ದಸರಾ ಆನೆ ಕರೆತಂದು ಮೆರವಣಿಗೆ : ನಂಜನಗೂಡಿನಲ್ಲಿ ಗ್ರಾಮೀಣ ದಸರಾ

By Sujatha NRFirst Published Oct 4, 2022, 5:28 AM IST
Highlights

ಮೈಸೂರು ದಸರಾದ ಅಂಗವಾಗಿ ನಂಜನಗೂಡಿನಲ್ಲಿ ನಡೆಯುತ್ತಿರುವ ಗ್ರಾಮೀಣ ದಸರಾವನ್ನು ಅದ್ಧೂರಿಯಾಗಿಸಲು ಜನರ ಸದಾಭಿರುಚಿಯ ಮೇರೆಗೆ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಯನ್ನು ಕರೆತಂದು ಮೆರವಣಿಗೆ ಮಾಡಲಾಗಿದೆ

ನಂಜನಗೂಡು (ಅ.04) : ಮೈಸೂರು ದಸರಾದ ಅಂಗವಾಗಿ ನಂಜನಗೂಡಿನಲ್ಲಿ ನಡೆಯುತ್ತಿರುವ ಗ್ರಾಮೀಣ ದಸರಾವನ್ನು ಅದ್ಧೂರಿಯಾಗಿಸಲು ಜನರ ಸದಾಭಿರುಚಿಯ ಮೇರೆಗೆ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಯನ್ನು ಕರೆತಂದು ಮೆರವಣಿಗೆ ಮಾಡಲಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್‌ ಹೇಳಿದರು.

ಶ್ರೀಕಂಠೇಶ್ವರ ದೇವಾಲಯದಲ್ಲಿ ದುಬಾರೆ ಅರಣ್ಯ (Forest) ಪ್ರದೇಶದ ದಸರಾ ಆನೆ ಗೋಪಿಯನ್ನು ಕರೆ ತಂದು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆಂದಿಗಿಂತ ಮೈಸೂರು ದಸರಾ ಅದ್ಧೂರಿಯಾಗಿ ನಡೆಯುತ್ತಿದೆ. ಬಹಳ ಅಚ್ಚುಕಟ್ಟಾಗಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಗ್ರಾಮೀಣ ದಸರಾವನ್ನು (Dasara)  ಅದ್ಧೂರಿಯಾಗಿಸುವ ಸಲುವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿ, ದಸರಾ ಆನೆಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿ ದಸರಾ ಆನೆಯನ್ನು ನಂಜನಗೂಡಿಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.

ದಸರಾ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ:

ಮೈಸೂರಿನಲ್ಲಿ (Mysuru) ನಡೆಯುವ ದಸರಾ ವಿಜಯದಶಮಿಯ ಹಾಗೂ ಪಂಜಿನ ಕವಾಯಿತು ನೇರ ಪ್ರಸಾರ ವೀಕ್ಷಣೆಗಾಗಿ ಪಟ್ಟಣದ ಅರಮನೆ ಮಾಳದಲ್ಲಿ ಎಲ…ಇಡಿ ಪರದೆ ಹಾಕಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ದೇವಾಲಯದ ಆನೆ ಗೌರಿ ಸಂಪೂರ್ಣವಾಗಿ ಗುಣಮುಖವಾಗಿದ್ದು, ಶೀಘ್ರದಲ್ಲೇ ದೇವಾಲಯಕ್ಕೆ ಕರೆತರಲು ಕ್ರಮ ವಹಿಸಲಾಗಿದೆ, ಈ ಸಂಬಂಧ ಕಡತ ವಿಲೇವಾರಿ ಮಾಡಲಾಗಿದ್ದು, ಆನೆಯ ಆರೋಗ್ಯ ಪರೀಕ್ಷೆ ನಡೆಸಿ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿದ ನಂತರ ಮುಖ್ಯಮಂತ್ರಿಯವರ ಜೊತೆ ಮಾತನಾಡಿ, ಆನೆಯನ್ನು ದೇವಾಲಯಕ್ಕೆ ಕರೆತರಲಾಗುವುದು ಎಂದರು.

ಇದಕ್ಕೂ ಮುನ್ನ ದಸರಾ ಆನೆ ಗೋಪಿಯನ್ನು ದೇವಾಲಯದ ಮುಂಭಾಗ ಕರೆತಂದು ಪೂಜೆ ಸಲ್ಲಿಸಿದ ಬಳಿಕ ಜಾನಪದ ಕಲಾತಂಡಗಳಾದ ಕಂಸಾಳೆ, ನಾದಸ್ವರ, ನೂರಾರು ಸಂಖ್ಯೆಯ ಮಹಿಳೆಯರ ಪೂರ್ಣ ಕುಂಭದೊಂದಿಗೆ ನಗರದ ಆರ್‌.ಪಿ. ರಸ್ತೆ, ಬಜಾರ್‌ ರಸ್ತೆ, ಬ್ರಾಡ್‌ ವೇ ರಸ್ತೆ ಮೂಲಕ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ರಸ್ತೆಯ ಉದ್ದಕ್ಕೂ ಜನರು ಆನೆ ವೀಕ್ಷಣೆ ಮಾಡಿ ಸಂತಸಪಟ್ಟರು. ಮೆರವಣಿಗೆಯಲ್ಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್‌, ಧರ್ಮಪತ್ನಿ ಭಾಗ್ಯಮ್ಮ ಮತ್ತು ಶಾಸಕ ಬಿ. ಹರ್ಷವರ್ಧನ್‌ ಅವರ ಪತ್ನಿ ಮೆರವಣಿಗೆ ಜೊತೆಗೆ ಹೆಜ್ಜೆ ಹಾಕಿ ಗಮನ ಸೆಳೆದರು.

ನಗರಸಭಾಧ್ಯಕ್ಷ ಎಚ್‌.ಎಸ್‌.ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ನಾಗರಾಜ…, ಸದಸ್ಯರಾದ ಮಹಾದೇವ ಪ್ರಸಾದ್‌, ಕಪಿಲೇಶ್‌, ಬಸವಣ್ಣ, ಬಾಲರಾಜು, ಮುಖಂಡರಾದ ಬಾಲಚಂದ್ರ , ಶಂಕರಪ್ಪ, ನಂದಿನಿ, ಕೋಮಲ, ತಹಸೀಲ್ದಾರ್‌ ಎಂ. ಶಿವಮೂರ್ತಿ, ಇಒ ಎಚ್‌.ಜಿ. ಶ್ರೀನಿವಾಸ್‌, ಶಿಶು ಅಭಿವೃದ್ಧಿ ಅಧಿಕಾರಿ ಮಂಜುಳಾ ಹಾಗೂ ನೂರಾರು ಸಂಖ್ಯೆಯ ಅಂಗನವಾಡಿ ಕಾರ್ಯಕರ್ತರು ಇದ್ದರು.

  • ಮೈಸೂರು ದಸರಾದ ಅಂಗವಾಗಿ ನಂಜನಗೂಡಿನಲ್ಲಿ ನಡೆಯುತ್ತಿರುವ ಗ್ರಾಮೀಣ ದಸರಾ
  • ಗ್ರಾಮೀಣ ದಸರಾವನ್ನು ಅದ್ಧೂರಿಯಾಗಿಸಲು ಜನರ ಸದಾಭಿರುಚಿಯ ಮೇರೆಗೆ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಯನ್ನು ಕರೆತಂದು ಮೆರವಣಿಗೆ
  • ಶ್ರೀಕಂಠೇಶ್ವರ ದೇವಾಲಯದಲ್ಲಿ ದುಬಾರೆ ಅರಣ್ಯ (Forest) ಪ್ರದೇಶದ ದಸರಾ ಆನೆ ಗೋಪಿಯನ್ನು ಕರೆ ತಂದು ಪೂಜೆ ಸಲ್ಲಿಸಿ ಮೆರವಣಿಗೆಗೆ
  • ಮೈಸೂರಿನಲ್ಲಿ (Mysuru) ನಡೆಯುವ ದಸರಾ ವಿಜಯದಶಮಿಯ ಹಾಗೂ ಪಂಜಿನ ಕವಾಯಿತು ನೇರ ಪ್ರಸಾರ ವೀಕ್ಷಣೆ
  • ದೇವಾಲಯದ ಆನೆ ಗೌರಿ ಸಂಪೂರ್ಣವಾಗಿ ಗುಣಮುಖವಾಗಿದ್ದು, ಶೀಘ್ರದಲ್ಲೇ ದೇವಾಲಯಕ್ಕೆ
  • ಈ ಸಂಬಂಧ ಕಡತ ವಿಲೇವಾರಿ ಮಾಡಲಾಗಿದ್ದು, ಆನೆಯ ಆರೋಗ್ಯ ಪರೀಕ್ಷೆ ನಡೆಸಿ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿದ ನಂತರ ಮುಖ್ಯಮಂತ್ರಿಯವರ ಜೊತೆ ಮಾತನಾಡಿ, ಆನೆಯನ್ನು ದೇವಾಲಯಕ್ಕೆ ಕರೆತರಲಾಗುವುದು
click me!