ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ, ಪ್ರತಿಯೊಂದು ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂಬುವುದೆ ಸರ್ಕಾರದ ಉದ್ದೇಶ ಎಂದು ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸಿರವಾರ (ಮಾ.04): ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ, ಪ್ರತಿಯೊಂದು ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂಬುವುದೆ ಸರ್ಕಾರದ ಉದ್ದೇಶ ಎಂದು ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಅಂಗನವಾಡಿ ಕೇಂದ್ರದ ಕೊಠಡಿಗಳ ನಿರ್ಮಾಣಕ್ಕೆ ಸಚಿವ ಬೋಸರಾಜು ಮತ್ತು ಶಾಸಕ ಜಿ.ಹಂಪಯ್ಯ ನಾಯಕ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಮಾತನಾಡಿದರು.
ಕೆಕೆಆರ್‌ಡಿಬಿ ಅನುದಾನದ ಎಸ್ಸಿಪಿ, ಟಿಎಸ್ಪಿ ಯೋಜನೆಡಿಯಲ್ಲಿ ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆ , ಅಂಗನವಾಡಿ ಕೇಂದ್ರಕ್ಕೆ ಕೊಠಡಿ ನಿರ್ಮಾಣ, ತಾಲೂಕಿನ ಅತ್ತನೂರು, ಮರಾಠ, ನವಲಕಲ್ಲು, ಹುಣಚೇಡ್, ವಡವಟ್ಟಿ, ಪಟಕಮನದೊಡ್ಡಿ, ಕುರುಕುಂದಾ, ಕಸನದೊಡ್ಡಿ, ಹೀರಾ, ಹುಡಾ, ಬುದ್ಧಿನಿ, ಚಿಂಚರಕಿ, ತೊಪ್ಪಲದೊಡ್ಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಒಟ್ಟು ₹4.37 ಕೋಟಿ ಅನುದಾನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ನನ್ನ ಮೈಚರ್ಮದಿಂದ ಚಪ್ಪಲಿ ಮಾಡಿ ಕೊಟ್ಟರೂ ಕನಕಗಿರಿಯ ಜನರ ಋಣ ತೀರಿಸಲು ಸಾಧ್ಯವಿಲ್ಲ: ಸಚಿವ ತಂಗಡಗಿ
ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಹಂಪಯ್ಯ ನಾಯಕ, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶರಣಯ್ಯ ನಾಯಕ ಗುಡದಿನ್ನಿ, ಚಂದ್ರು ಕಳಸ, ಶ್ರೀನಿವಾಸ, ಕಿರಿಲಿಂಗಪ್ಪ ಕವಿತಾಳ, ಶಿವುಕುಮಾರ ಚುಕ್ಕಿ, ಮಲ್ಲಿಕಾರ್ಜುನ ಮಲ್ಲಟ, ರಮೇಶ ದರ್ಶನಕರ್, ಶಿವಶರಣ ಅರಕೇರಿ, ಕಲ್ಲೂರು ಬಸವರಾಜ ನಾಯಕ, ಎನ್.ರೇಣುಕಾ, ಬಸವರಾಜ ಗಡ್ಲ, ಚನ್ನಬಸವ ಗಡ್ಲ, ನಾಗೋಲಿ ಚನ್ನಪ್ಪ, ಮೌಲಾಸಾಬ್ ವರ್ಚಸ್, ಅಬ್ರಹಂ ಹೊನ್ನಟಗಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
ಅಧ್ಯಯನ ಪೀಠಗಳ ಕಾರ್ಯಕ್ಕೆ ಚುರುಕು ಮುಟ್ಟಿಸಲು ಕ್ರಮ: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿರುವ ಅಧ್ಯಯನ ಪೀಠಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭಾನಾಯಕ ಎನ್.ಎಸ್. ಬೋಸರಾಜು ತಿಳಿಸಿದರು. ಅಧ್ಯಯನ ಪೀಠಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮಹನೀಯರ ಬಗ್ಗೆ ಅಧ್ಯಯನ, ಸಂಶೋಧನೆ ಮಾಡಲು ಸ್ಥಾಪಿಸಲಾಗಿರುವ ಅಧ್ಯಯನ ಪೀಠಗಳು ಸಮಾಧಿ ಪೀಠಗಳಾಗಿ ಮಾರ್ಪಟ್ಟಿವೆ.
ನಾನು ಉಡಾಫೆ ರಾಜಕಾರಣ ಮಾಡಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಅವುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಬಿಜೆಪಿಯ ಡಾ.ತಳವಾರ ಸಾಬಣ್ಣಾ ಅವರು ಸರ್ಕಾರದ ಗಮನ ಸೆಳೆದರು. ಅದಕ್ಕೆ ಉತ್ತರಿಸಿದ ಬೋಸರಾಜು, ವಿಶ್ವವಿದ್ಯಾಲಯಗಳಲ್ಲಿ 128 ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಅವುಗಳು ಕಾಲಕಾಲಕ್ಕೆ ವಿಚಾರ ಸಂಕಿರಣ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಿವೆ. ಆದರೂ, ಅಧ್ಯಯನ ಪೀಠದ ಕಾರ್ಯಕ್ಕೆ ಚುರುಕು ಮುಟ್ಟಿಸಲು ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.