ರಾತ್ರಿ 2 ಗಂಟೆಯ ತನಕ ನಡೆದಿದ್ದ ಆದಿತ್ಯ ರಾವ್ ವಿಚಾರಣೆ

By Suvarna News  |  First Published Jan 23, 2020, 8:47 AM IST

ಮಂಗಳೂರು ಬಾಂಬರ್ ಆದಿತ್ಯ ರಾವ್‌ನನ್ನು ತಡರಾತ್ರಿ 2 ಗಂಟೆಯವರೆಗೂ ವಿಚಾರಣೆಗೆ ಒಳಪಡಿಸಲಾಗಿತ್ತು. ಕಮಿಷನರ್ ಹರ್ಷ ನೇತೃತ್ವದ ತಂಡ ಆದಿತ್ಯ ವಿಚಾರಣೆ ನಡೆಸಿತ್ತು.


ಮಂಗಳೂರು(ಜ.23): ಮಂಗಳೂರು ಬಾಂಬರ್ ಆದಿತ್ಯ ರಾವ್‌ನನ್ನು ತಡರಾತ್ರಿ 2 ಗಂಟೆಯವರೆಗೂ ವಿಚಾರಣೆಗೆ ಒಳಪಡಿಸಲಾಗಿತ್ತು. ಕಮಿಷನರ್ ಹರ್ಷ ನೇತೃತ್ವದ ತಂಡ ಆದಿತ್ಯ ವಿಚಾರಣೆ ನಡೆಸಿತ್ತು. ಮಂಗಳೂರಿನ ಪಣಂಬೂರು ACP ಕಚೇರಿಯಲ್ಲಿ ಆದಿತ್ಯ ರಾವ್ ವಿಚಾರಣೆ ನಡೆಸಲಾಗಿತ್ತು.

ವಿಮಾನನಿಲ್ದಾಣ ಬಾಂಬರ್ ಆದಿತ್ಯರಾವ್‌ನ ತೀವ್ರ ವಿಚಾರಣೆ ನಡೆಸಿದ್ದು, ಪೊಲೀಸ್ ಅಧಿಕಾರಿಗಳ ತಂಡ ಪ್ರಕರಣ ಇಂಚಿಂಚೂ ಮಾಹಿತಿ ಪಡೆಯಲು ಪ್ರಯತ್ನಿಸಿದೆ. ಮಂಗಳೂರು ಕಮೀಷನರ್ ಡಾ.ಪಿ ಎಸ್ ಹರ್ಷ ಸೇರಿದಂತೆ 6 ಮಂದಿ ಅಧಿಕಾರಿಗಳ ತಂಡ ಬಾಂಬರ್ ಆದಿತ್ಯರಾವ್‌ನನ್ನು ಪ್ರಶ್ನಿಸಿದ್ದಾರೆ.

Latest Videos

undefined

ಯೂಟ್ಯೂಬ್‌ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಆದಿತ್ಯ ರಾವ್

ಬಾಂಬ್ ತಯಾರು, ಬಾಂಬ್ ಹಾಕುವ ಉದ್ದೇಶ,ಸ್ಫೋಟಕ ಬಳಸಿದ ವಿಧಾನ, ಕೃತ್ಯಕ್ಕೆ ಮಾಡಿದ ಪೂರ್ವ ಸಿದ್ಧತೆ, ಮಂಗಳೂರಿನಿಂದ ಬೆಂಗಳೂರಿಗೆ ಹೋದ ರೀತಿಯ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೃತ್ಯದ ಹಿಂದೆ ಕೈವಾಡ ಇರೋದರ ಬಗ್ಗೆ ಪೊಲೀಸರಿಂದ ತೀವ್ರ ವಿಚಾರಣೆ ನಡೆಸಲಾಗಿದ್ದು, ರಾತ್ರಿ ಇಡೀ ಮಂಗಳೂರು ಪೊಲೀಸರು ವಿಚಾರಣೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಮಂಗಳೂರು 6 ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಬಾಂಬರ್ ಆದಿತ್ಯ ರಾವ್‌ನನ್ನು ಇಂದು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದ್ದು, 11 ಗಂಟೆ ವೇಳೆಗೆ ಹಾಜರುಪಡಿಸಲು ಉದ್ದೇಶಿಸಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಆರಂಭಿಕ ಹಂತದಲ್ಲಿ ಹ್ಯಾಂಡ್‌ಬ್ಯಾಗ್‌ ತಪಾಸಣೆಯೇ ಇಲ್ಲ

6ನೆ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಲು ಸಿದ್ಧತೆ ನಡೆಸಲಾಗಿದ್ದು, ಆರೋಪಿಯನ್ನು ಸದ್ಯ ಮಂಗಳೂರು ಎಸಿಪಿ ಕಚೇರಿಯಲ್ಲಿಡಲಾಗಿದೆ. ನಿನ್ನೆ ರಾತ್ರಿ ಆರೋಪಿಯನ್ನು ಮಂಗಳೂರಿಗೆ ಕರೆತರಲಾಗಿತ್ತು.

click me!