Bengaluru Suburban Rail: ಹೀಲಲಿಗೆ-ಯಲಹಂಕ-ರಾಜಾನುಕುಂಟೆ ಸಬ್‌ಅರ್ಬನ್‌ ರೈಲು ಕಾಮಗಾರಿ ಶೀಘ್ರ

By Kannadaprabha News  |  First Published Dec 23, 2021, 5:17 AM IST

*   ಟೆಂಡರ್‌ ಕರೆಯಲು ಕೆ-ರೈಡ್‌ ಸಿದ್ಧತೆ
*   ಈಗಾಗಲೇ ಸರ್ವೇ ಕಾರ್ಯ ಪೂರ್ಣ
*   ದೇವನಹಳ್ಳಿಯಲ್ಲಿ ರೈಲು ಡಿಪೋ
 


ಬೆಂಗಳೂರು(ಡಿ.23):  ‘ಬೈಯಪ್ಪನಹಳ್ಳಿ-ಚಿಕ್ಕ ಬಾಣವರ’ ಸಬ್‌ಅರ್ಬನ್‌ ರೈಲು(Suburban Rail) ಯೋಜನೆಯ ಸಿವಿಲ್‌ ಕಾಮಗಾರಿಗೆ ಇತ್ತೀಚೆಗೆ ಟೆಂಡರ್‌ ಕರೆದಿರುವ ಕರ್ನಾಟಕ(Karnataka) ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ಕೆ-ರೈಡ್‌) ಇದೀಗ ‘ಹೀಲಲಿಗೆ-ಯಲಹಂಕ- ರಾಜಾನುಕುಂಟೆ’ ನಡುವಿನ ಕಾಮಗಾರಿಗೆ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಂಡಿದೆ. ಸುಮಾರು 46 ಕಿಲೋಮೀಟರ್‌ ಮಾರ್ಗದಲ್ಲಿ ಸಬ್‌ ಅರ್ಬನ್‌ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ದ್ವಿ ಪಥ ಹಳಿ ಜೋಡಣೆ, ವಿದ್ಯುತ್‌ ಕಂಬಗಳ ತೆರವು, ಒಳಚರಂಡಿ ವ್ಯವಸ್ಥೆ ಬಗ್ಗೆ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, 3 ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆ- ರೈಡ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶಿ ಬ್ಯಾಂಕ್‌ಗಳಿಂದ ಸಾಲ:

Tap to resize

Latest Videos

ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಯೋಜನೆಗೆ ಜರ್ಮನಿ(Germany) ಮತ್ತ ಫ್ರಾನ್ಸ್‌(France) ಬ್ಯಾಂಕ್‌ಗಳು ಸಾಲ(Bank Loan) ನೀಡಲು ಮುಂದಾಗಿವೆ. ಕೇಂದ್ರ ಹಣಕಾಸು ಇಲಾಖೆ(Central Finance Department) ಅನುಮತಿ ದೊರೆತ ತಕ್ಷಣ ಸಾಲ ಮಂಜೂರಾಗಲಿದ್ದು, ಕಾಮಗಾರಿ ಚುರುಕುಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಬ್‌ಅರ್ಬನ್‌ ರೈಲು ತಕ್ಷಣಕ್ಕೆ ಓಡಲ್ಲ?

ದೇವನಹಳ್ಳಿಯಲ್ಲಿ ರೈಲು ಡಿಪೋ

ಸಬ್‌ ಅರ್ಬನ್‌ ರೈಲುಗಳಿಗಾಗಿ ಡಿಪೋಗಳನ್ನು ನಿರ್ಮಿಸಲು ಸರ್ಕಾರ 50 ಎಕರೆ ಜಮೀನು(Land) ಮಂಜೂರು ಮಾಡಿದೆ. ದೇವನಹಳ್ಳಿಯ ರೈಲು ನಿಲ್ದಾಣದಿಂದ ಕೇವಲ 300 ಮೀಟರ್‌ ದೂರದಲ್ಲಿ ಈ ಜಮೀನಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿದ್ದಾರೆ. ಜಮೀನು ಹಸ್ತಾಂತರಿಸಿದ ತಕ್ಷಣ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್‌ ಗಾರ್ಗ್‌ ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿದರು.

ಬೆಂಗಳೂರಲ್ಲಿ(Bengaluru) ಸಬ್‌ಅರ್ಬನ್‌ ರೈಲು ಯೋಜನೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಅಗತ್ಯವಿರುವ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೀಗ ಯೋಜನೆಯ ಕಾಮಗಾರಿಗಳಿಗೆ ಹಂತ ಹಂತವಾಗಿ ಟೆಂಡರ್‌ ಕರೆಯಲಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಅಂತ ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕ ಅಮಿತ್‌ಗಾರ್ಗ್‌ ತಿಳಿಸಿದ್ದಾರೆ.  

ಚಿಕ್ಕಬಳ್ಳಾಪುರಕ್ಕೆ ಸಬ್‌ಅರ್ಬನ್‌, ಮೆಟ್ರೋ ರೈಲು ವಿಸ್ತರಣೆ

ಚಿಕ್ಕಬಳ್ಳಾಪುರ:  ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು(Chikkaballapura) ಉಪ ನಗರವಾಗಿ ಅಭಿವೃದ್ಧಿ ಪಡಿಸುವ ದಿಕ್ಕಿನಲ್ಲಿ ತಮ್ಮ ಚಿಂತನೆ ಇದ್ದು, ದೇವನಹಳ್ಳಿವರೆಗೂ ಬರಲಿರುವ ಸಬ್‌ಅರ್ಬನ್‌ ಹಾಗೂ ಮೆಟ್ರೋ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲು ಎಲ್ಲ ಪ್ರಯತ್ನ ಮಾಡಲಾಗುವುದೆಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌(Dr K Sudhakar) ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಒಕ್ಕಲಿಗರ ಸಂಘದ ಸಯೋಗದೊಂದಿಗೆ ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ದಿನಾಚರಣೆಯಲ್ಲಿ ಮಾತನಾಡಿ, ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.

ಶೀಘ್ರ ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸೇವೆ : ಮಾಸಾಂತ್ಯಕ್ಕೆ ಟೆಂಡರ್

ಕ್ಷೇತ್ರದಲ್ಲಿ ದುಡಿಯುವ ಜನತೆಗೆ ಉದ್ಯೋಗ(Jobs) ಕಲ್ಪಿಸಬೇಕಿದೆ. ಅದಕ್ಕಾಗಿ ವಿಶೇಷ ಕೈಗಾರಿಕೆಗಳನ್ನು ಜಿಲ್ಲೆಗೆ ತರುವ ಪ್ರಯತ್ನ ನಡೆದಿದೆ. ಸದ್ಯದಲೇ ಕೆಲ ಕೈಗಾರಿಕೆಗಳು ಬರಲಿವೆ. ಜಿಲ್ಲೆಯ ಜನರ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ನೀರಾವರಿ ಕ್ಷೇತ್ರಗಳಿಗೆ ಒತ್ತು ಕೊಡಬೇಕಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ನಾಡಪ್ರಭು ಕೆಂಪೇಗೌಡರು ಜಾತಿ, ಯಾವುದೇ ಸಮಾಜ, ಮತಭೇದ ಮಾಡದೆ ಲೋಕಕಲ್ಯಾಣಕ್ಕಾಗಿ ಒಬ್ಬ ರಾಜನಾಗಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಚಿಂತನೆಯನ್ನು ಹೊಂದಿ ಕೆಲಸ ಮಾಡಿದವರು, ಎಲ್ಲರಿಗೂ ಉಪಯೋಗವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಹಲವು ಕೆರೆಗಳನ್ನು ನಿರ್ಮಿಸಿದ್ದಾರೆ ಎಂದರು.

ಚಿಕ್ಕ ಹಳ್ಳಿಯಾಗಿದ್ದ ಬೆಂದಕಾಳೂರನ್ನು ಒಂದು ಚೊಕ್ಕಟವಾದ, ಸುಂದರವಾದ ನಗರವನ್ನಾಗಿ ಬೆಂಗಳೂರನ್ನು ಸುಸಜ್ಜಿತ ವೈಜ್ಞಾನಿಕ ನಗರವನ್ನಾಗಿ ಬೆಳೆಸಿದ ಕೀರ್ತಿ ನಮ್ಮ ನಾಡಪ್ರಭು ಆವರಿಗೆ ಸಲ್ಲುತ್ತದೆ ಆ ಕಾರಣಕ್ಕಾಗಿ ನಾವು 21ನೇ ಶತಮಾನದಲ್ಲಿಯೂ ಸಹ ಅವರನ್ನು ಸ್ಮರಿಸಲೇಬೇ    ಕು ಎಂದರು.
 

click me!