ಶಬರಿಮಲೆಯಲ್ಲಿ ಸುಸಜ್ಜಿತ ಯಾತ್ರಿನಿವಾಸ..?

Kannadaprabha News   | Asianet News
Published : Jan 23, 2020, 09:18 AM IST
ಶಬರಿಮಲೆಯಲ್ಲಿ ಸುಸಜ್ಜಿತ ಯಾತ್ರಿನಿವಾಸ..?

ಸಾರಾಂಶ

ದೇಶದ ಪುಣ್ಯ ಕ್ಷೇತ್ರಗಳಲ್ಲೊಂದಾದ, ವರ್ಷಂಪ್ರತಿ ಕೋಟ್ಯಂತರ ಅಯ್ಯಪ್ಪ ವ್ರತಧಾರಿಗಳು ಭೇಟಿ ನೀಡುವ ಶಬರಿಮಲೆಯಲ್ಲಿ ವ್ರತಧಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುಸಜ್ಜಿತ ಯಾತ್ರಿನಿವಾಸವನ್ನು ನಿರ್ಮಿಸುವಂತೆ ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಲಾಗಿದೆ.

ಉಡುಪಿ(ಜ.23): ದೇಶದ ಪುಣ್ಯ ಕ್ಷೇತ್ರಗಳಲ್ಲೊಂದಾದ, ವರ್ಷಂಪ್ರತಿ ಕೋಟ್ಯಂತರ ಅಯ್ಯಪ್ಪ ವ್ರತಧಾರಿಗಳು ಭೇಟಿ ನೀಡುವ ಶಬರಿಮಲೆಯಲ್ಲಿ ವ್ರತಧಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುಸಜ್ಜಿತ ಯಾತ್ರಿನಿವಾಸವನ್ನು ನಿರ್ಮಿಸುವಂತೆ ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಮಸ್ತ ಅಯ್ಯಪ್ಪ ಭಕ್ತರ ಪರವಾಗಿ ದಕ - ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿಯ ಅಧ್ಯಕ್ಷ ಯಶ್ಪಾಲ್‌ ಸುವರ್ಣ ಮನವಿ ಸಲ್ಲಿಸಿದ್ದಾರೆ.

ಉಡುಪಿ ಹಿಂದೂ ಯುವಸೇನೆ ಮತ್ತು ಬನ್ನಂಜೆಯ ಅಯ್ಯಪ್ಪ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ 26ನೇ ವರ್ಷದ ಶಬರಿಮಲೆ ಯಾತ್ರೆಯ ಅಂಗವಾಗಿ ನಡೆದ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ರಾತ್ರಿ 2 ಗಂಟೆಯ ತನಕ ನಡೆದಿದ್ದ ಆದಿತ್ಯ ರಾವ್ ವಿಚಾರಣೆ

ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿವರ್ಷ ಲಕ್ಷಾಂತರ ಮಂದಿ ಅಯ್ಯಪ್ಪ ಭಕ್ತಾದಿಗಳು ಕಟ್ಟುನಿಟ್ಟಿನ ವ್ರತಾಚರಣೆ ನಡೆಸಿ ಶಬರಿಮಲೆ ಯಾತ್ರೆ ನಡೆಸುತ್ತಿದ್ದು, ಈ ಯಾತ್ರೆಯ ಸಂದರ್ಭ ಸೂಕ್ತ ವಸತಿ, ಶೌಚಾಲಯ, ಪ್ರಥಮ ಚಿಕಿತ್ಸೆ, ವಿಶ್ರಾಂತಿ ಕೊಠಡಿ ಮೊದಲಾದ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ನಿವಾರಿಸಲು ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ವತಿಯಿಂದ ಪಂಪ ಅಥವಾ ಶಬರಿಮಲೆ ಪರಿಸರದಲ್ಲಿ ರಾಜ್ಯದ ಭಕ್ತರಿಗಾಗಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.

ಯೂಟ್ಯೂಬ್‌ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಆದಿತ್ಯ ರಾವ್

ರಾಜ್ಯದ ವಿವಿಧ ಹಲವು ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕ ಶಬರಿಮಲೆಯಾತ್ರೆ ಕೈಗೊಳ್ಳುತ್ತಿರುವ ಅಯ್ಯಪ್ಪ ಮಾಲೆಧಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಹಾಗೂ ಅಯ್ಯಪ್ಪ ವ್ರತಾಧಾರಿಗಳ ಅನುಕೂಲಕ್ಕಾಗಿ ನವೆಂಬರ್‌ನಿಂದ ಫೆಬ್ರವರಿಯವರೆಗೆ 4 ತಿಂಗಳ ಕಾಲ ಕಾರವಾರದಿಂದ ಕೇರಳಕ್ಕೆ ವಿಶೇಷ ರೈಲು ಸೇವೆ ಒದಗಿಸುವಂತೆ ಕೇಂದ್ರ ರೈಲ್ವೆ ಇಲಾಖೆಗೆ ಶಿಫಾರಸ್ಸು ಮಾಡುವಂತೆಯೂ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ವಿಜಯ್‌ ಗುರುಸ್ವಾಮಿ, ಹಿರಿಯ ವೃತಧಾರಿಗಳಾದ ಹರೀಶ್‌ ರಾಮ್, ಸುಧಾಕರ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

PREV
click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು