Tumakur ತಾಂತ್ರಿಕ ದೋಷ- ಕಾಂತಾರ ಸಿನಿಮಾ ಅರ್ಧಕ್ಕೆ ಬಂದ್‌

By Kannadaprabha News  |  First Published Oct 23, 2022, 4:46 AM IST

: ತಾಂತ್ರಿಕ ದೋಷದಿಂದ ಕಾಂತಾರ ಸಿನಿಮಾ ಅರ್ಧಕ್ಕೆ ಬಂದ್‌ ಆಗಿದ್ದರಿಂದ ಟಿಕೆಟ್‌ ಹಣ ವಾಪಾಸ್‌ ನೀಡುವಂತೆ ಪ್ರೇಕ್ಷಕರು ತುಮಕೂರಿನ ಗಾಯತ್ರಿ ಚಿತ್ರಮಂದಿರದ ಬಳಿ ಗಲಾಟೆ ಮಾಡಿದ ಘಟನೆ ನಡೆದಿದೆ.


 ತುಮಕೂರು: ತಾಂತ್ರಿಕ ದೋಷದಿಂದ ಕಾಂತಾರ ಸಿನಿಮಾ ಅರ್ಧಕ್ಕೆ ಬಂದ್‌ ಆಗಿದ್ದರಿಂದ ಟಿಕೆಟ್‌ ಹಣ ವಾಪಾಸ್‌ ನೀಡುವಂತೆ ಪ್ರೇಕ್ಷಕರು ತುಮಕೂರಿನ ಗಾಯತ್ರಿ ಚಿತ್ರಮಂದಿರದ ಬಳಿ ಗಲಾಟೆ ಮಾಡಿದ ಘಟನೆ ನಡೆದಿದೆ.

ತುಮಕೂರಿನ (Tumakur)  ಗಾಯತ್ರಿ ಚಿತ್ರಮಂದಿರದಲ್ಲಿ ಶನಿವಾರ ಮ್ಯಾಟನಿ ಶೋ ನಲ್ಲಿ ಕಾಂತಾರ ಸಿನಿಮಾ (Movie) ಪ್ರದರ್ಶನವಾಗುತ್ತಿತ್ತು. ಸಿನಿಮಾ ಇನ್ನು ಅರ್ಧ ಗಂಟೆ ಬಾಕಿ ಇದ್ದಾಗ ತಾಂತ್ರಿಕ ದೋಷದಿಂದ ಸೌಂಡ್‌ ಪ್ರೊಸೆಸ್‌ ಬಂದ್‌ ಆಗಿದ್ದರಿಂದ ಪ್ರೇಕ್ಷಕರು ಸಿಟ್ಟಾದರು.

Tap to resize

Latest Videos

ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್‌ ನೋಡುವ ಖುಷಿಯಲ್ಲಿದ್ದ ಪ್ರೇಕ್ಷಕರಿಗೆ ಸಿನಿಮಾ ನಿಂತಿದ್ದು ಕೆರಳಿಸಿತು. ಚಿತ್ರಮಂದಿರದ ಮುಂದೆ ಗಲಾಟೆ ಮಾಡಿ ಟಿಕೆಟ್‌ ಹಣ ವಾಪಸ್‌ ನೀಡುವಂತೆ ಪಟ್ಟು ಹಿಡಿದರು.

ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಿತ್ರಮಂದಿರದ ಮುಂದೆ ಬಂದೋಬಸ್‌್ತ ಹಾಕಿದರು. ಬಳಿಕ ಟಿಕೆಟ್‌ ಹಣವನ್ನು ಚಿತ್ರಮಂದಿರದವರು ಪ್ರೇಕ್ಷಕರಿಗೆ ನೀಡಿದರು.

ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯ ಪ್ರದರ್ಶನ ಕೂಡ ರದ್ದಾಯಿತು. 650 ಸೀಟುಗಳಳ್ಳು ಚಿತ್ರಮಂದಿರದಲ್ಲಿ ಎಲ್ಲ ಸೀಟುಗಳು ತುಂಬಿತ್ತು. ಹಣ ವಾಪಸ್‌ ಪಡೆದ ಪ್ರೇಕ್ಷಕರು ಸಿನಿಮಾ ಪೂರ್ತಿಯಾಗಿ ನೋಡದೇ ಬೇಸರದಲ್ಲಿ ನಿರ್ಗಮಿಸಿದರು. ಸಂಜೆ 5 ಗಂಟೆಗೆ ಟಿಕೆಟ್‌ ಬುಕ್‌ ಮಾಡಿದವರಿಗೂ ಕೂಡ ಸಿನಿಮಾ ಪ್ರದರ್ಶನವಿಲ್ಲದೆ ನಿರಾಸೆಯಾಯಿತು.

ತಾಂತ್ರಿಕ ದೋಷ- ಕಾಂತಾರ ಸಿನಿಮಾ ಅರ್ಧಕ್ಕೆ ಬಂದ್‌

ತಾಂತ್ರಿಕ ದೋಷ- ಕಾಂತಾರ ಸಿನಿಮಾ ಅರ್ಧಕ್ಕೆ ಬಂದ್‌

ಭರ್ಜರಿ ಕಲೆಕ್ಷನ್ : 

ಭಾರತೀಯ ಸಿನಿಮಾರಂಗದಲ್ಲಿ ಕಾಂತಾರ ಸಿನಿಮಾದ ಹವಾ ಜೋರಾಗಿದೆ. ಎಲ್ಲಾ ಭಾಷೆಗಳಿಂದನೂ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಕಾಂತಾರ ಭರ್ಜರಿ ಕಲೆಕ್ಷನ್ ಮಾಡಿದೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಸಿನಿಮಾ ಇಂದಿಗೂ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 

ಕಾಂತಾರ ಮುಂಬೈನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. 3ನೇ ದಿನವೂ ಜನ ಮುಗಿ ಬಿದ್ದು ಸಿನಿಮಾ ವೀಕ್ಷಿಸಿದ್ದಾರೆ.  ಭಾನುವಾರ (ಅಕ್ಟೋಬರ್ 16) ಸಹ ಕಾಂತಾರ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.  ದಿನದಿಂದ ದಿನಕ್ಕೆ ಕಾಂತಾರ ಕಲೆಕ್ಷನ್ ಹೆಚ್ಚಾಗುತ್ತಿದೆ. ಮೊದಲ ದಿನಕ್ಕಿಂತ ಎರಡು ಮತ್ತು ಮೂರನೇ ದಿನ ಕೂಡ ಹೆಚ್ಚಾಗಿದೆ. ಭಾನುವಾರ (ಅಕ್ಟೋಬರ್ 16) ಕಾಂತಾರ ಬರೋಬ್ಬರಿ 3.50 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ವರದಿಯಾಗಿದೆ. ಕಾಂತಾರ ಅಬ್ಬರ ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿದೆ. ಈಗಾಗಲೇ ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ. ಇದೀಗ ಕಾಂತಾರ ಹವಾ ಕೂಡ ನಡುಕ ಹುಟ್ಟಿಸಿದೆ. ದಿನದಿಂದ ದಿನಕ್ಕೆ ಕಾಂತಾರ ಕಲೆಕ್ಷನ್ ಹೆಚ್ಚಾಗುತ್ತಿದೆ. ಮೊದಲ ದಿನಕ್ಕಿಂತ ಎರಡು ಮತ್ತು ಮೂರನೇ ದಿನ ಜಾಸ್ತಿಯಾಗಿದೆ.

ಹಿಂದಿಯಲ್ಲಿ ಮೊದಲ ದಿನ ಕಾಂತಾರ 1.27 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ 2.75 ಕೋಟಿ ರೂಪಾಯಿಗೆ ಏರಿಕೆ ಆಯಿತು. 3ನೇ ದಿನ 3.50ಕೋಟಿ ರೂಪಾಯಿ ಬಾಚಿಕೊಂಡಿದೆ. ಅಂದಹಾಗೆ ಕಾಂತಾರ ಮೊದಲ ವಾರದ ಕಲೆಕ್ಷನ್ ಮಣಿತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಗಳಿಯಷ್ಟೆ ಆಗಿದೆ. ಮೊದಲ ವಾರ ಪೊನ್ನಿಯಿನ್ ಸೆಲ್ವನ್ ಹಿಂದಿಯಲ್ಲಿ 7.65 ಕೋಟಿ ರೂಪಾಯಿ ಬಾಚಿಕೊಂಡಿತ್ತ. ಕಾಂತಾರ ಹಿಂದಿಯಲ್ಲಿ 7.52 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಕಾಂತಾರ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಯಾರು ಗೊತ್ತಾಯ್ತಾ? ಇವ್ರೇ ರೀ 'ಕಾಂತಾರ'ದ ಶೀಲಾ; ನಿಜಕ್ಕೂ ಯಾರಿವರು, ಇಲ್ಲಿದೆ ಸಂಪೂರ್ಣ ಮಾಹಿತಿ

ಅತೀ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ 

ರೇಟಿಂಗ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಮತ್ತು ಆರ್ ಆರ್ ಆರ್ ಸಿನಿಮಾವನ್ನು ಹಿಂದಿಕ್ಕಿದೆ. ಹೌದು, ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ ಕಾಂತಾರ.  IMDb ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದೆ ಕಾಂತಾರ.  IMDbಯಲ್ಲಿ ಕಾಂತಾರ ಸಿನಿಮಾಗೆ 9.6 ರೇಟಿಂಗ್ ನೀಡಲಾಗಿದೆ. ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಇದಾಗಿದೆ. ಅಂದಹಾಗೆ ಕೆಜಿಎಫ್-2 ಸಿನಿಮಾಗೆ 10ಕ್ಕೆ 8.4 ನೀಡಲಾಗಿತ್ತು. ಇನ್ನು ಆರ್ ಆರ್ ಆರ್ ಸಿನಿಮಾಗೆ 10ಕ್ಕೆ 8 ರೇಟಿಂಗ್ ನೀಡಲಾಗಿತ್ತು. ಇದೀಗ ಕಾಂತಾರ ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

OMG..! ಎಂಥಾ ಸಿನಿಮಾ, ಮತ್ತೆ ನನ್ನ ಊರಿಗೆ ಕೊಂಡೊಯ್ತು; 'ಕಾಂತಾರ' ನೋಡಿದ ಶಿಲ್ಪಾ ಶೆಟ್ಟಿ

 ಕಾಂತಾರ ಬಗ್ಗೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. 

click me!