ಹುಚ್ಚನಾಯಿ ಕಡಿತದಿಂದ ಜನರ ಮೇಲೆ ದನಗಳ ದಾಳಿ| ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟಾ ಗ್ರಾಮದಲ್ಲಿ ನಡೆದ ಘಟನೆ| ದನಗಳನ್ನ ಜೀವಂತ ಸಮಾಧಿ ಮಾಡಿದ ಗ್ರಾಮಸ್ಥರು|
ರಾಯಚೂರು(ಫೆ.10): ಹುಚ್ಚು ನಾಯಿ ಕಡಿತದಿಂದ ದನಗಳು ಮನಬಂದಂತೆ ಜನರ ದಾಳಿ ಮಾಡಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಭಯಭೀತರಾದ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟಾ ಗ್ರಾಮದಲ್ಲಿ ನಡೆದಿದೆ.
ದನಗಳ ದಾಳಿಯಿಂದ ಭಯಭೀತರಾದ ಗ್ರಾಮಸ್ಥರು ಹುಚ್ಚು ನಾಯಿ ಕಡಿತಕ್ಕೆ ಒಳಗಾದ ದನಗಳನ್ನ ಜೀವಂತವಾಗಿ ಸಮಾಧಿ ಮಾಡಿದ್ದಾರೆ. ಗ್ರಾಮದ ಜನತೆ ಜೀವ ಭಯದಿಂದ ಜೆಸಿಬಿ ಮುಖಾಂತರ ನೆಲವನ್ನು ಅಗೆದು ದನಗಳನ್ನ ಜೀವಂತವಾಗಿ ಸಮಾಧಿ ಮಾಡಿದ್ದಾರೆ.ಹುಚ್ಚು ನಾಯಿ ಕಡಿತದಿಂದ ದನಗಳು ಸ್ವಾಧೀನ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಿ ಜನರ ಮೇಲೆ ದಾಳಿ ಮಾಡಿದ್ದಾವೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹುಚ್ಚು ನಾಯಿ ಕಡಿತದಿಂದ ದನಗಳು ಜನರ ಮೇಲೆ ದಾಳಿ ಮಾಡಿದ ಬಗ್ಗೆ ಸ್ಥಳೀಯರು ಪಶು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ, ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಜನರೇ ಖುದ್ದಾಗಿ ಹುಚ್ಚು ನಾಯಿ ದಾಳಿಗೊಳಗಾದ ದನಗಳನ್ನ ಜೀವಂತವಾಗಿ ಸಮಾಧಿ ಮಾಡಿದ್ದಾರೆ.