ಉಡುಪಿ ಯಕ್ಷಗಾನ ಕೇಂದ್ರಕ್ಕೆ ಗುರು ಸಂಜೀವ ಸುವರ್ಣ ರಾಜಿನಾಮೆ

By Kannadaprabha NewsFirst Published Aug 31, 2022, 4:15 AM IST
Highlights
  •  ಉಡುಪಿ ಯಕ್ಷಗಾನ ಕೇಂದ್ರಕ್ಕೆ ಗುರು ಸಂಜೀವ ಸುವರ್ಣ ರಾಜಿನಾಮೆ
  • ಮೂರೂವರೆ ದಶಕಗಳ ಬೋಧನಾ ಕಾಯಕಕ್ಕೆ ವಿದಾಯ
  • ಅಪಾರ ಶಿಷ್ಯವೃಂದಕ್ಕೆ ತೀವ್ರ ನೋವು

ಉಡುಪಿ (ಆ.31) : ಮಣಿಪಾಲದ ಮಾಹೆ ವಿ.ವಿ.ಯ ಆಡಳಿತದಡಿ ನಡೆಯುತ್ತಿರುವ ಇಲ್ಲಿನ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಗುರು (ಪ್ರಾಂಶುಪಾಲ) ಸಂಜೀವ ಸುವರ್ಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸುಮಾರು 35 ವರ್ಷಗಳಿಗೂ ಅಧಿಕ ಕಾಲ ಕೇಂದ್ರದಲ್ಲಿ ಯಕ್ಷಗಾನ ಗುರುಗಳಾಗಿ ದೇಶದ ವಿವಿಧ ರಾಜ್ಯಗಳ ಮಾತ್ರವಲ್ಲ ಹತ್ತಾರು ದೇಶಗಳ ಆಸಕ್ತರೂ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿಗೆ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಗುರುಕುಲ ಪದ್ಧತಿಯಲ್ಲಿ ಕಲಿಸಿದವರು ಸುವರ್ಣರು. ಅವರ ಈ ಹಠಾತ್‌ ನಿರ್ಧಾರದಿಂದ ಅವರ ಶಿಷ್ಯ ಬಳಗಕ್ಕೆ ನೋವಾಗಿದೆ. ತಮ್ಮ ರಾಜಿನಾಮೆಯ ಬಗ್ಗೆ ಸುವರ್ಣರೂ ಮೌನವಾಗಿದ್ದಾರೆ. ಸಂಸ್ಥೆಯ ಅಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ ಸಂಜೀವ ಸುವರ್ಣರ ಶಿಷ್ಯರು.

ಯಕ್ಷಗಾನಕ್ಕೆ ಅವಮಾನ: ಕ್ಷಮೆ ಕೇಳಿದ ಜೀ ಕನ್ನಡ ವಾಹಿನಿ

ಜ್ಞಾನಪೀಠ ಶಿವರಾಮ ಕಾರಂತರು ಮಣಿಪಾಲ ಎಜ್ಯುಕೇಶನ್‌ ಅಕಾಡೆಮಿಯ ಸಹಯೋಗದಲ್ಲಿ ಸ್ಥಾಪಿಸಿದ ಈ ಕೇಂದ್ರದಲ್ಲಿ ಜೀವನವಿಡೀ ಯಕ್ಷಗಾನವನ್ನು ಕಲಿಸುವುದಕ್ಕಾಗಿಯೇ ಮೀಸಲಿಟ್ಟಸುವರ್ಣರು, ಚಿಕ್ಕ ಮಕ್ಕಳಿಂದ ಹಿಡಿದು ನಿವೃತ್ತರಿಗೂ ಯಕ್ಷಗಾನ ಕಲಿಸಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ, ರಾಜಕಾರಣಿಗಳು, ಉದ್ಯಮಿಗಳು, ವೈದ್ಯರು, ಮಹಿಳೆಯರು ಹೀಗೆ ಯಾರು ಬಂದು ಕೇಳಿದರೂ ಉಚಿತವಾಗಿ ಯಕ್ಷಗಾನ ಕಲಿಸಿದ್ದಾರೆ. ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಹೇಳಿಕೊಟ್ಟಿದ್ದಾರೆ. ಬುದ್ಧಿಮಾಂದ್ಯ ಮಕ್ಕಳಿಗೂ ಯಕ್ಷಗಾನ ಹೇಳಿಕೊಟ್ಟು ಪ್ರದರ್ಶಿಸುವಂತೆ ಮಾಡಿದ್ದಾರೆ.

ಉಡುಪಿ: ಇಲ್ಲಿ ದೇವಿಗೆ ಯಕ್ಷಗಾನ ಹರಕೆ ತೀರಿಸಲು 2043ರವರೆಗೂ ಕಾಯಬೇಕು!

ಮನೆಯಲ್ಲಿ ಸಣ್ಣಪುಟ್ಟಭಿನ್ನಮತಗಳು ಇರುತ್ತವೆ, ಅದನ್ನು ಸರಿಪಡಿಸಿ ಸುವರ್ಣರನ್ನು ಗುರುಗಳಾಗಿ ಮುಂದುವರಿಸಬೇಕು ಎನ್ನುವ ಅವರ ಶಿಷ್ಯರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ. ಆದರೆ ಸುವರ್ಣ ಅವರ ರಾಜಿನಾಮೆ ಈಗಾಗಲೇ ಸ್ವೀಕೃತವಾಗಿದೆ.

click me!