ಶಾಂತವಾಗಿರುವ ಮಲೆನಾಡಿನಲ್ಲಿ ಬಂದೂಕಿನ ಸದ್ದು, ಕಾಡು ಪ್ರಾಣಿಗಳ ಉಪಟಳಕ್ಕೆ ವಿನಿಯೋಗ ಬದಲು ಪ್ರತೀಕಾರಕ್ಕೆ ಬಳಕೆ!

Published : Feb 23, 2023, 09:10 PM IST
ಶಾಂತವಾಗಿರುವ ಮಲೆನಾಡಿನಲ್ಲಿ ಬಂದೂಕಿನ ಸದ್ದು, ಕಾಡು ಪ್ರಾಣಿಗಳ ಉಪಟಳಕ್ಕೆ ವಿನಿಯೋಗ ಬದಲು ಪ್ರತೀಕಾರಕ್ಕೆ ಬಳಕೆ!

ಸಾರಾಂಶ

ಗನ್ ಶಾಟ್ ದುರಂತಕ್ಕೆ ಸಾಕ್ಷಿ ಆಗುತ್ತಿರುವ ಮಲೆನಾಡು. ಚಿಕ್ಕಮಗಳೂರು ಜಿಲ್ಲೆಯ ನಾಗರೀಕರಲ್ಲಿ ಹೆಚ್ಚಿದ ಆತಂಕ. ಕಠಿಣ ಕ್ರಮಕ್ಕೆ ಒತ್ತಾಯ ಮಾಡಿರುವ ಜಿಲ್ಲೆಯ ಜನರು.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.23): ಶಾಂತವಾಗಿದ್ದ ಮಲೆನಾಡು ಬೆಚ್ಚಿ ಬೀಳತೊಡಗಿದೆ. ಕಾಫಿ ತೋಟಗಳ ನೀರವ ಪರಿಸರದಲ್ಲಿ ಬಂದೂಕುಗಳ ಸದ್ದು ಮೊರೆಯತೊಡಗಿದೆ. ಹಸಿರಿನ ನೆಲಕ್ಕೆ ನೆತ್ತರಿನ ಕಮಟು ಅಂಟಿಕೊಳ್ಳತೊಡಗಿದೆ. ಆತ್ಮರಕ್ಷಣೆ ಜತೆಗೆ ಕಾಡು ಪ್ರಾಣಿಗಳ ಉಪಟಳ ನಿಯಂತ್ರಣಕ್ಕೆ ಸದ್ವಿನಿಯೋಗವಾಗಬೇಕಿದ್ದ ಸಾಧನಗಳು ಸೇಡು-ಪ್ರತೀಕಾರಕ್ಕೆ ಬಳಕೆಯಾಗ ತೊಡಗಿವೆ. ಅದರಲ್ಲೂ ಯಾವ ಕ್ಷಣದಲ್ಲಾದರೂ ನಡೆಯಬಹುದಾದ ಅವಘಡಗಳಲ್ಲೊಂದಾಗಿ ಗುರುತಿಸಿಕೊಳ್ಳುತ್ತಿರುವ ಗನ್ಶಾಟ್ ದುರಂತಗಳು ಮಲೆನಾಡ ಪರಿಸರದಲ್ಲೊಂದು ಗುಮ್ಮನನ್ನು ಸೃಷ್ಟಿಸತೊಡಗಿವೆ.

ಸದ್ವಿನಿಯೋಗವಾಗಬೇಕಿದ್ದ ಬಂದೂಕು ಸೇಡು ಪ್ರತೀಕಾರಕ್ಕೆ ಬಳಕೆ:
ಚಿಕ್ಕಮಗಳೂರು ಜಿಲ್ಲೆ ಬಹುತೇಕ ಕಾಫಿ ತೋಟಗಳು ಹಾಗೂ ಅರಣ್ಯ ಪ್ರದೇಶಗಳಿಂದ ಆವೃತ್ತವಾಗಿರುವ ಜಿಲ್ಲೆಯಾಗಿದೆ. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ ತೋಟಗಳು ಅರಣ್ಯಕ್ಕೆ ಹೊಂದಿಕೊಂಡಂತೆ ಇವೆ. ಹೀಗಾಗಿ ಕಾಫಿ ತೋಟಗಳಿಗೆ ಕಾಡು ಪ್ರಾಣಿಗಳು ಲಗ್ಗೆ ಹಾಕುವುದು ಸರ್ವೆ ಸಾಮಾನ್ಯ. ಅಲ್ಲದೆ ಒಂಟಿ ಮನೆಗಳು ಇರುವುದು ಕೂಡ ಸ್ವಯಂ ಭದ್ರತೆಗೆ ಬಂದೂಕು ಅತ್ಯವಶ್ಯಕವಾಗಿರುತ್ತದೆ. ಹೀಗಾಗಿ ಸಣ್ಣ ಮತ್ತು ಮಧ್ಯಮ, ದೊಡ್ಡ ಬೆಳೆಗಾರರು ಸಾಮಾನ್ಯವೆಂಬಂತೆ ಬಂದೂಕುಗಳನ್ನು ಇರಿಸಿಕೊಂಡಿರುತ್ತಾರೆ. ಆದ್ರೆ ಬಂದೂಕುಗಳನ್ನು ಇರಿಸಿಕೊಳ್ಳಲು ಸಾಕಷ್ಟು ಕಠಿಣ ನಿಯಮಾವಳಿಗಳನ್ನು ಪಾಲನೆ ಮಾಡಬೇಕಿದೆ. ಇವೆಲ್ಲವನ್ನೂ ಪಾಲನೆ ಮಾಡಲು ಸಾಧ್ಯವಾಗದೆ ಇರುವುದರಿಂದ ಲೈಸೆನ್ಸ್ ರಹಿತ ಬಂದೂಕುಗಳೇ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ಬಳಸಿಕೊಂಡು ಸಣ್ಣಪುಟ್ಟ ಘಟನೆಗಳು ನಡೆದ್ರೂ ಬಂದೂಕುಗಳನ್ನು ಬಳಸಿ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಳ್ಳುವುದು ಸರ್ವೆ ಸಾಮಾನ್ಯ ಎಂಬಂತಾಗಿದೆ.

ಕಠಿಣ ಕ್ರಮಕ್ಕೆ ಒತ್ತಾಯ ಮಾಡಿರುವ ಜಿಲ್ಲೆಯ ಜನರು:
ಜಿಲ್ಲೆಯಲ್ಲಿ ಅಂಕಿ ಅಂಶದ ಪ್ರಕಾರ 14400 ಜನರಿಗೆ ವಿವಿಧ ರೀತಿಯ ಬಂದೂಕುಗಳಿಗೆ ಲೈಸೆನ್ಸ್ ನೀಡಲಾಗಿದೆ. ಹೆಚ್ಚಾಗಿ ಕಾಫಿ ಬೆಳೆಗಾರರು ಬಳಕೆ ಮಾಡುವ ಸ್ ಬಿ ಎಂ ಎಲ್ (ಮಜಲ್ ಲೋಡಿಂಗ್ ಬಂದೂಕು)ಗಳನ್ನು 10000 ಜನರಿಗೆ ನೀಡಲಾಗಿದ್ದು, 4400 ಜನರಿಗೆ ಸಿಂಗಲ್ ಬ್ಯಾರೆಲ್ ಬಂದೂಕು ಲೈಸೆನ್ಸ್ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ಬಂದೂಕು ಲೈಸೆನ್ಸ್ ಪಡೆಯುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ. ಹಲವು ಬಾರಿ ಇಂತಹ ಬಂದೂಕುಗಳಿಂದ ಅನಾಹುತಗಳು ನಡೆದ್ರೆ ಅವು ಬೆಳಕಿಗೆ ಬರುವುದಿಲ್ಲ. ಅರಣ್ಯ ಪ್ರದೇಶ ಇರುವುದರಿಂದ ಬೇಟೆಯಾಡಲು ವ್ಯಾಪಕ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ.

Chikkamagaluru: ಜೆ.ಪಿ.ನಡ್ಡಾ ಬೆನ್ನಲ್ಲೇ ಶೃಂಗೇರಿ ಮಠಕ್ಕೆ ಎಚ್.​ಡಿ.ಕುಮಾರಸ್ವಾಮಿ ಭೇಟಿ

ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಸದ್ಯ ಚುನಾವಣೆ ಹಿನ್ನಲೆ ಬಂದೂಕುಗಳನ್ನು ಪೊಲೀಸ್  ಲೈಸೆನ್ಸ್ ಇರುವ ಬಂದೂಕುಗಳ ಜತೆಗೆ ಕೆಲವು ಪ್ರಕರಣಗಳಲ್ಲಿ ಪರವಾನಗಿ ರಹಿತ ಬಂದೂಕುಗಳನ್ನು ಗನ್ ಶಾಟ್ಗೆ ಬಳಸಿರುವುದು ಹಲವಾರು ಅನುಮಾನ ಸೃಷ್ಟಿಸಿದೆ. ಬಿದಿರೆ ಗ್ರಾಮದ ಪ್ರಕರಣದಲ್ಲಿ ಅಂಗನವಾಡಿನ ಸಹಾಯಕಿಗೆ  ನಾಡ ಬಂದೂಕಿನಿಂದ ಬೆದರಿಸಲು ಹೋಗಿ ಇಬ್ಬರ ಸಾವಿಗೆ ಕಾರಣವಾಗಿರುವ ಆರೋಪಿ ರಮೇಶ್  ಬಳಸಿದ್ದು ಕೂಡ ಅನಧೀಕೃತ ನಾಡಬಂದೂಕನ್ನು, ಈ ಹಿನ್ನಲೆಯಲ್ಲಿ ಆರೋಪಿ ರಮೇಶ್ ನಿಗೆ ಬಂದೂಕು ಎಲ್ಲಿಂದ ಲಭ್ಯವಾಯಿತೆನ್ನುವ ನಿಟ್ಟಿನಲ್ಲಿ  ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Crime News: 18 ನಾಡ ಬಂದೂಕು ವಶ: ಇಬ್ಬರಿಗೆ ನ್ಯಾಯಾಂಗ ಬಂಧನ

ನೈಜ ಉದ್ದೇಶಕ್ಕೆ ಬಳಕೆಯಾಗಬೇಕಿದ್ದ ಕಾಫಿ ತೋಟಗಳಲ್ಲಿನ ಬಂದೂಕುಗಳು ದುರುದ್ದೇಶ ಈಡೇರಿಕೆಗೆ ಸೀಮಿತವಾಗುತ್ತಿರುವುದು ನಾಗರೀಕರಲ್ಲಿ ಆತಂಕ ಹೆಚ್ಚಾಗಿದ್ದು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ಬಂದೂಕುಗಳು ಎಲ್ಲೆಲ್ಲಿ ಸರಿದಾಡುತ್ತಿವೆ ಎನ್ನುವುದನ್ನು ಅವಲೋಕಿಸಬೇಕಿದೆ. ಪೊಲೀಸರು ಎಸ್ಟೇಟ್ಗಳಲ್ಲಿರುವ ಬಂದೂಕುಗಳ ಪರ ವಾನಗಿ ಬಗ್ಗೆ ತನಿಖೆ ನಡೆಸಬೇಕಿದೆ. ನಗರದಲ್ಲಿರುವ ಬಂದೂಕು ತಯಾರಿಕಾ ಕೇಂದ್ರಗಳ ಮೇಲೆ ನಿಗಾ ಇಡ ಬೇಕಿದೆ. ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅನಧೀಕೃತ ನಾಡ ಬಂದೂಕುಗಳು ಎಲ್ಲಿಂದ ಪೂರೈಕೆಯಾಗುತ್ತಿವೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ  ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು