ತಬ್ಲಿಘಿ ಘಟನೆ ಪೋಸ್ಟ್ ಹಾಕಿದರವ್ರನ್ನ ಕೆಲಸದಿಂದ ಕಿತ್ತು ಹಾಕಿದ ಕೊಲ್ಲಿ ರಾಷ್ಟ್ರ

By Kannadaprabha News  |  First Published Apr 29, 2020, 8:30 AM IST

ಕೊಲ್ಲಿ ರಾಷ್ಟ್ರದಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದವರು ದೆಹಲಿಯ ತಬ್ಲಿಘೀ ಘಟನೆಯನ್ನು ಪೋಸ್ಟ್‌ ಅಥವಾ ಫಾರ್ವರ್ಡ್‌ ಮಾಡಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದೆ. 


ಮಂಗಳೂರು(ಏ.29): ಎಲ್ಲೆಡೆ ಲಾಕ್‌ಡೌನ್‌ನ ಈ ಸಂಕಷ್ಟದ ಸಮಯದಲ್ಲಿ ಒಳ್ಳೆಯ ನೌಕರಿ, ಕೈತುಂಬ ವೇತನ ಜೊತೆಗೆ ಕೊಲ್ಲಿ ರಾಷ್ಟ್ರದಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದ ಕರಾವಳಿ ಮೂಲದ ಕೆಲವರ ನೌಕರಿಗೆ ಸಾಮಾಜಿಕ ಜಾಲತಾಣದಲ್ಲಿ ಅವರೇ ಹಾಕಿರುವ ಹಳೆ ಪೋಸ್ಟರ್‌ಗಳು ಮುಳುವಾಗಿವೆ.

ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!

Tap to resize

Latest Videos

ಲೌಕ್‌ಡೌನ್‌ ವೇಳೆಯಲ್ಲಿ ಕುವೈಟ್‌ನಲ್ಲಿರುವ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಪತ್ನಿ ಕುವೈಟ್‌ ಆಸ್ಪತ್ರೆಯೊಂದರಲ್ಲಿ ತಾಂತ್ರಿಕ ವಿಭಾಗದ ಪರಿಣಿತೆ. ಈಗ ಅವರು ಕೂಡ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ವರ್ಷದ ಹಿಂದೆ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಹಾಕಿರುವ ಭಯೋತ್ಪಾದಕ ಜಿಹಾದಿಗಳನ್ನು ಲೇವಡಿ ಮಾಡುವ ಕಾರ್ಟೂನ್‌ ಪೋಸ್ಟನ್ನು ಫಾರ್ವರ್ಡ್‌ ಮಾಡಿರುವುದು.

ಕೊಡಂಗಳ ನದಿಯಲ್ಲಿ ಪಿಪಿಇ ಪತ್ತೆ, ಕೊರೋನಾ ಭೀತಿ

ದೆಹಲಿಯ ತಬ್ಲಿಘೀ ಘಟನೆಯನ್ನು ಪೋಸ್ಟ್‌ ಅಥವಾ ಫಾರ್ವರ್ಡ್‌ ಮಾಡಿದವರಿಗೂ ಇದೇ ಗತಿ ಆಗಿದೆ. ಈಗಾಗಲೇ ಮೂರು ಮಂದಿ ಕರಾವಳಿಗರು ಉದ್ಯೋಗ ಕಳಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಚಟುವಟಿಕೆ ಮೇಲೆ ಕಣ್ಣಿಟ್ಟಿರುವ ಗುಂಪೊಂದು ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿಯಲ್ಲಿರುವ ಕರಾವಳಿಯ ನಿರ್ದಿಷ್ಟಸಮುದಾಯದ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ.

ಈ ಗುಂಪು ಧಾರ್ಮಿಕ ಕಾರಣಗಳಿಗೆ ಆಕ್ಷೇಪಿಸಲು ಅವಕಾಶವಿರುವ ಪೋಸ್ಟ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ಕುವೈಟ್‌ ಮಿನಿಸ್ಟ್ರಿ ಆಫ್‌ ಇಂಟೀರಿಯರ್‌ನ ಸಂಬಂಧಪಟ್ಟವಿಭಾಗ ಹಾಗೂ ಉದ್ಯೋಗಿ ಉದ್ಯೋಗ ನಡೆಸುವ ಸಂಸ್ಥೆ ಮಾಲೀಕರಿಗೆ ಟ್ಯಾಗ್‌ ಮಾಡುತ್ತದೆ. ಪರಿಣಾಮ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವವರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ.

click me!