ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡೋ ಬದಲು ಮುಸ್ಲಿಮರಿಗೆ ರಕ್ಷಣೆ ಕೊಡುತ್ತಿದೆ: ಯತ್ನಾಳ್‌

Published : Oct 05, 2023, 11:15 PM IST
ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡೋ ಬದಲು ಮುಸ್ಲಿಮರಿಗೆ ರಕ್ಷಣೆ ಕೊಡುತ್ತಿದೆ: ಯತ್ನಾಳ್‌

ಸಾರಾಂಶ

ಸರ್ಕಾರಕ್ಕೆ ತಾಕತ್ತಿದ್ದರೆ ಶಿವಮೊಗ್ಗದ ಗಲಾಟೆಗೆ ಕಾರಣರಾದವರ ವಿರುದ್ಧ ತೋರಿಸಲಿ ನೋಡೋಣ. ದೇಶ ನಾಶ ಮಾಡಲು ಬಾಬರ್‌ ಬಂದ, ಔರಂಗಜೇಬ್‌ ಬಂದ, ಮೊಘಲರು ಬಂದರೂ ಸಹ ಸನಾತನ ಧರ್ಮಕ್ಕೆ ಏನೂ ಮಾಡಲು ಆಗಲಿಲ್ಲ. ಈ ದೇಶದಲ್ಲಿರುವ ಹಿಂದೂಗಳು ಅಭಿಮಾನ ಪಡಬೇಕು ಎಂದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್‌ 

ಶಹಾಪುರ(ಅ.05):  ನಗರದ ಸುಬೇದಾರ್ ಆಸ್ಪತ್ರೆ ಆವರಣದಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ನಿಮಿತ್ತ ಬೃಹತ್ ಮಟ್ಟದಲ್ಲಿ ಭವ್ಯ ಶೋಭಾಯಾತ್ರೆ ಮಂಗಳವಾರ ನಡೆಯಿತು. ನಗರದ ಹಿಂದೂ ಮಹಾಗಣಪತಿ ಸಂಘ ಹಾಗೂ ಶ್ರೀರಾಮ ಸೇನೆ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಸತತ 21 ದಿನಗಳ ಕಾಲ ವಿಶೇಷ ಪೂಜೆ ಕೈಂಕರ್ಯಗಳ ಬಳಿಕ ನಡೆದ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆಯಲ್ಲಿ ಡಿಜೆ ಸದ್ದಿಗೆ ಎಲ್ಲರೂ ಕುಣಿದು ಕುಪ್ಪಳಿಸಿ ಸಂಭ್ರಮ ಹೆಚ್ಚಿಸಿದರು.

ಸಂಜೆ 4 ಗಂಟೆಗೆ ಶೋಭಾಯಾತ್ರೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಯುವಶಕ್ತಿ ಪ್ರದರ್ಶನ ಜೋರಾಗಿತ್ತು. ಈ ವೈಭವದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಗಣೇಶ, ಶ್ರೀರಾಮ, ಆಂಜನೇಯನ ಪುತ್ಥಳಿಯೊಂದಿಗೆ ವೀರ ಸಾವರ್ಕರ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಭಗತ್ ಸಿಂಗ್, ಸರ್ದಾರ್ ವಲ್ಲಭಬಾಯ ಪಟೇಲ್, ಕಿತ್ತೂರಾಣಿ ಚೆನ್ನಮ್ಮ ಆಕರ್ಷಕ ಭಾವಚಿತ್ರಗಳು ಗಮನ ಸೆಳೆದವು.

ಅಕ್ಕಿ ಫ್ರೀ, ಬಸ್‌ ಫ್ರೀ ಕೊಟ್ಟು, ಮದ್ಯ ಮಾರಿ ಹಣ ವಾಪಸ್‌: ಯತ್ನಾಳ್‌

ನೂರಾರು ಭಕ್ತರು ಪುತ್ಥಳಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಮೆರವಣಿಗೆಯುದ್ದಕ್ಕೂ ಗಣಪತಿ ಬಪ್ಪ ಮೋರೆಯಾ, ವಿನಾಯಕನಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು. ಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಒಬ್ಬರು ಡಿವೈಎಸ್ಪಿ, 10 ಜನ ಸಿಪಿಐಗಳು, 22 ಪಿಎಸ್‌ಐ, 40 ಎಎಸ್‌ಐ, ಪೊಲೀಸ್ ಹಾಗೂ ಹೆಡ್ ಕಾನ್ಸ್‌ಟೇಬಲ್ 250 ಜನ ಹಾಗೂ ಡಿಎಆರ್ 4 ತುಕಡಿ, ಕೆಎಸ್‌ಆರ್‌ಪಿ 2 ತುಕಡಿಗಳನ್ನು ಬಂದೋಬಸ್ತ್‌ಗೆ ನೇಮಿಸಲಾಗಿತ್ತು.

ಧರ್ಮರಕ್ಷಣೆಗೆ ಹಿಂದೂಗಳು ಮುಂದಾಗುವಂತೆ ಯತ್ನಾಳ್ ಕರೆ

ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕಾದರೆ, ಧರ್ಮದ ರಕ್ಷಣೆಗೆ ಹಿಂದೂಗಳು ಒಂದಾಗುವಂತೆ ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್‌ ಕರೆ ನೀಡಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್‌

ನಗರದಲ್ಲಿ ನಡೆದ ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆಯಲ್ಲಿ ಮಾತನಾಡಿದ ಅವರು, ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡೋ ಬದಲು ಮುಸ್ಲಿಮರಿಗೆ ರಕ್ಷಣೆ ಕೊಡುತ್ತಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ಶಿವಮೊಗ್ಗದ ಗಲಾಟೆಗೆ ಕಾರಣರಾದವರ ವಿರುದ್ಧ ತೋರಿಸಲಿ ನೋಡೋಣ. ದೇಶ ನಾಶ ಮಾಡಲು ಬಾಬರ್‌ ಬಂದ, ಔರಂಗಜೇಬ್‌ ಬಂದ, ಮೊಘಲರು ಬಂದರೂ ಸಹ ಸನಾತನ ಧರ್ಮಕ್ಕೆ ಏನೂ ಮಾಡಲು ಆಗಲಿಲ್ಲ. ಈ ದೇಶದಲ್ಲಿರುವ ಹಿಂದೂಗಳು ಅಭಿಮಾನ ಪಡಬೇಕು ಎಂದರು.

ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಬಾರದು. ನಮ್ಮ ಪೂರ್ವಜರು ಯಾವುದಕ್ಕೂ ಅಂಜದೇ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ಧವಾಗಿ ನಿಂತ ಪರಿಣಾಮ ನಾವು ಹಿಂದೂಗಳಾಗಿ ಉಳಿದಿದ್ದೇವೆ ಎಂದರು.

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!