಲಿಗೆ ಕಳುಹಿಸುವೆ ಎಂದು ಎಚ್ಚರಿಕೆ ನೀಡಿದ ಮೇಲೆ ಸುಮ್ಮನಾದರೂ ಎಂದು ಅವರು ತಮಗಾದ ಅನುಭವವನ್ನು ವಿವರಿಸಿದರು.

ದಲಿತರ ಮನೆಯಲ್ಲಿ ಆಹಾರ ಸೇವಿಸಿ ಅಂಬೇಡ್ಕರ್‌, ಗಾಂಧಿಗೆ ಅವಮಾನ- ಎಚ್‌. ವಿಶ್ವನಾಥ್‌ ಕಿಡಿ

- ದಲಿತರ ಮನೆಗೆ ಸಿಎಂ, ಸಚಿವರ ಭೇಟಿಗೆ ಕಿಡಿ

- ದಲಿತರ ಮನೆಗೆ ನೀವು ಬಂದ್ರೆ ನಿಮಗೆ ಲಾಭ, ನಮಗೇನು ಲಾಭ?

- ದಲಿತರ ಮನೆಗೆ ಬಂದು ಅವಮಾನ ಮಾಡಬೇಡಿ

ಹುಣಸಗಿ :  ಇಲ್ಲಿನ ಯುಕೆಪಿ ಕ್ಯಾಂಪಿನ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು, ಸಮಾರಂಭದ ವೇದಿಕೆಗೂ ಬರುವ ಮುನ್ನ ಪಟ್ಟಣದ ಜನತಾ ಕಾಲೋನಿಯ ನಿವಾಸಿ, ದಲಿತ ಮುಖಂಡ ಪರಮಣ್ಣ ಕಟ್ಟಿಮನಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು.

ಮಧ್ಯಾಹ್ನ 12.30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ್‌ ಹಾಗೂ ಶಾಸಕರ ರಾಜೂಗೌಡ ಅವರು ಪರಮಣ್ಣ ಕಟ್ಟಿಮನಿ ಅವರ ಮನೆಗೆ ಆಗಮಿಸುತ್ತಿದ್ದಂತೆಯೇ, ಕುಟುಂಬದ ಮುತ್ತೈದೆಯರು ಆರತಿ ಬೆಳಗಿ ತಿಲಕವಿಟ್ಟು ಇವರನ್ನು ಮನೆಯೊಳಗೆ ಬರಮಾಡಿಕೊಂಡರು.

ಪರಮಣ್ಣನ ಪತ್ನಿ ಶಾರದಾ ಕಟ್ಟಿಮನಿ ಹಾಗೂ ಕುಟುಂಬದ ಸದಸ್ಯೆ ನೀಲಮ್ಮ ಸಿಎಂಗೆ ಮಂಡಕ್ಕಿ ವಗ್ಗರಣೆ ಉಪಾಹಾರ ಸಿದ್ಧಪಡಿಸಿ ಬಡಿಸಿದರು. ಉಪಹಾರ ಸೇವಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮಂಡಕ್ಕಿ ಒಗ್ಗರಣೆ ಬಹಳ ಚೆನ್ನಾಗಿ ಮಾಡಿದ್ದೀರಿ ಎಂದು ಶ್ಲಾಘನೆ ವ್ಯಕ್ತಪಡಿಸಿದರಲ್ಲದೆ, ನಿಮ್ಮ ಹೆಸರು ಏನು? ನಿಮ್ಮ ತವರು ಮನೆಯ ಊರು ಯಾವುದು? ಮಕ್ಕಳೆಷ್ಟುಜನ, ಜಮೀನು ಎಷ್ಟುಇದೆ? ಜೀವನೋಪಾಯಕ್ಕೆ ಏನು ಕೆಲಸ ಮಾಡುತ್ತೀರಿ ಎಂಬಿತ್ಯಾದಿಯಾಗಿ ಅವರನ್ನು ವಿಚಾರಿಸಿದರು. ಮಕ್ಕಳಗೆ ಉತ್ತಮವಾಗಿ ಶಿಕ್ಷಣ ನೀಡಬೇಕು ಎಂದು ಸಿಎಂ ಪರಮಣ್ಣ ಕುಟುಂಬಸ್ಥರಿಗೆ ಹೇಳಿದರು. ಕುಟುಂಬಸ್ಥರಿಂದ ಸಿಎಂಗೆ ಸನ್ಮಾನಿಸಲಾಯಿತು.

ಸಿಎಂ ಬಂದಿದ್ದೇ ನಮ್ಮ ಭಾಗ್ಯ:

ಸಿಎಂ ಬೊಮ್ಮಾಯಿ ಅವರ ಆಗಮನದಿಂದ ನಮ್ಮ ಕುಟುಂಬದ ಸದಸ್ಯರಿಗೆ ಬಹಳ ಸಂತೋಷವಾಗಿದೆ. ಎರಡು ದಿನಗಳ ಹಿಂದೆ ಸಿಎಂ ಅವರು ನಮ್ಮ ಮನೆಗೆ ಬರುತ್ತಿದ್ದಾರೆ ಎಂಬ ವಿಷಯ ಕೇಳಿದ ತಕ್ಷಣದಿಂದಲೂ ಅವರ ಬರುವಿಕೆಗಾಗಿ ನಾವು ಕಾಯುತ್ತಿದ್ದೆವು. ನಮ್ಮಂತಹ ಬಡ, ದಲಿತರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಭೇಟಿ ನೀಡಿ, ನಮ್ಮ ಕುಟುಂಬ ಸದಸ್ಯರ ಪರಿಚಯ ಮಾಡಿಕೊಂಡು ಉಪಾಹಾರ ಸೇವಿಸಿ ಹೋಗಿರುವದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಶಾರದಾ ಕಟ್ಟಿಮನಿ ಖುಷಿ ವ್ಯಕ್ತಪಡಿಸಿದರು. ಸಿಎಂ ಬೊಮ್ಮಾಯಿ ಹಾಗೂ ಸಚಿವರಿಗೆ ಹುಣಸಗಿ ಪಟ್ಟದ ಜನತಾ ಕಾಲೋನಿಯ ಪರಿಶಿಷ್ಟಜಾತಿಯ ಮಾದಿಗ ಸಮುದಾಯದ ಪರವಾಗಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು

click me!