ಪೇಟಿಎಂ ಗ್ರಾಹಕರೇ ಯಾಮಾರೋಕು ಮುನ್ನ ಎಚ್ಚರ: ನಿಮಗೂ ಕರೆ ಬರಬಹುದು!

By Kannadaprabha News  |  First Published Mar 11, 2020, 7:34 AM IST

ಪೇಟಿಎಂ ಮೂಲಕ ವಂಚನೆ| ಹುಬ್ಬಳ್ಳಿಯಲ್ಲಿ ನಡೆದ ಘಟನೆ| ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚನೆ| 


ಹುಬ್ಬಳ್ಳಿ(ಮಾ.11): ಪೇಟಿಎಂ ಖಾತೆಯು ಎಕ್ಸಪೈರ್ ಆಗಿದ್ದು, ಹೆಚ್ಚಿನ ಮಾಹಿತಿಗೆ 6297579816ಗೆ ಸಂಪರ್ಕಿಸಿ ಎಂದು ಸಂದೇಶ ಕಳಿಸಿ ಬೇರೆ ಬೇರೆ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಿಸಿ 1,08,664.20 ವಂಚಿಸಿದ ಘಟನೆ ಈಚೆಗೆ ನಡೆದಿದೆ. 

ಕರೆ ಮಾಡಿದ ವ್ಯಕ್ತಿ ಎನಿಡೆಕ್ಸ್ ಆ್ಯಪ್ ಮತ್ತು ಕ್ವಿಕ್ ಸಪೋರ್ಟ್ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಿಸಿದ್ದಾನೆ. ಬಳಿಕ ಅದರ ಪಾಸ್ವರ್ಡ್ ಮಾಹಿತಿ ಪಡೆದು ಅದರ ಸಹಾಯದಿಂದ ವಿಜಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!