ಭಗವದ್ಗೀತೆ ಕೈಯಲ್ಲಿ ಹಿಡಿದರೆ ಧರ್ಮ ರಕ್ಷಣೆ ಸಾಧ್ಯ: ಹಾರಿಕಾ ಮಂಜುನಾಥ

By Kannadaprabha News  |  First Published Aug 31, 2022, 12:13 AM IST

 ಶ್ರೀಕೃಷ್ಣ ಪರಮಾತ್ಮನ ಮಹಾಭಾರತದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ. ಜಾತಿ ಮತ ಭೇದವೆಂಬ ವಿಷಬೀಜ ಬಿತ್ತಿ ಹಿಂದೂ ಧರ್ಮವನ್ನು ಹೊಡೆದಾಳುವ ನೀತಿಯ ವಿರುದ್ಧ ಧ್ವನಿ ಎತ್ತಿ ಹಿಂದೂ ಧರ್ಮವನ್ನು ಉಳಿಸುವ, ಒಗ್ಗೂಡಿಸುವ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸಂಘಟನೆ ತಲೆ ಎತ್ತಿದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.


ಸುಳ್ಯ (ಆ.31) : ಶ್ರೀಕೃಷ್ಣ ಪರಮಾತ್ಮನ ಮಹಾಭಾರತದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ. ಜಾತಿ ಮತ ಭೇದವೆಂಬ ವಿಷಬೀಜ ಬಿತ್ತಿ ಹಿಂದೂ ಧರ್ಮವನ್ನು ಹೊಡೆದಾಳುವ ನೀತಿಯ ವಿರುದ್ಧ ಧ್ವನಿ ಎತ್ತಿ ಹಿಂದೂ ಧರ್ಮವನ್ನು ಉಳಿಸುವ ಹಾಗೂ ಒಗ್ಗೂಡಿಸುವ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸಂಘಟನೆ ತಲೆ ಎತ್ತಿದೆ. ಹಿಂದೂ ಧರ್ಮದಲ್ಲಿ ಇರುವ ಜಾತಿ ಸಂಕೋಲೆಯನ್ನು ಕಿತ್ತು ಎಸೆದು ಹಿಂದೂ ಬಾಂಧವರು ಸಂಘಟಿತರಾಗಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಗೃಹ ಸಚಿವರನ್ನು ಕಿತ್ತು ಹಾಕ್ಬೇಕು: ಸಿದ್ದರಾಮಯ್ಯ

Tap to resize

Latest Videos

ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಸುಳ್ಯದಲ್ಲಿ ಸೋಮವಾರ ಆಯೋಜಿಸಿದ್ದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಹರೀಶ್‌ ರೈ ಉಬರಡ್ಕ ವಹಿಸಿದ್ದರು. ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್‌್ಕ, ಮಂಗಳೂರು ವಿಭಾಗದ ವಿ.ಎಚ್‌.ಪಿ. ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್‌ ಶೆಟ್ಟಿ, ಬಜರಂಗದಳ ಜಿಲ್ಲಾ ಸಂಚಾಲಕ ಭರತ್‌ ಕುಮ್ಡೇಲು, ವಿ.ಎಚ್‌.ಪಿ. ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಸುಳ್ಯ ಐಡಿಯಲ್‌ ಆಟೋ ವP್ಸ…ರ್‍ ಮಾಲಕ ಭಾಸ್ಕರ ಗೌಡ, ವಿ.ಎಚ್‌.ಪಿ. ಅಧ್ಯಕ್ಷ ಸೋಮಶೇಖರ ಪೈಕ, ಉತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್‌ ಯಾದವ್‌, ಕೋಶಾಧಿಕಾರಿ ರಂಜಿತ್‌ ಕುಮಾರ್‌ ಪಿ., ಬಜರಂಗದಳ ಸಂಯೋಜಕ್‌ ಸಂದೀಪ್‌ ವಳಲಂಬೆ, ದುರ್ಗಾವಾಹಿನಿ ಸಂಯೋಜಕಿ ನಮಿತ ಪ್ರವೀಣ್‌ ರಾವ್‌ ಉಪಸ್ಥಿತರಿದ್ದರು.

ಸುಳ್ಯ, ಮಡಿಕೇರಿಯಲ್ಲಿ ಮತ್ತೆ ಭೂಕಂಪನ: ಬಿರುಕುಬಿಟ್ಟ ಭೂಮಿ

ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್‌್ಕ ಅವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಬಾಲವಾಗ್ಮಿ ಕು. ಹಾರಿಕಾ ಮಂಜುನಾಥ ಅವರನ್ನು ಅಭಿನಂದಿಸಲಾಯಿತು. ಸಂದೀಪ್‌ ವಳಲಂಬೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಕಾಶ್‌ ಯಾದವ್‌ ವಂದಿಸಿದರು. ಶ್ರೀದೇವಿ ನಾಗರಾಜ್‌ ಭಟ್‌ ನಿರೂಪಿಸಿದರು.

click me!