ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲ ಜೀವನ ಮಿಷನ್ (ಜೆಜೆಎಂ) ಅನುಷ್ಠಾನಗೊಂಡ ಜಿಲ್ಲೆಯ ಮೊದಲ ಗ್ರಾಮಗಳು. ದಾಂಡೇಲಿಯ ಅಂಬಿಕಾನಗರ, ವಿಟ್ನಾಳ, ಯಲ್ಲಾಪುರದ ಬಿಸಗೋಡ ಜೆಜೆಎಂ ಅನುಷ್ಠಾನಗೊಂಡ ಮೊದಲ ಗ್ರಾಮಗಳು. ಆ.12ವರೆಗೆ ಜಲೋತ್ಸವ.
ವರದಿ: ಜಿ.ಡಿ.ಹೆಗಡೆ
ಕಾರವಾರ (ಜು.30) : ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲ ಜೀವನ ಮಿಷನ್ (ಜೆಜೆಎಂ) ಅನುಷ್ಠಾನಗೊಂಡ ಜಿಲ್ಲೆಯ ಮೊದಲ ಗ್ರಾಮಗಳು ಎಂದು ದಾಂಡೇಲಿಯ ಅಂಬಿಕಾನಗರ, ವಿಟ್ನಾಳ, ಯಲ್ಲಾಪುರದ ಬಿಸಗೋಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಯೋಜನೆಯಲ್ಲಿ ಈ ಮೂರು ಗ್ರಾಮಕ್ಕೆ ನೀರು ನೀಡಲಾಗಿದ್ದು, ಹರ್ ಘರ್ ಜಲ್ ಎಂದು ಜಿಪಂನಿಂದ ಘೋಷಣೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಮೊದಲ ಹಂತ ಪ್ರಾರಂಭವಾಗಿದ್ದು, 263 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 258 ಕೆಲಸ ಶುರು ಮಾಡಲಾಗಿತ್ತು. ಅದರಲ್ಲಿ ಮುಂಡಗೋಡ, ಶಿರಸಿ, ಸಿದ್ದಾಪುರ ತಾಲೂಕಿನಲ್ಲಿ ತಲಾ ಒಂದು, ಜೋಯಿಡಾ 4, ಕುಮಟಾ 5 ಒಳಗೊಂಡು 12 ಗ್ರಾಮಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಹರ್ ಘರ್ ಜಲ್ ಎಂದು ಕೆಲವೇ ದಿನದಲ್ಲಿ ಘೋಷಣೆ ಮಾಡಲಾಗುತ್ತಿದೆ. ಉಳಿದ ಕಾಮಗಾರಿಗಳು ಶೀಘ್ರದಲ್ಲೇ ಮುಕ್ತಾಯವಾಗಲಿದೆ.
World Bank Loan : ಪ್ರತಿ ಮನೆಗೂ ನೀರು ಪೂರೈಸಲು ನೆರವು
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಎನ್ನುವ ಧ್ಯೇಯದೊಂದಿಗೆ, ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯವು ಜಲಜೀವನ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ.
ಕೆಲಸ ಪೂರ್ಣಗೊಂಡ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಕರೆದು ಗ್ರಾಮಸ್ಥರು, ಗ್ರಾಮ ನೀರು ಸರಬರಾಜು ಸಮಿತಿ ಹಾಗೂ ಜನಪ್ರತಿನಿಧಿಗಳೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗಗಳ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ ಹಾಗೂ ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಎಂಐಎಸ್ ಸಮಾಲೋಚಕರ ಉಪಸ್ಥಿತಿಯಲ್ಲಿ ಗ್ರಾಮದ ಪ್ರತಿ ಮನೆಗಳಿಗೂ ನಳ ಸಂಪರ್ಕ ಕಲ್ಪಿಸಿರುವ ಕುರಿತು ಗ್ರಾಮಸ್ಥರ ಅಭಿಪ್ರಾಯ ಪಡೆದು ಹರ್ ಘರ್ ಜಲ್ ಘೋಷಣೆ ಮಾಡಲಾಗುತ್ತಿದೆ.
ಜಲಜೀವನ್ ಮಿಷನ್ App ಲಾಂಚ್: ಉತ್ಸಾಹ, ಶಕ್ತಿಯಿಂದ ಯಶಸ್ಸು ಸಾಧ್ಯ ಎಂದ ಮೋದಿ!
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶನದಂತೆ ಯೋಜನೆಯ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಜಲೋತ್ಸವವನ್ನು ಆ.12ವರೆಗೆ ಆಯೋಜಿಸಲಾಗಿದೆ. 15 ಗ್ರಾಮಗಳಲ್ಲಿ ಹರ್ ಘರ್ ಜಲೋತ್ಸವ ಆಚರಿಸಲು ಆಯ್ಕೆ ಮಾಡಲಾಗಿದೆ. ಜೆಜೆಎಂ ಕೆಲಸ ಪೂರ್ಣಗೊಂಡ ಗ್ರಾಮವನ್ನು ಹರ್ ಘರ್ ಜಲ್ ಎಂದು ಘೋಷಣೆ ಮಾಡಲಾಗುತ್ತಿದೆ.
-ಪ್ರಿಯಾಂಗಾ ಎಂ., ಸಿಇಒ ಜಿಪಂ
ಪ್ರಾರಂಭದಲ್ಲಿ ಜೆಜೆಎಂ ಅಡಿ ಸ್ಥಳೀಯ ಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಯೋಜನೆ ರೂಪಿಸಿರುವುದು ಕೆಂಗಣ್ಣಿಗೆ ಗುರಿಯಾಗಿತ್ತು. ಕಾರಣ ಈ ಯೋಜನೆಯ ಬಗ್ಗೆ ಜನಪ್ರತಿನಿಧಿಗಳಿಂದ ಅಸಮಾಧಾನ ವ್ಯಕ್ತವಾಗಿತ್ತು. ಜಿಪಂ ಹಾಗೂ ಉಸ್ತುವಾರಿ ಸಚಿವರ ಸಭೆಗಳಲ್ಲಿ ಈ ಬಗ್ಗೆ ಜನಪ್ರತಿನಿಧಿಗಳು ಅಸಮಧಾನ ಹೊರಹಾಕಿದ್ದರು. ಈ ಎಲ್ಲ ಸಮಸ್ಯೆಗಳು ಬಗೆಹರಿದು ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಸಿಇಒ ಪ್ರಿಯಾಂಗಾ