ಗಂಗಾವತಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ, ಪಿಎಸ್ಐ, ಮುಖ್ಯಪೇದೆ ಸಸ್ಪೆಂಡ್‌

By Girish Goudar  |  First Published Oct 5, 2023, 10:39 PM IST

ಗಂಗಾವತಿ ನಗರ ಪೊಲೀಸ್ ಠಾಣೆಯ ಪಿಎಸ್ ಐ ಕಾಮಣ್ಣ ಮತ್ತು ಮುಖ್ಯ ಪೇದೆ ಮರಿಯಪ್ಪ ಎಂಬುವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧ ವಂಟಿಗೋಡೆ ಅವರು ಅಮಾನತು ಮಾಡಿದ್ದಾರೆ ಎಂದು ತಿಳಿಸಿದ ಡಿವೈಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ 


ಗಂಗಾವತಿ(ಅ.05):  ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂದೆ ಪೂಜೆ ಸಲ್ಲಿಸುತ್ತಿರುವದನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆಂಬ ಕಾರಣಕ್ಕೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಮುಖ್ಯ ಪೇದೆಯೊಬ್ಬರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧ ವಂಟಿಗೋಡೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಗರ ಪೊಲೀಸ್ ಠಾಣೆಯ ಪಿಎಸ್ ಐ ಕಾಮಣ್ಣ ಮತ್ತು ಮುಖ್ಯ ಪೇದೆ ಮರಿಯಪ್ಪ ಎಂಬುವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧ ವಂಟಿಗೋಡೆ ಅವರು ಅಮಾನತು ಮಾಡಿದ್ದಾರೆ ಎಂದು ಡಿವೈಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ತಿಳಿಸಿದ್ದಾರೆ. 

Latest Videos

undefined

ಮಸೀದಿ ಎದುರು ಹಿಂದೂ ಕಾರ್ಯಕರ್ತರಿಂದ ಮಂಗಳಾರತಿ: ಸ್ಥಳದಲ್ಲಿ ಡಿಸಿ, ಎಸ್ಪಿ ಮೊಕ್ಕಂ ಹೂಡಿ ಪರಿಸ್ಥಿತಿ ಹತೋಟಿಗೆ

ಕಳೆದ ಎರಡು ದಿನಗಳ ಹಿಂದೆ ಈದ್ಗಾ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜಾಮೀಯ ಮಸೀದಿ ಮಂದೆ ಗಣೇಶ ವಾಹನ ನಲ್ಲಿಸಿ ಕುಂಬಳಿಕಾಯಿ ಒಡೆದು ಪೂಜೆ ಸಲ್ಲಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪಿಎಸ್ಐ ಕಾಮಣ್ಣ ಮತ್ತು ಮುಖ್ಯ ಪೇದೆ ಮರಿಯಪ್ಪ ಅವರು ಇದನ್ನು ತಡೆಗಟ್ಟುವದು ಬಿಟ್ಟು ಏನು ಆಗವುದಿಲ್ಲ ಕೆಲ ನಿಮಿಷ ಪೂಜೆ ಸಲ್ಲಿಸಲಿ ಎಂದು ಮೆರವಣಿಗೆಯ ನೇತ್ರತ್ವ ವಹಿಸಿದ್ದವರಿಗೆ ತಿಳಿಸಿದ್ದೇ ಅಮಾನತಿಗೆ ಕಾರಣ ಎನ್ನಲಾಗಿದೆ.   

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಪಿ ಅವರು ಇಂದು(ಗುರುವಾರ) ರಾತ್ರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಇನ್ನೋರ್ವ ಅಧಿಕಾರಿಯೊಬ್ಬರನ್ನು ರಜೆ ಮೇಲೆ ಹೋಗಲು ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ. 

click me!