ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ಸೊಸೆ ಜೈಲು ಸೇರಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಕುಣಿಗಲ್ (ನ.06): ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ಸೊಸೆ ಜೈಲು ಸೇರಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕೆಆರ್‌ಎಸ್ ಆಗ್ರಹಾರದ ವಾಸಿಯಾದ ಚಿಕ್ಕತಾಯಮ್ಮ ಮೇಲೆ ಸೊಸೆ ಸೌಮ್ಯ ಕಬ್ಬಿಣದ ಪೈಪ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಚಿಕ್ಕತಾಯಮ್ಮಗೆ ಶಿವಕುಮಾರ್ ಹಾಗೂ ಎನ್.ಶಂಕರ್ ಇಬ್ಬರು ಗಂಡು ಮಕ್ಕಳು. ಎನ್.ಶಂಕರ್ ಪತ್ನಿ ಸೌಮ್ಯ ಕುಣಿಗಲ್‌ನಲ್ಲಿ ವಾಸಿಸುತ್ತಿದು,್ದ ಬೆಂಗಳೂರಿನ ವಾಸಿ ಶಿವಕುಮಾರ್ ಮನೆಗೆ ತೆರಳುವಂತೆ ಅತ್ತೆ (Mother In law ) ಚಿಕ್ಕತಾಯಮ್ಮಳಿಗೆ ಪ್ರತಿದಿನ ಒತ್ತಾಯ ಮಾಡುತ್ತಿದ್ದಳು. ಸೊಸೆ ಸೌಮ್ಯಳ ವರ್ತನೆ ಯಿಂದ ಬೇಸತ್ತ ಅಕ್ಕಪಕ್ಕದವರು ಹಲವಾರು ಬಾರಿ ಬುದ್ದಿ ಹೇಳಿದ್ದರು ಪ್ರಯೋಜನವಾಗಿಲ್ಲ ಸೊಸೆ ಆಗಾಗ ಅತ್ತೆಯ ಮೇಲೆ ಹಲ್ಲೆ ( assaults ) ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಮನೆ ಬಿಡುವ ವಿಚಾರವಾಗಿ ಆರಂಭವಾದ ಜಗಳ ಶುಕ್ರವಾರ ವಿಕೋಪಕ್ಕೆ ತೆರಳಿ ಅತ್ತೆಯ ಮೇಲೆ ಸೊಸೆ ಹಲ್ಲೆ ಮಾಡಿದ್ದಾಳೆ. ಸೌಮ್ಯಳ ಮನೆಯಲ್ಲಿದ್ದ ಇಬ್ಬರು ಮಕ್ಕಳು ಅಳುತ್ತಾ ಮನೆಯಿಂದ ಹೊರಭಾಗಕ್ಕೆ ಬಂದಾಗ ಗಲಾಟೆ ವಿಚಾರ ಬೆಳಕಿಗೆ ಬಂದಿದೆ. ಮನೆ ಒಳಗೆ ಹೋದ ಸ್ಥಳೀಯರು ಅತ್ತೆ ಸೊಸೆ ಜಗಳ ಬಿಡಿಸಿ ಹಲ್ಲೆಗೆ ಒಳಗಾಗಿದ್ದ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಿದರು. ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸಹಪಾಠಿಗಳಿಂದಲೇ ವಿದ್ಯಾರ್ಥಿ ಮೇಲೆ ಹಲ್ಲೆ
ಆಂಧ್ರ ಪ್ರದೇಶದ (Andhra Pradesh) ಪಶ್ಚಿಮ ಗೋದಾವರಿ (West Godavari) ಜಿಲ್ಲೆಯ ಭೀಮಾವರಂನ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನಲ್ಲಿ (Engineering College Hostel) ವಿದ್ಯಾರ್ಥಿಯೊಬ್ಬನ (Student) ಮೇಲೆ ಮನಬಂದಂತೆ ಹಲ್ಲೆ (Beaten) ಮಾಡಲಾಗಿದೆ. ತನ್ನನ್ನು ಬಿಟ್ಟುಬಿಡಿ ಎಂದು ಆತ ಬೇಡಿಕೊಳ್ಳುತ್ತಿದ್ದರೂ, ನಾಲ್ವರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಈ ಸಂಬಂಧದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಈ ಹಿನ್ನೆಲೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ವಿಡಿಯೋದಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ತನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿದ್ದ ಹಾಗೂ ಕ್ಷಮೆ ಕೇಳುತ್ತಿದ್ದರೂ, ಕೋಲುಗಳಲ್ಲಿ ಆತನನ್ನು ಇತರ ವಿದ್ಯಾರ್ಥಿಗಳು ಹೊಡೆಯುತ್ತಿದ್ದಾರೆ. ಇನ್ನು, ಆತನ ಶರ್ಟ್ ಹರಿದುಹೋದಂತೆ ಕಾಣಿಸುತ್ತಿದ್ದು, ಅಲ್ಲದೆ ಅದನ್ನು ಬಿಚ್ಚುವಂತೆ ಹಲ್ಲೆ ಮಾಡುತ್ತಿರುವ ವಿದ್ಯಾರ್ಥಿಗಳು ಒತ್ತಾಯಿಸುತ್ತಿರುವುದನ್ನು ನೋಡಬಹುದಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿನಿ ಹಾಗೂ ಹಲ್ಲೆ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಆಂಧ್ರದ ಎಸ್‌ಆರ್‌ಕೆಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿದ್ದಾರೆ. ಈ ಘಟನೆ 2 ದಿನಗಳ ಹಿಂದೆ ನಡೆದಿದೆ ಎಂದೂ ವರದಿಯಾಗಿದೆ. ಇನ್ನು, ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವು: ಶಿಕ್ಷಕರೇ ಕಾರಣ ಎಂದು ಪೋಷಕರ ಆರೋಪ
ಆತನ ಮೈಮೇಲೆಲ್ಲ ಗಾಯಗಳಾಗಿರುವ ಗುರುತುಗಳಿದ್ದು, ಆತನ ಎದೆ ಹಾಗೂ ಕೈಗಳ ಮೇಲೆ ಬರೆ ಹಾಕಿರುವ ಗುರುತು ಸಹ ಇದೆ. ಅಂಕಿತ್‌ಗೆ ಬರೆ ಹಾಕಲು ಆ ನಾಲ್ವರು ವಿದ್ಯಾರ್ಥಿಗಳು ಐರನ್ ಬಾಕ್ಸ್ ಬಳಸಿದ್ದಾರೆ ಹಾಗೂ ಕೋಲುಗಳು, ಪಿವಿಸಿ ಪೈಪ್‌ಗಳಿಂದ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೂ, ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.
ಇದನ್ನೂ ಓದಿ: ಮಣಿಪಾಲ್‌ನಲ್ಲಿ ನೈತಿಕ ಪೊಲೀಸ್ ಗಿರಿ: ಕುಡಿದ ಕಾರಣಕ್ಕೆ ಯುವತಿಯ ಮೇಲೆ ಸಾಮೂಹಿಕ ಹಲ್ಲೆ
ಘಟನೆ ಖಾಸಗಿ ಹಾಸ್ಟೆಲ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಆದರೂ, ಈ ಸಂಬಂಧ ಎಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿಯನ್ನು ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನು ಓದಿ: Chhattisgarh: ಗೋಮಾಂಸ ಮಾರಾಟ ಮಾಡಿದ್ದಕ್ಕೆ ಇಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ
ಬೆಂಗಳೂರಿನಲ್ಲಿ ಶಾಲೆಯಲ್ಲೇ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ನಾಗೇಂದ್ರ ಅವರು, ತಮ್ಮ ಪತ್ನಿ ಹಾಗೂ ಇಬ್ಬರ ಮಕ್ಕಳ ಜತೆ ರಾಮಚಂದ್ರಪುರದಲ್ಲಿ ನೆಲೆಸಿದ್ದಾರೆ. ಮನೆ ಸಮೀಪದ ಶಾಲೆಯಲ್ಲಿ ಅವರ ಪುತ್ರಿ ನಿಶ್ಚಿತಾ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಸಮೀಪದ ಆಸ್ಪತ್ರೆಗೆ ನಿಶ್ಚಿತಾಳನ್ನು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾಳೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ನಿಶ್ಚಿತಾ ತಂದೆ ನಾಗೇಂದ್ರ ಅವರು ದೂರು ನೀಡಿದ್ದಾರೆ.