ಬಸ್ ರೇಡ್ ಮಾಡಿದ ಇನ್ಸ್‌ಪೆಕ್ಟರ್: ಆತ್ಮಹತ್ಯೆಗೆ ಶರಣಾದ ಕಂಡಕ್ಟರ್‌

Suvarna News   | Asianet News
Published : Feb 10, 2020, 01:43 PM ISTUpdated : Feb 10, 2020, 01:47 PM IST
ಬಸ್ ರೇಡ್ ಮಾಡಿದ ಇನ್ಸ್‌ಪೆಕ್ಟರ್: ಆತ್ಮಹತ್ಯೆಗೆ ಶರಣಾದ ಕಂಡಕ್ಟರ್‌

ಸಾರಾಂಶ

ಇನ್ಸ್‌ಪೆಕ್ಟರ್ ಬಸ್ ರೇಡ್ ಮಾಡಿದ ಕಾರಣಕ್ಕೆ ಬಸ್ ಕಂಡಕ್ಟರ್ ಆತ್ಮಹತ್ಯೆ| ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದ ಘಟನೆ|ಕೊಪ್ಪಳ ಜಿಲ್ಲೆಯ ಯಲಬುರ್ಗಾ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಈರಪ್ಪ|

ರಾಯಚೂರು(ಫೆ.10): ಇನ್ಸ್‌ಪೆಕ್ಟರ್ ಬಸ್ ರೇಡ್ ಮಾಡಿದರು ಎಂಬ ಕಾರಣಕ್ಕೆ ಕಂಡಕ್ಟರ್‌ವೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಇಂದು(ಸೋಮವಾರ) ನಡೆದಿದೆ. ಈರಪ್ಪ (32) ಎಂಬುವರೇ ಆತ್ಮಹತ್ಯೆಗೆ ಶರಣಾದ ಬಸ್‌ ನಿರ್ವಾಹಕನಾಗಿದ್ದಾರೆ. 

ಈರಪ್ಪ ಅವರು ಇಂದು ಲಿಂಗಸೂಗೂರು ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಪಟ್ಟಣದ ಲಕ್ಷ್ಮಿ ಗುಡಿ ಬಳಿ ಇರುವ ಮರವೊಂದ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈರಪ್ಪ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಲಬುರ್ಗಾದಿಂದ ರಾಯಚೂರು ಜಿಲ್ಲೆಯಲ್ಲಿರುವ ಸುಕ್ಷೇತ್ರ ತಿಂಥಣಿ ಜಾತ್ರೆಗೆ ವಿಶೇಷ ಬಸ್ ಬೀಡಲಾಗಿತ್ತು. ಈ ವೇಳೆ ಟಿಕೆಟ್ ತೆಗೆದುಕೊಳ್ಳದೇ ಇದ್ದ ಕಂಡಕ್ಟರ್ ವಿರುದ್ಧ ಇನ್ಸ್ಪೆಕ್ಟರ್ ಕೇಸ್ ಹಾಕಿದ್ದರು. ಇನ್ಸ್‌ಪೆಕ್ಟರ್ ಕೇಸ್ ಹಾಕಿದಕ್ಕೆ‌ ಮನನೊಂದ ಕಂಡಕ್ಟರ್ ಈರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC