
ಚಿಕ್ಕಬಳ್ಳಾಪುರ (ನ.06): ರಾಜ್ಯದಲ್ಲಿ ಮತ್ತೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬಿದ್ದ ಬೆನ್ನಲೇ ಜಿಲ್ಲೆಗೆ ಬರೋಬ್ಬರಿ 50 ಸಾವಿರ ಮಂದಿಯನ್ನು ಯಶಸ್ವಿನಿಗೆ ಯೋಜನೆಯಡಿ ನೋಂದಣಿಗೆ ಸರ್ಕಾರ ಗುರಿ ನೀಡಿದೆ.
ರಾಜ್ಯದ (Karnataka) ಯಾವುದೇ ಮೂಲೆಯಲ್ಲಿ ಯಶಸ್ವಿನಿ ನೆಟ್‌ವರ್ಕ್ (Yashaswini Network) ಇರುವ ಆಸ್ಪತ್ರೆಗಳಲ್ಲಿ ಗರಿಷ್ಠ 5 ಲಕ್ಷದವರೆಗೂ ವಿವಿಧ ಕಾಯಿಲೆಗಳಿಗೆ ಉಚಿತವಾಗಿ ನಗದು ರಹಿತವಾಗಿ ಚಿಕಿತ್ಸೆ ಪಡೆಯುವ ಸೌಲಭ್ಯ ಇರುವ ಯಶಸ್ವಿನಿ ಯೋಜನೆಯನ್ನು ಸಹಕಾರ ಸಂಘಗಳಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಸ್ಥಗಿತಗೊಂಡಿದ್ದ ಯಶಸ್ವಿನಿಗೆ ಇದೀಗ ಮತ್ತೆ ಚಾಲನೆ ನೀಡಿರುವ ಸರ್ಕಾರ ಜಿಲ್ಲಾವಾರು ಗುರಿ ಕೊಟ್ಟಿದೆ.
ಜಿಲ್ಲೆಯಲ್ಲಿ 1575 ಸಹಕಾರ ಸಂಘ
ಜಿಲ್ಲೆಯಲ್ಲಿ ಒಟ್ಟು 1,575 ವಿವಿಧ ಬಗೆಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು 60 ಸಾವಿರಕ್ಕೂ ಅಧಿಕ ಸದಸ್ಯರು ಈ ಸಹಕಾರ ಸಂಘಗಳ ಮೂಲಕ ಸಕ್ರಿಯ ಸದಸ್ಯರಾಗಿದ್ದಾರೆ. ಆದರೆ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 1,575 ಸಹಕಾರ ಸಂಘಗಳ ಪೈಕಿ 1,293 ಸಂಘಗಳು ಅಷ್ಟೇ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಉಳಿದಂತೆ 198 ಸಹಕಾರ ಸಂಘಗಳು ಸಮಾನಗೊಂಡಿವೆ. ಉಳಿಕೆ 84 ಸಹಕಾರ ಸಂಘಗಳು ಸ್ಥಗಿತಗೊಂಡಿವೆ.
ಈಗ ಕಾರ್ಯನಿರ್ವಹಿಸುತ್ತಿರುವ 1,293 ಸಹಕಾರ ಸಂಘಗಳ ಪೈಕಿ 5 ಕೃಷಿ ಸಹಕಾರ ಅಭಿವೃದ್ದಿ ಹಾಗೂ ಗ್ರಾಮೀಣ ಬ್ಯಾಂಕ್ 5 ಇದ್ದರೆ 125 ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಇವೆ. 26 ಇತರೇ ಪತ್ತಿನ ಸಹಕಾರ ಸಂಘಗಳಿವೆ, 4 ನೌಕರರ ಪತ್ತಿನ ಸಹಕಾರ ಸಂಘಗಳು, 5 ಟಿಎಪಿಸಿಎಂಎಸ್ ಸಹಕಾರ ಸಂಘಗಳು, 4 ಸಂಸ್ಕರಣ ಮಾಹಾರ ಸಹಕಾರ ಸಂಘ, 987 ಹಾಲು ಉತ್ಪಾದಕರ ಸಹಕಾರ ಸಂಘಗಳು, 5 ಮೀನುಗಾರಿಕೆ ಹಾಗೂ 35 ನೇಕಾರ ಸಹಕಾರ ಸಂಘಗಳು, 11 ಕೈಗಾರಿಕೆ, 8 ಗ್ರಾಹಕರ, 9 ಗೃಹ ನಿರ್ಮಾಣ, 14 ವಿದ್ದೋದ್ದೇಶ ಸೇರಿ ಒಟ್ಟು 12,93 ಸಹಕಾರ ಸಂಘಗಳು ಸಕ್ರಿಯವಾಗಿದ್ದು ಈ ಸಂಘಗಳ ಸದಸ್ಯರು ಯಶಸ್ವಿನಿ ಯೋಜನೆಯಡಿ ನೊಂದಾಯಿಸಲು ಅರ್ಹರಾಗಿದ್ದಾರೆ.
ತಾಲೂಕುವಾರು ಸದಸ್ಯರು ಎಷ್ಟು?
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರ ನೊಂದಣಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿರುವ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಟ್ಟು 50,000 ಗುರಿ ನೀಡಿದ್ದು ಆ ಪೈಕಿ ಚಿಕ್ಕಬಳ್ಳಾಪುರ ತಾಲೂಕಿಗೆ 9,000, ಶಿಡ್ಲಘಟ್ಟತಾಲೂಕಿಹೆ 10,000, ಚಿಂತಾಮಣಿ ತಾಲೂಕಿಗೆ 10,000, ಗೌರಿಬಿದನೂರು ತಾಲೂಕಿಗೆ 10,000, ಬಾಗೇಪಲ್ಲಿ ತಾಲೂಕಿಗೆ 9,000 ಹಾಗೂ ಗುಡಿಬಂಡೆ ತಾಲೂಕಿಗೆ 2,000 ಸೇರಿ ಒಟ್ಟು 50,000 ಸಾವಿರ ಸದಸ್ಯರನ್ನು ಹೊಸದಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ನೊಂದಾಯಿಸಲು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ತಾಲೂಕುವಾರು ಗುರಿ ನಿಗಧಿಪಡಿಸಿದ್ದಾರೆ.
ಸರ್ಕಾರ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಜಿಲ್ಲೆಗೆ ಒಟ್ಟು 50 ಸಾವಿರ ಹೊಸ ಸದಸ್ಯರ ನೊಂದಣಿ ಮಾಡುವ ಗುರಿ ನೀಡಿದ್ದು ಈಗಾಗಲೇ ನೊಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಒಟ್ಟು 1,293 ವಿವಿಧ ಬಗೆಯ ಸಹಕಾರ ಸಂಘಗಳಲ್ಲಿರುವ ಸದಸ್ಯರ ನೊಂದಣಿಗೆ ಕ್ರಮ ವಹಿಸಲಾಗಿದೆ.
ಬಿ.ಜಿ.ಮಂಜುಳ. ಜಿಲ್ಲಾ ಉಪ ನಿಬಂಧಕರು, ಸಹಕಾರ ಇಲಾಖೆ.
ರಾಜ್ಯದಲ್ಲಿ ಮತ್ತೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿ
ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬಿದ್ದ ಬೆನ್ನಲೇ ಜಿಲ್ಲೆಗೆ ಬರೋಬ್ಬರಿ 50 ಸಾವಿರ ಮಂದಿಯನ್ನು ಯಶಸ್ವಿನಿಗೆ ಸೇರಿಸಲು ಗುರಿ