ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಕೋಟೆ ನಾಡು ಚಿತ್ರದುರ್ಗದಲ್ಲಿ ಆರಂಭದಲ್ಲಿಯೇ ವಿಘ್ನಗಳು ಎದುರಾಗಿವೆ. ಬೆಳಗ್ಗೆಯಿಂದ ಜಿನುಗಿದ ಮಳೆ, ತಾಂತ್ರಿಕ ತೊಂದರೆ ಹಾಗೂ ಮಾಹಿತಿ ಕೊರತೆಯಿಂದಾಗಿ ಮಹಿಳೆಯರು ಅಷ್ಟಾಗಿ ಕರ್ನಾಟಕ ಒನ್ ಕೇಂದ್ರದ ಬಳಿ ಸುಳಿಯಲಿಲ್ಲ.
ಚಿತ್ರದುರ್ಗ (ಜು.21) :
ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಕೋಟೆ ನಾಡು ಚಿತ್ರದುರ್ಗದಲ್ಲಿ ಆರಂಭದಲ್ಲಿಯೇ ವಿಘ್ನಗಳು ಎದುರಾಗಿವೆ. ಬೆಳಗ್ಗೆಯಿಂದ ಜಿನುಗಿದ ಮಳೆ, ತಾಂತ್ರಿಕ ತೊಂದರೆ ಹಾಗೂ ಮಾಹಿತಿ ಕೊರತೆಯಿಂದಾಗಿ ಮಹಿಳೆಯರು ಅಷ್ಟಾಗಿ ಕರ್ನಾಟಕ ಒನ್ ಕೇಂದ್ರದ ಬಳಿ ಸುಳಿಯಲಿಲ್ಲ.
ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ-ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಕೇಂದರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಆಧಾರ್ ಕಾರ್ಡ್, ರೇಷನ್‌ಕ ಕಾರ್ಡ್ ಕೈಲಿಡಿದ ಕರ್ನಾಟಕದ ಒನ್ ಕೇಂದ್ರದತ್ತ ಧಾವಿಸಿ ಬಂದರಾದರೂ ಸಿಬ್ಬಂದಿ ನೀಡಿದ ಉತ್ತರಗಳಿಂದಾಗಿ ನಿರಾಸೆಯಿಂದ ವಾಪಾಸಾಗುತ್ತಿದ್ದ ದೃಶ್ಯ ಕಂಡು ಬಂತು.
ಬೆಂಗಳೂರು: ಮೊದಲ ದಿನವೇ ಗೃಹಲಕ್ಷ್ಮೀಗೆ ಸರ್ವರ್ ಕಿರಿಕಿರಿ, ತಾಂತ್ರಿಕ ತಡೆ
ಈಗಾಗಲೇ ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. ಎಸ್‌ಎಂಎಸ್ ತಲುಪಿದ ನಂತರ ಅವರು ಕರ್ನಾಟಕ ಒನ್ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಬೇಕು. ರೇಷನ್ ಕಾರ್ಡ್‌ಗೆ ಈಗಾಗಲೇ ಆಧಾರ್ ಲಿಂಕ್ ಆಗಿರುವವರಿಗೆ ಮಾತ್ರ ಸಂದೇಶ ಹೋಗಿದೆ. ಅಂತಹವರು ಮಾತ್ರ ಆರಂಭದಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ. ಕೇಂದ್ರಗಳಿಗೆ ಬಂದ ಮಹಿಳೆಯರಿಗೆ ಅಲ್ಲಿನ ಸಿಬ್ಬಂದಿ ನಿಮಗೆ ಸಂದೇಶ ಬಂದಿದೆಯಾ ಹಾಗಿದ್ದರೆ ಮಾತ್ರ ನೋಂದಣಿಗೆ ಅವಕಾಶವೆಂದು ಪ್ರತಿಕ್ರಿಯಿಸಿದರು. ಬಹುತೇಕರಿಗೆ ಸಂದೇಶ ಬಂದಿಲ್ಲದ ಕಾರಣ ಅವರೆಲ್ಲಿ ನಿರಾಸೆಯಿಂದ ನಿರ್ಗಮಿಸಬೇಕಾ ಯಿತು. ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭದಲ್ಲಿ ಗೊಂದಲ ಶುರುವಾಗಿದೆ.
ಸರ್ಕಾರ ಅರ್ಜಿ ಸಲ್ಲಿಸಲು ಏನೂ ಸಮಸ್ಯೆ ಇಲ್ಲ ಎಂದು ಹೇಳಿದೆ. ಆದರೆ ಕರ್ನಾಟಕ ಒನ್, ಗ್ರಾಮ ಒನ್ ಬಳಿ ಬಂದ್ರೆ ಏನೂ ಕೆಲಸ ಆಗ್ತಿಲ್ಲ. ಮಳೆ ಕಾರಣಕ್ಕೆ ದೂರದಿಂದ ಆಟೋಗೆ ಖರ್ಚು ಮಾಡಿಕೊಂಡು ಬಂದಿದ್ದೇವೆ. ಮತ್ತೆ ಬರಿಗೈಲಿ ವಾಪಾಸು ಹೋಗಬೇಕಾಗಿದೆ ಎಂದು ಮಹಿಳೆಯರು ನೋವು ಹೊರ ಹಾಕಿದರು.
ಮನೆ ಮಹಾಲಕ್ಷ್ಮಿಗೆ ‘ಗೃಹಲಕ್ಷ್ಮಿ’ಯ ಅನುಗ್ರಹ: ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ..!
ಚಿತ್ರದುರ್ಗದ ಆಕಾಶವಾಣಿ ಸಮೀಪ ಕರ್ನಾಟಕ ಒನ್ ಕೇಂದ್ರವಿದ್ದು, ಅವರು ಕೇಳಿದ ಎಲ್ಲ ಮಾಹಿತಿಯ ಮಹಿಳೆಯರು ಕೇಳಿದರೂ ನಿತ್ಯ ನೂರು ಮಂದಿ ನೋಂದಣಿ ಆಗುವುದು ಕಷ್ಟಸಾಧ್ಯವಾಗಿದೆ. ಇದರ ನಡುವೆ ಸರ್ವರ್ ಸಮಸ್ಯೆ ಬಾಧಿಸುವುದರಿಂದ ನೋಂದಣಿ ಕಾರ್ಯ ಅಷ್ಟುಸುಲಭವಾಗಿ ಕಾಣಿಸುತ್ತಿಲ್ಲ