ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದ: ಸಚಿವ ಡಾ.ಜಿ.ಪರಮೇಶ್ವರ

By Kannadaprabha News  |  First Published Nov 18, 2023, 8:57 AM IST

ರಾಜ್ಯದಲ್ಲಿ ಮಳೆ ಅತ್ಯಂತ ಕಡಿಮೆಯಾಗಿದ್ದು ಬರದ ಛಾಯೆ ಆವರಿಸಿದೆ. ಸರ್ಕಾರವು ಈ ಸವಾಲನ್ನು ಎದುರಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.


  ಕೊರಟಗೆರೆ :  ರಾಜ್ಯದಲ್ಲಿ ಮಳೆ ಅತ್ಯಂತ ಕಡಿಮೆಯಾಗಿದ್ದು ಬರದ ಛಾಯೆ ಆವರಿಸಿದೆ. ಸರ್ಕಾರವು ಈ ಸವಾಲನ್ನು ಎದುರಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರು ತಾಲೂಕಿನ ಗಟ್ಲಗೊಲ್ಲಹಳ್ಳಿ ಗ್ರಾಮದಲ್ಲಿ ಶ್ರೀವೀರಾಂಜನಯ್ಯ ಸ್ವಾಮಿ ದೇವಾಲಯದ ಪುನನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Tap to resize

Latest Videos

undefined

ಈ ವರ್ಷದ ರಾಜ್ಯದ ಬರಗಾಲದ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗುತ್ತಿದೆ, ಬರುವ ಬೇಸಿಗೆಯಲ್ಲಿ ಕುಡಿಯುವ ನೀರು, ರೈತರಿಗೆ ವಿದ್ಯುತ್ ನಿರ್ವಹಣೆ ಸವಾಲಾಗಿದೆ. ಆದರೆ, ಅದನ್ನು ನಿಭಾಹಿಸಲು ಎಲ್ಲಾ ರೀತಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

ಕೊರಟಗೆರೆ ಸುತ್ತಲಿನ ಹಾಗೂ ಬಯಲು ಸೀಮೆಯ ಪ್ರದೇಶಗಳಿಗೆ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಗಳನ್ನು ಸರ್ಕಾರವು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಿದೆ, ಈ ಯೋಜನೆಯಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಬಹಳ ಅನುಕೂಲವಾಗಲಿದೆ. ಸರ್ಕಾರವು ಕಾರ್ಯಪ್ರವೃತ್ತವಾಗಲಿದೆ ಎಂದ ಅವರು ಈ ಗ್ರಾಮದಲ್ಲಿನ ವೀರಾಂಜನೇಯ ದೇವಾಲಯ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುವುದು ಎಂದರು.

ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಎಲೆರಾಂಪುರದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಧಾರ್ಮಿಕತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಿದ್ದು, ಮನುಷ್ಯನ ಮಾನಸಿಕ ಶಕ್ತಿ ಧಾರ್ಮಿಕತೆಯಲ್ಲಿ ದೊರೆಯುತ್ತಿದೆ. ಈ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.

ಕಾರ್ಯಕ್ರಮದಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಬ್ಲಾಕ್‌ ಕಾಂಗ್ರೆಸ್ ಮುಖಂಡರಾದ ಅರಕೆರೆಶಂಕರ್, ಕೋಡ್ಲಹಳ್ಳಿಅಶ್ವಥನಾರಾಯಣ ಮುಖಂಡರಾದ ವಾಲೆಚಂದ್ರಯ್ಯ, ರವಿಕುಮಾರ್, ಎ.ಡಿ.ಬಲರಾಮಯ್ಯ, ಎಂ.ಎನ್.ಜೆ.ಮಂಜುನಾಥ್, ಗಟ್ಲಹಳ್ಳಿಕುಮಾರ್, ಗೋಂದಿಹಳ್ಳಿರಂಗರಾಜು ಇದ್ದರು.

click me!