ಅಪೂರ್ಣಗೊಂಡ ಕಾಲುವೆ: ಮರು ನಿರ್ಮಾಣಕ್ಕೆ ಅನುದಾನ

By Kannadaprabha News  |  First Published Jul 30, 2022, 5:33 PM IST
  •  ಈ ಹಿಂದೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಮತ್ತು  ಅಪೂರ್ಣಗೊಂಡ ಕಾಲುವೆ ಮರು ನಿರ್ಮಾಣಕ್ಕೆ ಅನುದಾನ.
  • ಮಳೆ ನೀರು ನುಗ್ಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂಕನೂರ

 ಗದಗ (ಜು.30) ಬೆಟಗೇರಿ ಭಾಗದಲ್ಲಿ ಈ ಹಿಂದೆ ರಾಜಕಾಲುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಹಾಗೂ ಕಳಪೆ ಕಾಮಗಾರಿ ಮಾಡಿರುವುದು ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದ್ದು, ಅಪೂರ್ಣಗೊಂಡ ರಾಜಕಾಲುವೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ಸಂಬಂಧಪಟ್ಟಇಲಾಖೆಯಿಂದ ಬಿಡುಗಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿಪ ಸದಸ್ಯ ಪ್ರೊ.ಎಸ್‌.ವಿ. ಸಂಕನೂರ ಹೇಳಿದರು.

ಅವರು ಬೆಟಗೇರಿ(Betageri) ಭಾಗದ ಭಜಂತ್ರಿ ಓಣಿ(Bhjantri Oni) ಹಾಗೂ ಶಿವರತ್ನಾ ಪ್ಯಾಲೇಸ್‌(Shivaratna Palace), ವಾಲ್ಮೀಕಿ ಅಂಬೇಡ್ಕರ್‌ ವಾಂಬೆ ಬಡಾವಣೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಜಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ನಿವಾಸಿಗಳ ಮನೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.

Tap to resize

Latest Videos

undefined

Uttara Kannada: ಹಣ ನುಂಗೋ ಅವೈಜ್ಞಾನಿಕ ಕಾಮಗಾರಿ: ಕಳಪೆ ಕಾಮಗಾರಿಯಿಂದ ಜನರಿಗೆ ನೆರೆಕಾಟ!

ಭಜಂತ್ರಿ ಓಣಿ ಹಾಗೂ ಶಿವರತ್ನ ಪ್ಯಾಲೇಸ್‌ ಪಕ್ಕ ರಾಜ ಕಾಲುವೆಗಳಿಗೆ ನಿರ್ಮಿಸಿರುವ ತಡೆಗೋಡೆಗಳು ಸಂಪೂರ್ಣ ಕಳಪೆಯಿಂದ ಕೂಡಿವೆ ಮತ್ತು ರಾಜ ಕಾಲುವೆ ಮುಂದೆ ಹೋದಂತೆ ಕಿರಿದಾಗಿದ್ದು ನೀರು ನಿಂತು ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ ಎಂದು ಸಾರ್ವಜನಿಕರು ವಿಪ ಸದಸ್ಯ ಎಸ್‌. ವಿ. ಸಂಕನೂರ ಅವರ ಗಮನಕ್ಕೆ ತಂದರು. ಈ ಕುರಿತು ಪರಿಶೀಲಿಸಿ ರಾಜ ಕಾಲುವೆ ನಿರ್ಮಿಸಿದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಪೊ›. ಸಂಕನೂರ ಸೂಚನೆ ನೀಡಿದರು.

ರಾಜ ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆದು ನಿಯಮಿತವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಅಭಿಯಂತರ ಎಚ್‌.ವೈ. ಬಂಡಿವಡ್ಡರ ಅವರಿಗೆ ಸೂಚನೆ ನೀಡಿದರು.

ರಾಜ ಕಾಲುವೆಗಳಲ್ಲಿ ಆದ ಅತಿಕ್ರಮಣ ಹಾಗೂ ರಾಜ ಕಾಲುವೆ ತುಂಬ ಬೆಳೆದ ಗಿಡಗಂಟಿಗಳಿಂದಾಗಿ ಮಳೆ ನೀರು ಹರಿದು ಹೋಗಲು ಅಡ್ಡಿಯಾಗಿ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಲು ಕಾರಣವಾಗಿದ್ದು, ಕೂಡಲೇ ಅವುಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವಳಿ ನಗರದಲ್ಲಿ ನೀರು ನುಗ್ಗಿ ಹಾನಿಗೀಡಾದ ಮನೆಗಳ ಪರಿಶೀಲನೆ ನಡೆಸಿ ನಾಲ್ಕು ದಿನಗಳ ಒಳಗಾಗಿ ಹಾನಿ ಅನುಭವಿಸಿದ ಫಲಾನುಭವಿಗಳಿಗೆ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್‌ ಕಿಶನ್‌ ಕಲಾಲ ಅವರಿಗೆ ಸೂಚನೆ ನೀಡಿ, ಹಾನಿಗೀಡಾದ ಫಲಾನುಭವಿಗಳಿಗೆ ನಿಮ್ಮೊಂದಿಗೆ ನಾವು ಮತ್ತು ಸರ್ಕಾರವಿದೆ ಇದೆ ಎಂದು ಭರವಸೆ ನೀಡಿದರು.

ರಸ್ತೆ ಮಧ್ಯೆಯೇ ವಿದ್ಯುತ್ ಕಂಬ, ಕಾಮಗಾರಿ ಮುಗಿಸಿದ ಎಂಜಿನೀಯರ್; ಸ್ಥಳೀಯರ ಆಕ್ರೋಶ

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಣ್ಣ ಪಲ್ಲೇದ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಮಾಧುಸಾ ಮೇರವಾಡೆ, ಶಕುಂತಲಾ ಅಕ್ಕಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ಬಿಜೆಪಿ ಶಹರ ಪ್ರಧಾನ ಕಾರ್ಯದರ್ಶಿ ದೇವಪ್ಪ ಗೋಟೂರ, ಶ್ರೀನಿವಾಸ ಹುಬ್ಬಳ್ಳಿ, ಹೊಳೆಬಸಪ್ಪ ಅಕ್ಕಿ, ಶಂಕರ, ಗದಗ ತಹಸೀಲ್ದಾರ ಕಿಶನ್‌ ಕಲಾಲ, ನಗರಸಭೆ ಅಭಿಯಂತರ ಎಚ್‌. ವೈ. ಬಂಡಿವಡ್ಡರ ಸೇರಿದಂತೆ ಇತ​ರರು ಇದ್ದ​ರು.

 

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ರಾಜ ಕಾಲುವೆ ಹಾಗೂ ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ಮನೆಗಳಿಗೆ ಹಾಗೂ ಹಬ್ಬಕ್ಕಾಗಿ ಖರೀದಿಸಿದ್ದ ವಸ್ತುಗಳು ಮತ್ತು ದವಸ ಧಾನ್ಯಗಳು ಹಾನಿಗೀಡಾಗಿವೆ. ಈ ಕುರಿತು ವಿವಿಧ ಭಾಗಗಳಲ್ಲಿ ವೀಕ್ಷಣೆ ಮಾಡಿದ್ದು ನಾಲ್ಕು ದಿನಗಳಲ್ಲಿ ಪರಿಶೀಲನೆ ಮಾಡಿ ಹಾನಿಗೀಡಾದ ಫಲಾನುಭವಿಗಳಿಗೆ ಪರಿಹಾರ ಒದಗಿಸಲು ತಹಸೀಲ್ದಾರ್‌ ಕಿಶನ್‌ ಕಲಾಲ ಅವರಿಗೆ ಸೂಚನೆ ನೀಡಲಾಗಿದೆ.

ಪೊ›.ಎಸ್‌.ವಿ. ಸಂಕನೂರ, ವಿಧಾನ ಪರಿಷತ್‌ ಸದ​ಸ್ಯ​ರು

 

 

click me!