Belagavi Chalo: ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಚಿವ ಹೆಬ್ಬಾರ್‌

By Kannadaprabha News  |  First Published Dec 23, 2021, 6:21 AM IST

*   ಅರ​ಣ್ಯ​ವಾ​ಸಿ​ಗಳ ಸಮಸ್ಯೆ ಬಗೆ​ಹ​ರಿ​ಸಲು ಉನ್ನತ ಮಟ್ಟದ ಸಭೆ
*   ಅರ​ಣ್ಯ​ಭೂಮಿ ಹಕ್ಕು ಹೋರಾ​ಟ​ಗಾ​ರ​ರಿಂದ ಬೆಳ​ಗಾವಿ ಚಲೋ
*   ಸರ್ಕಾ​ರದ ಪರ​ವಾಗಿ ಮನವಿ ಸ್ವೀಕ​ರಿ​ಸಿದ ಸಚಿವ ಶಿವ​ರಾಮ ಹೆಬ್ಬಾರ್‌
 


ಶಿರಸಿ(ಡಿ.23):  ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಂದಿನ ಒಂದು ತಿಂಗಳದ ಒಳಗಾಗಿ ರಾಜ್ಯ ಮಟ್ಟದ ವಿವಿಧ ಸಚಿವರ ಮತ್ತು ಹೋರಾಟಗಾರರ ಉಪಸ್ಥಿಯಲ್ಲಿ ಉನ್ನತ ಮಟ್ಟದ ಸಭೆ ಬೆಂಗಳೂರಿನಲ್ಲಿ ಜರುಗಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರವು ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ದಿಶೆಯಲ್ಲಿ ಎಲ್ಲರ ಸಹಕಾರ ಬಯಸುತ್ತಿದೆ ಎಂದು ಕಾರ್ಮಿಕ ಇಲಾ​ಖೆ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದರು.

ಬೆಳಗಾವಿ(Belagavi) ತಾಲೂಕಿನ ಕೊಂಡಸ್ಕೊಪ್ಪದಲ್ಲಿ ಉತ್ತರ ಕನ್ನಡ(Uttara Kannada) ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬು​ಧ​ವಾ​ರ ಜರುಗಿದ ಬೃಹತ್‌ ಬೆಳಗಾವಿ ಚಲೋ(Belagavi Chalo) ಕಾರ್ಯಕ್ರಮದಲ್ಲಿ ಸರ್ಕಾ​ರದ(Government of Karnataka) ಪರವಾಗಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ನಿರಂತರ ಅರಣ್ಯವಾಸಿಗಳ(Forest Dwellers) ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಪ್ರಯತ್ನಿಸಿದಾಗಲೂ ಯಶಸ್ಸು ಸಿಗದೇ ಇರುವುದು ವಿಷಾದಕರ. ಈ ದಿಶೆಯಲ್ಲಿ ಕೇಂದ್ರ ಸರ್ಕಾರದ(Central Government) ಮೇಲೂ ಒತ್ತಡ ತರಲಾಗುವುದು ಎಂದು ಹೇಳಿದರು.

Latest Videos

undefined

Woman Nude Video Viral: ಮಹಿಳೆಯ ನಗ್ನ ವಿಡಿಯೋ ವೈರಲ್‌ ಮಾಡಿದ ಬಿಜೆಪಿ ಮುಖಂಡ

ಮೆರವಣಿಗೆ:

ಬೆಳಗಾವಿ ತಾಲೂಕಿನ, ಕೆಕೆ ಕೊಪ್ಪ ಕ್ರಾಸ್‌ನಿಂದ ಕೊಂಡಸ್ಕೊಪ್ಪ ಪ್ರತಿಭಟನಾ(Protest) ಸ್ಥಳದ ವರೆಗೂ ಜಿಲ್ಲಾದ್ಯಂತ ಆಗಮಿಸಿದ ಪ್ರತಿಭಟನಕಾರರು ಬೃಹತ್‌ ಮೆರವಣಿಗೆ, ರಾರ‍ಯಲಿ ನಡೆ​ಸಿ​ದ​ರು.

ಹತ್ತು ಹಕ್ಕೊತ್ತಾಯ:

ಅರಣ್ಯ ಹಕ್ಕು ಕಾಯಿದೆ(Forest Rights Act) ಅನುಷ್ಠಾನದಲ್ಲಿನ ವೈಫಲ್ಯ ಸರಿಪಡಿಸುವುದು, ಅರಣ್ಯ ಅಧಿಕಾರಿಗಳ ದೌರ್ಜನ್ಯ ನಿಯಂತ್ರಿಸುವುದು, ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಅರಣ್ಯ(Forest) ಪ್ರದೇಶ ಸೇರ್ಪಡೆಗೆ ವಿರೋಧ, ಅರಣ್ಯವಾಸಿಗಳ ಸೌಲಭ್ಯದಿಂದ ವಂಚಿತರಾಗದ ರೀತಿ ಕಾರ್ಯನಿರ್ವಹಿಸುವುದು, 1978ರ ಪೂರ್ವ ಅತಿಕ್ರಮಣದಾರರ ಹಕ್ಕುಪತ್ರ ಶೀಘ್ರ ವಿಲೇವಾರಿ ಮಾಡುವುದು, ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಇತ್ತೀಚಿನ 5 ವರ್ಷದಲ್ಲಿ 1 ಲಕ್ಷ ಮರ ಕಡಿತ ಅವೈಜ್ಞಾನಿಕ ನೀತಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ತನಿಖೆಗೆ ಅಗ್ರಹ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರನ್ನು ಮಂಜೂರಾತಿ ಪ್ರಕ್ರಿಯೆ ಮುಗಿಯುವ ವರೆಗೂ ಒಕ್ಕಲೆಬ್ಬಿಸಿರುವ ಪ್ರಕ್ರಿಯೆ ಸ್ಥಗಿತಗೊಳಿಸುವುದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯವಾಸಿ ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಭೆ ಜರುಗಿಸುವುದು, ಸುಪ್ರೀಂ ಕೋರ್ಟ್‌​ನಲ್ಲಿ(Supreme Court)ರಾಜ್ಯ ಸರ್ಕಾರ ಅರಣ್ಯವಾಸಿಗಳ ಪರ ಪ್ರಮಾಣಪತ್ರ ಸಲ್ಲಿಸುವುದು, ಅರಣ್ಯವಾಸಿಗಳ ಮೇಲೆ ದಾಖಲಿಸಿದ ಕ್ರಿಮಿನಲ್‌ ಪ್ರಕರಣ ಹಿಂದಕ್ಕೆ ಪಡೆಯುವುದು ಸೇರಿದಂತೆ ಅತಿಕ್ರಮಣದಾರರು ಹತ್ತಕ್ಕೂ ಅಧಿಕ ಬೇಡಿಕೆ ಈಡೇ​ರಿ​ಸು​ವಂತೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಂಕೋಲಾ ತಾಲೂಕು ಅಧ್ಯಕ್ಷ ಜಿ.ಎಂ. ಶೆಟ್ಟಿ, ಕುಮಟಾ ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ, ಯ​ಲ್ಲಾಪುರ ತಾಲೂ​ಕು ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಮುಂಡಗೋಡ ತಾಲೂ​ಕು ಅಧ್ಯಕ್ಷ ಶಿವಾನಂದ ಜೋಗಿ, ಜೋಯಿಡಾ ತಾಲೂ​ಕು ಅಧ್ಯಕ್ಷ ಸುಭಾಸ್‌ ಗಾವಡಾ, ರಾಜೇಶ ನೇತ್ರೆಕ​ರ, ರಾಜು ನರೇಬೈಲ್‌, ರಿಜವಾನ್‌, ಅಲಿಸಾಬ್‌ ಭಟ್ಕಳ, ಸಂತೋಷ ಗಾವಡಾ, ರಾಘವೇಂದ್ರ ನಾಯ್ಕ ಗುಳ್ಳಾಪುರ, ವಿಜಯ ಸಿದ್ದಿ ಮುಂತಾದವರು ಇದ್ದರು. ಬಳಿಕ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

Uttara Kannada: 'ಒಮಿಕ್ರೋನ್‌ ಸೋಂಕಿತ ದೇಶದಿಂದ ಆಗಮಿಸುವವರಿಗೆ ಮುದ್ರೆ'

ಅರಣ್ಯ ವಾಸಿಗಳಿಗೆ ಸೀಮೆಎಣ್ಣೆ ಪೂರೈಕೆ:

ಅರಣ್ಯ ವಾಸಿಗಳಿಗೆ ಸೀಮೆ ಎಣ್ಣೆ(Kerosene) ಪೂರೈಕೆಗೆ ಖಾಸಗಿ ಏಜೆನ್ಸಿಗಳಿಗೆ ಪರವಾನಿಗೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್‌ ಕತ್ತಿ(Umesh Katti) ತಿಳಿಸಿದ್ದಾರೆ.

ಬಿಜೆಪಿ ಸದಸ್ಯ ಶಾಂತಾರಾಮ ಸಿದ್ದಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿ ಪ್ರತಿಕ್ರಿಯೆ ನೀಡಿದ ಅವರು, ಅರಣ್ಯ ವಾಸಿಗಳು ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಅಡುಗೆ ಸಿದ್ಧಪಡಿಸಲು 2 ಲೀಟರ್‌ ಮತ್ತು ದೀಪಕ್ಕಾಗಿ 1 ಲೀಟರ್‌ ಸೀಮೆ ಎಣ್ಣೆ ನೀಡಲಾಗುತ್ತಿದೆ. ಆದರೆ, ಹೆಚ್ಚುವರಿ ಸೀಮೆಎಣ್ಣೆ ಅಗತ್ಯವಿದ್ದು, ಖಾಸಗಿ ಸಂಸ್ಥೆಗಳ ಪರವಾನಿಗೆ ನೀಡಲಾಗುವುದು. ಆ ಮೂಲಕ ಅರಣ್ಯವಾಸಿಗಳಿಗೆ ಅಗತ್ಯ ಪ್ರಮಾಣದ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು ಎಂದರು.
 

click me!