ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ತಂತ್ರ : ಪುಟ್ಟರಾಜು ಕಿಡಿ

By Kannadaprabha NewsFirst Published Sep 27, 2021, 12:14 PM IST
Highlights
  •  ಕೆಲವು ಕಾಣದ ಕೈಗಳು ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ತಂತ್ರ ಫಲಿಸದು
  • ಶಾಸಕ ಸಿ.ಎಸ್.ಪುಟ್ಟರಾಜು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರ ವಿರುದ್ಧ ಕಿಡಿ

ಪಾಂಡವಪುರ (ಸೆ.27):  ಕೆಲವು ಕಾಣದ ಕೈಗಳು ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ತಂತ್ರ ಫಲಿಸದು ಎಂದು ಶಾಸಕ ಸಿ.ಎಸ್.ಪುಟ್ಟರಾಜು (CS Puttaraju) ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರ ವಿರುದ್ಧ ಕಿಡಿಕಾರಿದರು. 

ಪಟ್ಟಣದ ಟಿಎಂಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ಜೆಡಿಎಸ್ (JDS) ಕಾರ್ಯಕರ್ತರ ಸಭೆಯಲ್ಲಿ ಮಾತ ನಾಡಿದ ಶಾಸಕರು, ರೈತ ಹೋರಾಟಗಾರ ಕೆ.ಎಸ್ .ಪುಟ್ಟಣ್ಣಯ್ಯನವರು ನನ್ನನ್ನು ರಾಜಕೀಯವಾಗಿ (Politics) ಹಣಿಯಲು ಸಾಧ್ಯವಾಗಲಿಲ್ಲ. ಅಂತಹದ್ದರಲ್ಲಿ ಕೆಂಪೂಗೌಡರೇ ಇನ್ನೂ ನೀವು ಏನು ಮಾಡಲು ಸಾಧ್ಯ ಎಂದರು.

 ರಾಜಕೀಯವಾಗಿ ಎದುರಿಸಲು ಯಾರಿಂದಲೂ ಸಾಧ್ಯವಾಗದು. ರೈತಸಂಘದವರು ಹೋರಾಟದ ಹೆಸರಿನಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ. ಅಗತ್ಯಬಿದ್ದರೆ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿ, ರಾಜಕೀಯ ಬೆರೆಸ ಬೇಡಿ ಎಂದು ಕಿಡಿಕಾರಿದರು. ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ವಿಚಾರದಲ್ಲಿ ರೈತ ಸಂಘದವರು ಇಲ್ಲಸಲ್ಲದ ರಾಜಕೀಯ ಮಾಡಲು ಹೊರಟರೆ ಸಹಿಸಲಾಗದು. ನೀರಿನ ಟ್ಯಾಂಕ್ (water tank) ನಿರ್ಮಾಣಗೊಂಡರೆ ಎಲ್ಲಿ ಪುಟ್ಟರಾಜುಗೆ ಹೆಸರು ಬರಲಿದೆ ಎಂಬ ಕಾರಣಕ್ಕೆ ರಾಜಕೀಯ ಮಾಡುತ್ತಿದ್ದಾರೆ. 

ಕಾಂಗ್ರೆಸ್ ಸೇರ್ತಾರಾ ಜೆಡಿಎಸ್ ಶಾಸಕ ಪುಟ್ಟರಾಜು?

ಅದರಲ್ಲೂ ಚುನಾವ ಣೆಗೆ (Election) ಒಂದು ವರ್ಷ ಬಾಕಿ ಇರುವಾಗಲೇ ತೀಟೆ ತೆಗೆದು ಕೆಲವರು ನನ್ನ ವಿರುದ್ಧ ಷಡ್ಯಂತ್ರಗಳನ್ನು ಮಾಡಲು ಮುಂದಾಗುತ್ತಾರೆ. ಆದರೆ ಅವರ ಬೇಳೆ ಬೇಯೋದಿಲ್ಲ ಎಂದು ವಿರೋಧಿಗಳ ವಿರುದ್ಧ ಪುಟ್ಟರಾಜು ಹರಿಹಾಯ್ದರು. ರಾಜಕೀಯ ಮಾಡುವುದಕ್ಕೆ ಚುನಾವಣೆ ಇದೆ. ಚುನಾವಣೆ ಬಂದಾಗ ಅಲ್ಲಿ ರಾಜಕೀಯ ಮಾಡೋಣಾ. ಇನ್ನೂ ಒಂದುವರೆ ವರ್ಷಗಳವರೆಗೆ ಕ್ಷೇತ್ರದ ಅಭಿ ವೃದ್ಧಿಗೆ ಹಗಲಿರುವ ಶ್ರಮಿಸುತ್ತೇನೆ. ಹೀಗಾಗಿ ಬೇರೆಯವರು ಏನೇ ತೊಂದರೆ ನೀಡಿದರೂ ಜೆಡಿಎಸ್ ಕಾರ್ಯಕರ್ತರು ಗ್ರಾಮಗಳಲ್ಲಿ ಯಾವುದೇ ಗಲಾಟೆ ಯಾಗದ ರೀತಿ ಶಾಂತಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ತೊರೆಯದಂತೆ ಶಾಸಕ ಪುಟ್ಟರಾಜುಗೆ ಗೌಡರ ಮನವೊಲಿಕೆ

 ಸಣ್ಣ ನೀರಾವರಿ ಸಚಿವರಾಗಿದ್ದ ವೇಳೆ ಮೇಲು ಕೋಟೆ ವಿಧಾನಸಭಾ ಕ್ಷೇತ್ರಕ್ಕೆ (Assembly Constituency ) ಸಾವಿರಾರು ಕೋಟಿ ರು ಗಳ ನೀರಾವರಿ ಯೋಜನೆಗಳನ್ನು ತಂದಿದ್ದೇನೆ. ಇನ್ನೂ ಒಂದುವರೆ ವರ್ಷಗಳಲ್ಲಿ ಎಲ್ಲವೂ ಅನುಷ್ಠಾನಗೊ ಳ್ಳಲಿದೆ. ಕ್ಷೇತ್ರದ ಜನರಿಗೆ ಒಂದೇ ಒಂದು ಅಡಿಯೂ ನೀರಾವರಿ ವಂಚಿತರಾಗದಂತೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕನೂ ನಾನೇ ಮೊದಲ ಸಚಿವನೂ ನಾನೇ ಸಂಸದ ನಾಗಿಯೂ ತಾಲೂಕಿನ ಅಭಿವೃದ್ಧಿ ಕೆಲಸ ಮಾಡಿದೇನೆ. ಕ್ಷೇತ್ರ ಮತದಾರರ ನನಗೆ ಬಯಸಿದಕಿಂತಲ್ಲೂ ಹೆಚ್ಚು ಅಧಿಕಾರವನ್ನು ನೀಡಿದಾರೆ. 

ನನಗೆ ಅಧಿಕಾರ ದಾಹ ವಿಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಟಿಎಪಿಸಿ ಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಎಸ್.ಕೆ.ದೇವೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್ , ಮುಖಂಡರಾದ ಎಸ್.ಎ.ಮಲ್ಲೇಶ್, ಕೆ.ಪುಟ್ಟೇಗೌಡ, ಎಂ.ಬಿ.ಶ್ರೀನಿ ವಾಸ್ ಇತರರಿದ್ದರು.  

click me!