ಬೆಂಗಳೂರಲ್ಲಿ 21 ಎಕರೆ ಒತ್ತುವರಿ ಜಮೀನು ತೆರವು

By Kannadaprabha NewsFirst Published Mar 11, 2020, 8:05 AM IST
Highlights

ಬೆಂಗಳೂರಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಕೊಟ್ಯಂತರ ರು. ಮೌಲ್ಯದ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. 

ಯಲಹಂಕ [ಮಾ.11]: ಕಬಳಿಕೆಯಾಗಿದ್ದ 500 ಕೋಟಿ ರು. ಮೌಲ್ಯದ 21 ಎಕರೆ 19 ಗುಂಟೆ ಸರ್ಕಾರಿ ಭೂಮಿಯನ್ನು ತಾಲೂಕು ಆಡಳಿತವು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ.

ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ತಾಲೂಕು ಆಡಳಿತವು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ತಹಸೀಲ್ದಾರ್‌ ಎನ್‌.ರಘುಮೂರ್ತಿ ಮತ್ತು ಅಧಿಕಾರಿಗಳ ತಂಡ ಯಲಹಂಕ ಹೋಬಳಿ ಜಕ್ಕೂರು ಸಮೀಪದ ಚೊಕ್ಕನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ75/4ರ 21.19 ಎಕರೆ ಸರ್ಕಾರಿ ಗೋಮಾಳವನ್ನು ತನ್ನ ವಶಕ್ಕೆ ಪಡೆದು ನಾಮಫಲಕ ಅಳವಡಿಸಿದರು.

ಕರಗದ ಮೇಲೂ ಕರೋನಾ ಕರಿನೆರಳು; ಉತ್ಸವ ಆಚರಣೆ ಅನುಮಾನ.

ನಕಲಿ ದಾಖಲೆ ಹಕ್ಕುಪತ್ರ ಸೃಷ್ಟಿಸಿ ಕೋರ್ಟ್‌ಗೆ ಹೋಗಿದ್ದರು. ಸರ್ಕಾರ ಇವರ ವಿರುದ್ಧ ಮೇಲ್ಮನೆ ಸಲ್ಲಿಸಿ ದ್ವಿಸದಸ್ಯ ಪೀಠದಲ್ಲಿ ಹಕ್ಕುಪತ್ರಗಳು ಅಸಿಂಧು ಎಂದು ಅರ್ಜಿಯನ್ನು ವಜಾ ಮಾಡಿದ್ದರು. 

ಸರ್ಕಾರಿ ಜಮೀನಿಗೆ ಬೋರ್ಡ್‌ ಹಾಕಿದ್ದು, ನಿರ್ಮಿತ ಕೇಂದ್ರದಿಂದ ಬೇಲಿ ಕಾಂಪೌಂಡ್‌ ಹಾಕಲಾಗುವುದು. ಈ ಭೂಮಿಯ ಈಗಿನ ಮಾರುಕಟ್ಟೆಮೌಲ್ಯ 500 ಕೋಟಿಗೂ ಹೆಚ್ಚಿದೆ. ಈ ಜಾಗವನ್ನು ಸಾರ್ವಜನಿಕರ ಉದ್ದೇಶಕ್ಕೆ ನೀಡಲಾಗುವುದು. ಇದರಲ್ಲಿ 6 ಗುಂಟೆಯಲ್ಲಿ ಕಾನೂನು ಬಾಹಿರ ಬೇನಾಮಿ ಹೆಸರುಗಳಲ್ಲಿ ಶೆಡ್‌ ನಿರ್ಮಿಸಿದ್ದಾರೆ. ಇವುಗಳ ವಾರಸುದಾರರಿಗೆ ನೋಟಿಸ್‌ ನೀಡಿದ್ದು, ಶೀಘ್ರ ವಶಕ್ಕೆ ಪಡೆಯಲಾಗುತ್ತದೆ ಎಂದು ಯಲಹಂಕ ತಹಸೀಲ್ದಾರ್‌ ಎನ್‌.ರಘುಮೂರ್ತಿ ತಿಳಿಸಿದ್ದಾರೆ.

click me!