
ಬೆಳಗಾವಿ (ಮೇ.02): ಛತ್ರಪತಿ ಶಿವಾಜಿ ಮಹಾರಾಜರ ರೂಪಕಗಳ ಭವ್ಯ ಮೆರವಣಿಗೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶಿವಾಜಿ ಇತಿಹಾಸದ ಗತವೈಭವ ಬಿಂಬಿಸುವ ಐತಿಹಾಸಿಕ ಪಾರಂಪರಿಕ ಮೆರವಣಿಗೆಗೆ ಬೆಳಗಾವಿ ನರಗುಂದಕರ್ ಬಾವಿ ಚೌಕ್ ಗಲ್ಲಿಯಲ್ಲಿ ಅದ್ಧೂರಿ ಚಾಲನೆ ದೊರಕಿದೆ. ಛತ್ರಪತಿ ಶಿವಾಜಿ ಮೆರವಣಿಗೆಯೂ ಮಾರುತಿ ಗಲ್ಲಿ, ಬೆಳಗಾವಿ ಚೆನ್ನಮ್ಮ ವೃತ್ತದಿಂದ ಕಾಲೇಜು ರೋಡ್, ಗೋವಾವೇಸ್ ಟಿಳಕ‌್ ಚೌಕ, ಹೇಮುಕಲಾಣಿ ಚೌಕ್ ನಲ್ಲಿ ಮೆರವಣಿಗೆ ಬೆಳಗಿನ ಜಾವದವರೆಗೆ ಅದ್ದೂರಿಯಾಗಿ ನಡೆಯಲಿದೆ. ಅಲ್ಲದೇ ಸಂಭಾಜಿ ವೃತ್ತದಲ್ಲಿ ಮೆರವಣಿಗೆ ನೋಡಲು ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಕಮಿಷನರ್ ಯಡಾ ಮಾರ್ಟಿನ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ಗೊಳಿಸಲಾಗಿದೆ. ಮೆರವಣಿಗೆಯಲ್ಲಿ ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಿಂದೂಗಳು ಒಗ್ಗೂಡಿ ಎಂಬ ಸಂದೇಶ ಸಾರುವ ರೂಪಕ ಗಮನ ಸೆಳೆದಿದ್ದು, ನಾನು ಲಿಂಗಾಯತ, ನಾನು ಮರಾಠಾ, ನಾನು ಗುಜರಾತಿ, ನಾನು ಪಂಜಾಬಿ, ನಾನು ಜೈನ ಇತ್ಯಾದಿ ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಸಂದೇಶ ಸಾರಲಾಗಿದೆ. 'ಬಟೆಂಗೆ ತೋ ಕಟೆಂಗೇ' ಎಂದು ಸಂದೇಶ ಸಾರುವ ರೂಪಕ ಪ್ರದರ್ಶನದಲ್ಲಿ ಹೈಲೈಟ್ ಆಗಿದೆ. ಜೊತೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ರೂಪಕ ವಾಹನದ ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆ, ಕಾಂಗ್ರೆಸ್ ಸರ್ಕಾರದ ವಿಫಲತೆ: ಯತ್ನಾಳ ವಾಗ್ದಾಳಿ
ಸವದತ್ತಿಯಲ್ಲಿ ಸಂಭಾಜಿ ಮಹಾರಾಜ ವೃತ್ತ ನಾಮಕರಣ: ಪಟ್ಟಣದ ಗುರ್ಲಹೊಸೂರಿನ ಶ್ರೀ ಚಿದಂಬರೇಶ್ವರ ದೇವಸ್ಥಾನದ ರಸ್ತೆಯ ಕೆಳಭಾಗದ ವರ್ತುಳಕ್ಕೆ ಧರ್ಮವೀರ ಸಂಭಾಜಿ ಮಹಾರಾಜ ವೃತ್ತವೆಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಿ ಪೂಜೆ ಸಲ್ಲಿಸಲಾಯಿತು. ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಸುಮಂಗಲೆಯರಿಂದ ಬಾಲ ಶಿವಾಜಿಯನ್ನು ತೊಟ್ಟಿಲಲ್ಲಿ ಹಾಕಿ ಪೂಜೆ ಸಲ್ಲಿಸಲಾಯಿತು.
ನಂತರ ಧರ್ಮವೀರ ಸಂಭಾಜಿ ಮಹಾರಾಜರ ವೃತ್ತದ ನಾಮಫಲಕವನ್ನು ಶ್ರೀ ಅಂಭಾಭವಾನಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಾಗಿ ಪ್ರತಿಷ್ಠಾಪಿಸಲಾಯಿತು. ಸುನೀಲ ತಾರಿಹಾಳ, ಚಿಂದಬರ ತಾರಿಹಾಳ, ಶಿವರುದ್ರ ಧರ್ಮೋಜಿ, ಆನಂದ ಕಾರದಗಿ, ಮಂಜು ನಿಕ್ಕಂ, ಶಿವಾನಂದ ತಾರೀಹಾಳ, ಮಾರುತಿ ಜಾಧವ, ಪುಂಡಲೀಕ ಭೀ. ಬಾಳೋಜಿ, ರಾವಸಾಹೇಬ ಜಾಮದಾರ, ತಾನಾಜಿ ಶಿಂಧೆ, ಸಂಗು ಪವಾರ, ಅಮೀತ ತಾರಿಹಾಳ, ರವಿ ಗಿರಿಜನ್ನವರ, ಶಿವಾಜಿ ತಾರಿಹಾಳ, ಮಲ್ಲಿಕಾರ್ಜುನ ತಾರಿಹಾಳ, ಮಂಜು ಆರೇರ, ವೀರ ಧರ್ಮೋಜಿ, ಸಂಜು ಹೊನಗೇಕರ, ಚಿದಂಬರ ಪವಾರ ಇತರರಿದ್ದರು.