ಶಿಕ್ಷಣದ ಅಭಿವೃದ್ಧಿಗೆ ಸರ್ಕಾರದ ಆದ್ಯತೆ: ಸಚಿವ ಸುಧಾಕರ್‌

By Govindaraj SFirst Published Aug 21, 2022, 11:58 PM IST
Highlights

ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 9 ಸಾವಿರ ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ 500 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. 

ದಾಬಸ್‌ಪೇಟೆ (ಆ.21): ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 9 ಸಾವಿರ ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ 500 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. 

ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ, ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಬಡವರಿಗೆ 75 ಯೂನಿಟ್‌ ವಿದ್ಯುತ್‌ ಉಚಿತವಾಗಿ ಸರ್ಕಾರ ನೀಡುತ್ತಿದೆ. ಭೂಮಿ ಹೊಂದಿರುವ ಪ್ರತಿ ರೈತನಿಗೆ ವಾರ್ಷಿಕವಾಗಿ ಕೇಂದ್ರ ಸರ್ಕಾರ 6 ಸಾವಿರ ಮತ್ತು ರಾಜ್ಯ ಸರ್ಕಾರ 4 ಸಾವಿರ ಸೇರಿ ಒಟ್ಟು ಹತ್ತು ಸಾವಿರ ರು.ಗಳನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ ಎಂದರು.

ಹೈಕೋರ್ಟ್ ನಿಂದ ಎಂಎಲ್ಸಿ ಮುನಿರಾಜುಗೌಡ ವಿರುದ್ಧದ ಕೇಸ್‌ ರದ್ದು

ನೆಲಮಂಗಲ ಉಪನಗರವಾಗಲಿ: ನೆಲಮಂಗಲ ಬೆಂಗಳೂರಿಗೆ ಹೊಂದಿಕೊಂಡಿದೆ, ಈ ಭಾಗದ ರೈತರ ಸ್ವಾಭಿಮಾನ ಹೆಚ್ಚಾಗಬೇಕು, ರೈತರ ಜಮೀನುಗಳಿಗೆ ಬೆಲೆ ಬಂದ ರೀತಿಯಲ್ಲಿ ರೈತರ ಮಕ್ಕಳಿಗೆ ಉದ್ಯೋಗ ಸಿಗುವಂತಾಗಬೇಕು. ಸ್ಯಾಟಿಲೈಟ್‌ ನಗರವಾಗಿ ನೆಲಮಂಗಲ ಅಭಿವೃದ್ಧಿಯಾಗಬೇಕು ಎಂಬ ಕನಸು ರಾಜ್ಯ ಸರ್ಕಾರಕ್ಕಿದ್ದು, ಇದಕ್ಕಾಗಿ ಪ್ರಾಮಾಣಿಕ ಸಹಕಾರ ನೀಡುವ ಮೂಲಕ ನೆಲಮಂಗಲವನ್ನು ಮಾದರಿ ಕ್ಷೇತ್ರವಾಗಿ ಮುಂದಿನ ದಿನಗಳಲ್ಲಿ ನೋಡಲಿದ್ದೀರಿ ಎಂದರು.

ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಮಾತನಾಡಿ ಅಂಬೇಡ್ಕರ್‌ರವರ ಆಶಯದಂತೆ ಎಲ್ಲಾ ವರ್ಗದ ಜನರಿಗೆ ಎಲ್ಲಾ ಸರ್ಕಾರದ ಸೌಲಭ್ಯಗಳು ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಇಲಾಖೆಯ ಅದಿಕಾರಿಗಳು ಜನರು ನೀಡಿದ ಮನವಿ ಪತ್ರಗಳನ್ನು ಪರಿಶೀಲಿಸಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಲತಾ ಮಾತನಾಡಿ ಕಳೆದ 15 ದಿನಗಳಿಂದ ನಮ್ಮ ಇಲಾಖೆಯ ಅಧಿಕಾರಿಗಳು 6000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಜನರಿಗೆ ವಸತಿ ನಿವೆಶನಗಳ ಹಕ್ಕು ಪತ್ರಗಳ ವಿತರಣೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ 14 ಹಳ್ಳಿಗಳ ಜನರಿಗೆ ಈ ಕಾರ್ಯಕ್ರಮದಿಂದ ಅನುಕೂಲವಾಗಿದ್ದು, ಮಣ್ಣೆ ಗ್ರಾಮದ ಇತಿಹಾಸವನ್ನು ಸಂರಕ್ಷಿಸುವಲ್ಲಿ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಸಂಪರ್ಕಿಸಿ ಮುಂದಿನ ಕಾರ‍್ಯವನ್ನು ಮಾಡಲಾಗುತ್ತದೆ ಎಂದರು.

ಕಾಮಗಾರಿ ಉದ್ಘಾಟನೆ: ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಜಿಲ್ಲಾದಿಕಾರಿಗಳ ಕಾರ್ಯಕ್ರಮದಲ್ಲಿ ಅನೇಕ ಸವಲತ್ತುಗಳು ಸಿಗುವಂತಾಗಿದೆ, ತಾವರೆಕೆರೆ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ, ಯರ್ರನಪಾಳ್ಯ ಮತ್ತು ಗೊಲ್ಲರಹಟ್ಟಿಗ್ರಾಮಗಳಲ್ಲಿ ಕುಡಿವ ನೀರಿನ ಘಟಕಗಳ ಉದ್ಘಾಟನೆ, ಮಣ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಯೋಗ ಮಂದಿರ ಮತ್ತು ಸಮಾಲೋಚಾನ ಕೇಂದ್ರದ ಉದ್ಘಾಟನೆ 5 ಗ್ರಾಮಗಳಿಗೆ ಸ್ಮಶಾನ ಭೂಮಿ ಹಂಚಿಕೆಯ ಪ್ರತ ವಿತರಣೆ, ಮಣ್ಣೆ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಉದ್ಯಾನವನ, ಗ್ರಾಮ ಪಂಚಾಯತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ಸಮುದಾಯ ಕಾಮಗಾರಿಗಳೊಗೆ ಚಾಲನೆ, 10 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಚಾಲನೆ ಹಾಗೂ 18 ಕೋಟಿ ರೂ ವೆಚ್ಚದ ನೆಲಮಂಗಲ ತಾಲೂಕಿನ ಜಲಜೀವನ್‌ ಮಿಷನ್‌ ಕಾಮಗಾರಿ ಸೇರಿದಂತ ಸುಮಾರು 89 ಲಕ್ಷ ರೂ ಮೌಲ್ಯದ ಕಾಮಗಾರಿಯನ್ನು ಉದ್ಘಾಟಿಸಿದರು.

ವಿದ್ಯಾರ್ಥಿಗಳು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು: ಜಿಲ್ಲಾಧಿಕಾರಿ ಆರ್.ಲತಾ

ವಸತಿ ಶಾಲೆಯಲ್ಲಿ ವಾಸ್ತವ್ಯ: ತ್ಯಾಮಗೊಂಡ್ಲು ಹೋಬಳಿಯ ಭೈರನಾಯಕನಹಳ್ಳಿ ಗ್ರಾಮದಲ್ಲಿನ ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿ ವರ್ಗ ವಾಸ್ತವ್ಯ ಮಾಡಲಿದ್ದಾರೆ. ಸಂಜೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್‌ ಮಂಜುನಾಥ್‌, ಇಒ ಮೋಹನ್‌ಕುಮಾರ್‌ ಇದ್ದರು.

click me!