ಗೋಶಾಲೆ ನೆಲಸಮ: 300 ಹಸುಗಳು ಬೀದಿಪಾಲು

By Kannadaprabha NewsFirst Published Mar 5, 2021, 8:03 AM IST
Highlights

ಗೋವುಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಗೋಶಾಲೆ ನೆಲಸಮ| ಮಂಗಳೂರಿನ ಕೆಂಜಾರಿನಲ್ಲಿ ನಡೆದ ಘಟನೆ| ಗೋಶಾಲೆಯಲ್ಲಿ 102 ಕಪಿಲಾ ತಳಿಯ ಹಸುಗಳು ಸೇರಿದಂತೆ ಸುಮಾರು 300 ಹಸುಗಳು ಇದ್ದವು| 

ಮಂಗಳೂರು(ಮಾ.05): ಕೇಂದ್ರ ಸರ್ಕಾರದ ಕೋಸ್ಟ್‌ ಗಾರ್ಡ್‌ ತರಬೇತಿ ಅಕಾಡೆಮಿಗಾಗಿ ಸರ್ಕಾರಿ ಜಾಗ ಅತಿಕ್ರಮಿಸಿದ ಆರೋಪದಲ್ಲಿ ಮಂಗಳೂರಿನ ಕೆಂಜಾರಿನಲ್ಲಿರುವ ಕಪಿಲಾ ಗೋ ಶಾಲೆಯನ್ನು ಗುರುವಾರ ನೆಲಸಮ ಮಾಡಲಾಗಿದೆ. 

ಗೋವುಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಗೋಶಾಲೆ ನೆಲಸಮ ಮಾಡಿರುವ ಪರಿಣಾಮ 300 ಗೋವುಗಳು ನೆಲೆ ಇಲ್ಲದೇ ಬೀದಿಪಾಲಾಗಿವೆ.

ಸಚಿವರ ಸೂಚನೆಯಂತೆ ಸಭೆ; ಕುಕ್ಕೆ ಶಿವರಾತ್ರಿ ಆಚರಣೆ ವಿವಾದಕ್ಕೆ ತೆರೆ!

ಮಂಗಳೂರಿನ ಸಹಾಯಕ ಕಮಿಷರ್‌ ಮದನ್‌ ಮೋಹನ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುರುವಾರ ಬೆಳಗ್ಗೆ ಗೋವುಗಳನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭದಲ್ಲಿ ತೆರವು ಕಾರ್ಯಾಚಣೆ ನಡೆದಿದೆ. ಮೇಯಲು ಹೋದ ಗೋವುಗಳು ಸಂಜೆ ವೇಳೆ ವಾಪಸ್‌ ಆದಾಗಿದ್ದವು. ಆದರೆ, ಗೋ ಶಾಲೆ ತೆರವಾಗಿರುವುದರಿಂದ ಗೋವುಗಳು ಅಸಾಯಕವಾಗಿ ನಿಂತಿದ್ದವು. ಇಲ್ಲಿ ಅತ್ಯಂತ ಅಪರೂಪದ 102 ಕಪಿಲಾ ತಳಿಯ ಹಸುಗಳು ಸೇರಿದಂತೆ ಸುಮಾರು 300 ಹಸುಗಳು ಇದ್ದವು.
 

click me!